ಕುಡಿಯಲು ಮದ್ಯ ಸಿಗದ ಕಾರಣಕ್ಕಾಗಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಮತ್ತೊಂದು ಪ್ರಕರಣ ಶನಿವಾರ ಜಿಲ್ಲೆಯಲ್ಲಿ ನಡೆದಿದೆ. ಕಡೂರು ತಾಲೂಕಿನ ಗುಬ್ಬಿಹಳ್ಳಿಯ ನಿವಾಸಿ ಭೀಮಾ ನಾಯ್ಕ (55) ಮೃತಪಟ್ಟವ್ಯಸನಿ.
ಚಿಕ್ಕಮಗಳೂರು(ಏ.05): ಕುಡಿಯಲು ಮದ್ಯ ಸಿಗದ ಕಾರಣಕ್ಕಾಗಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಮತ್ತೊಂದು ಪ್ರಕರಣ ಶನಿವಾರ ಜಿಲ್ಲೆಯಲ್ಲಿ ನಡೆದಿದೆ. ಕಡೂರು ತಾಲೂಕಿನ ಗುಬ್ಬಿಹಳ್ಳಿಯ ನಿವಾಸಿ ಭೀಮಾ ನಾಯ್ಕ (55) ಮೃತಪಟ್ಟವ್ಯಸನಿ.
ಜೀವನಕ್ಕಾಗಿ ಕೂಲಿ ಕೆಲಸ ಮಾಡುತ್ತಿದ್ದ ಭೀಮಾನಾಯ್ಕ ಮದ್ಯವ್ಯಸನಿಯಾಗಿದ್ದರು. ಕೊರೋನಾ ವೈರಸ್ ನಿಯಂತ್ರಣದ ಹಿನ್ನಲೆಯಲ್ಲಿ ಲಾಕ್‌ಡೌನ್ ಮಾಡಿದ್ದರಿಂದ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.
ಮಾಜಿ ಸಚಿವ ರೇವಣ್ಣಗೆ ಕ್ಯಾಂಡಲ್ಸ್ ಕಳಿಸಿದ ಬಿಜೆಪಿ
ಪ್ರತಿ ನಿತ್ಯ ಮದ್ಯ ಕುಡಿದು ಭೀಮಾನಾಯ್ಕ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಲಾಕ್ ಡೌನ್ ಮಾಡಿದ ದಿನದಿಂದ ಮದ್ಯ ಸಿಕ್ಕಿಲ್ಲ. ಇದರಿಂದ ಬೇಸತ್ತು ಶನಿವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಖರಾಯಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.