ಮಹಿಳೆ ದೇಹ ಮುಟ್ಟಿ ಅಸಭ್ಯ ವರ್ತನೆ : ಆರೋಪಿ ಹಿಡಿದ ಮಹಿಳಾ ಕಾನ್ ಸ್ಟೇಬಲ್

Kannadaprabha News   | Asianet News
Published : Dec 17, 2019, 08:11 AM IST
ಮಹಿಳೆ ದೇಹ ಮುಟ್ಟಿ ಅಸಭ್ಯ ವರ್ತನೆ : ಆರೋಪಿ ಹಿಡಿದ ಮಹಿಳಾ ಕಾನ್ ಸ್ಟೇಬಲ್

ಸಾರಾಂಶ

ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಆಕೆ ದೇಹದ ಭಾಗಗಳನ್ನು ಮುಟ್ಟಿ ಬಲವಂತವಾಗಿ ಕಾರೊಳಗೆ ಕೂರಿಸಿಕೊಳ್ಳಲು ಯತ್ನಿಸಿದ ವ್ಯಕ್ತಿಯನ್ನು ಮಹಿಳಾ ಪೇದೆಯೊಬ್ಬರು ಹಿಡಿದಿದ್ದಾರೆ. 

ಬೆಂಗಳೂರು [ಡಿ.17]:  ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿ ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಳ್ಳಲು ಯತ್ನಿಸಿದ ಆರೋಪಿಯೊಬ್ಬನನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಯನಗರ ನಿವಾಸಿ ಜಯಕುಮಾರ್‌ ರಾವ್‌ (33) ಬಂಧಿತ ಆರೋಪಿ.

ಮಹಿಳೆಯೊಬ್ಬರು ಡಿ.14ರಂದು ಸಿಟಿ ಸಿವಿಲ್‌ ಕೋರ್ಟ್‌ ಬಳಿ ಕಾರು ನಿಲುಗಡೆ ಮಾಡಿದ್ದರು. ರಾತ್ರಿ 8.30ರ ಸುಮಾರಿಗೆ ಸಿಟಿ ಸಿವಿಲ್‌ ನ್ಯಾಯಾಲಯದ ಬಳಿಯ ಮೆಟ್ರೋ ಸ್ಟೇಷನ್‌ ಪಕ್ಕದಲ್ಲಿ ನಿಲ್ಲಿಸಿದ್ದ ತಮ್ಮ ವಾಹನದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಟೊಯೊಟೋ ಕಾರಿನಲ್ಲಿ ಬಂದ ಆರೋಪಿ ಮಹಿಳೆಗೆ, ತನ್ನ ಕಾರು ಹತ್ತಿ, ಡ್ರಾಪ್‌ ಮಾಡುತ್ತೇನೆ ಎಂದು ಹೇಳಿದ್ದಾನೆ. 

ಸೈಬರ್ ಪ್ರಕರಣದಿಂದ ಪಾರಾಗಲು ಪೊಲೀಸ್ ಕಮಿಷನರ್ ಮಹತ್ವದ ಸಲಹೆ!.

ಮಹಿಳೆ ನನ್ನ ಕಾರಿದ್ದು, ಹೋಗುವುದಾಗಿ ಹೇಳಿದ್ದಾರೆ. ಆದರೂ ಬಿಡದ ಆರೋಪಿ ಕಾರು ಚಾಲಕ ಮಹಿಳೆಯ ಎದೆ ಭಾಗ ಮುಟ್ಟಿಅಸಭ್ಯ ವರ್ತಿಸಿ ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಳ್ಳಲು ಯತ್ನಿಸಿದ್ದಾನೆ. ಮಹಿಳೆ ಜೋರಾಗಿ ಚೀರಿಕೊಂಡಿದ್ದು, ಅಲ್ಲಿಯೇ ಸಮೀಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ಹೈಗ್ರೌಂಡ್ಸ್‌ ಠಾಣೆ ಮಹಿಳಾ ಕಾನ್‌ಸ್ಟೇಬಲ್‌ ಮಹಿಳೆ ಆರೋಪಿಯನ್ನು ಹಿಡಿದಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಈ ಸಂಬಂಧ ಹಲಸೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!