ಪ್ರತಿಷ್ಠಿತ ಕುಟುಂಬ ಟಾರ್ಗೆಟ್ : ಮಹಿಳೆಯರಿಗೆ ಮೊಬೈಲ್ ಮೂಲಕ ಇಂತಹ ಚಿತ್ರ ರವಾನೆ

Kannadaprabha News   | Asianet News
Published : Nov 08, 2020, 03:38 PM IST
ಪ್ರತಿಷ್ಠಿತ ಕುಟುಂಬ ಟಾರ್ಗೆಟ್ :  ಮಹಿಳೆಯರಿಗೆ ಮೊಬೈಲ್ ಮೂಲಕ ಇಂತಹ ಚಿತ್ರ ರವಾನೆ

ಸಾರಾಂಶ

ಪ್ರತಿಷ್ಠಿತ ಕುಟುಂಬ ಟಾರ್ಗೆಟ್ ಮಾಡಿಕೊಂಡು ಅಶ್ಲೀಲ ಚಿತ್ರ ಕಳಿಸುತ್ತಿದ್ದವ ಈಗ ಜೈಲು ಸೇರಿದ್ದಾನೆ. ಏನಿವನ ವಿಚಾರ?

ಚಳ್ಳಕೆರೆ (ನ.08):  ತನ್ನ ಮೊಬೈಲ್‌ ಮೂಲಕ ಮಹಿಳೆಯರಿಗೆ ಅಶ್ಲೀಲ ಚಿತ್ರ ರವಾನಿಸುತ್ತಿದ್ದ ವ್ಯಕ್ತಿಯನ್ನು ಶುಕ್ರವಾರ ಬಂಧಿಸಿರುವ ಪೊಲೀಸರು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

 ನಗರದ ಹೌಸಿಂಗ್‌ ಬೋರ್ಡ್‌ ಕಾಲೋನಿ ನಿವಾಸಿ ದೊಡ್ಡ ಉಳ್ಳಾರ್ತಿ ಮೂಲದ ರಾಮಕೃಷ್ಣ (55) ಬಂಧಿತನಾಗಿದ್ದು, ನಗರದ ಕೆಲವು ಪ್ರತಿಷ್ಠಿತ ಕುಟುಂಬಗಳ ಮಹಿಳೆಯರಿಗೆ ಅಶ್ಲೀಲ ಚಿತ್ರ ರವಾನಿಸಿದ್ದ ಬಗ್ಗೆ ಪೊಲೀಸರಿಗೆ ಕೆಲವು ಮಹಿಳೆಯರು ದೂರು ನೀಡಿದ್ದರು.

ಪಕ್ಕದ ಮನೆಯಲ್ಲಿ ಪ್ರೇಮಾಂಕುರ : 14ರ ಬಾಲಕನಿಂದ 12ರ ಬಾಲಕಿ ಗರ್ಭಿ​ಣಿ! .

 ಪಿಎಸ್‌ಐ-2 ಮಂಜುನಾಥ ಅರ್ಜುನ ಲಿಂಗಾರೆಡ್ಡಿ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಪಿ ಪತ್ತೆಹಚ್ಚಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವ್ಯಕ್ತಿಯನ್ನು ಇದೀಗ ವಿಚಾರಣೆಗೆ ಒಳಪಡಿಸಲಾಗಿದೆ. 
 
 

PREV
click me!

Recommended Stories

ಉಡುಪಿ: ಧರ್ಮ-ಸಂವಿಧಾನ ಬೇರೆಯಲ್ಲ:-ಪವನ್ ಕಲ್ಯಾಣ ಬಣ್ಣನೆ
ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?