ಮಹಿಳಾ ಎಸ್‌ಐನ ಮಂಚಕ್ಕೆ ಕರೆದವನ ಬಂಧನ!

By Kannadaprabha News  |  First Published Jan 17, 2020, 7:52 AM IST

ಮಹಿಳಾ ಪಿ ಎಸ್ ಐ ಓರ್ವರನ್ನು ಮಂಚಕ್ಕೆ ಕರೆದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಿಯತಮೆಗೆ ಸಹಾಯ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. 


ಬೆಂಗಳೂರು [ಜ.17]:  ಮಹಿಳಾ ಸಬ್‌ ಇನ್‌ಸ್ಪೆಕ್ಟರ್‌ನನ್ನು ಮಂಚಕ್ಕೆ ಕರೆದು ಬೆದರಿಕೆವೊಡ್ಡಿದ್ದ ಆರೋಪಿ ವಿದ್ಯಾರಣ್ಯಪುರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಗೌರಿಬಿದನೂರು ಮೂಲದ ಕಮಲಾನಗರದ ನಿವಾಸಿ ರಾಮಕೃಷ್ಣ (35) ಬಂಧಿತ.

Latest Videos

undefined

ಆರೋಪಿ ಕಳೆದ 10 ದಿನಗಳಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ. ಗುರುವಾರ ಆರೋಪಿಯ ಟವರ್‌ ಲೊಕೇಶನ್‌ ಪರಿಶೀಲಿಸಿದಾಗ ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿ ಇರುವುದು ಪತ್ತೆಯಾಗಿದೆ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಆವರಣದಲ್ಲೇ ಬಂಧಿಸಿ, ಕರೆ ತಂದಿದ್ದಾರೆ.

ವಿದ್ಯಾರಣ್ಯಪುರದಲ್ಲಿ ಮಹಿಳಾ ಹೋಂ ಗಾರ್ಡ್‌ ಜತೆ ಆರೋಪಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಕೆಲಸದ ವಿಚಾರವಾಗಿ ಮಹಿಳಾ ಸಬ್‌ ಇನ್‌ಸ್ಪೆಕ್ಟರ್‌ ಹೋಂಗಾರ್ಡ್‌ ಸರಿಯಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೋಂಗಾರ್ಡ್‌ ಸಬ್‌ ಇನ್‌ಸ್ಪೆಕ್ಟರ್‌ ಮೇಲೆ ಕೋಪಗೊಂಡಿದ್ದಳು.

ಹೋಂಗಾರ್ಡ್‌ ತನ್ನ ಪ್ರಿಯಕರನಿಗೆ ಸಬ್‌ ಇನ್‌ಸ್ಪೆಕ್ಟರ್‌ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಳು. ಪ್ರಿಯತಮೆಯ ಮೇಲಿನ ವ್ಯಾಮೋಹದಿಂದ ಆರೋಪಿ ಮಹಿಳಾ ಸಬ್‌ ಇನ್‌ಸ್ಪೆಕ್ಟರ್‌ ಮೊಬೈಲ್‌ ಸಂಖ್ಯೆ ಪಡೆದು ಜ.7ರಂದು ರಾತ್ರಿ ಮಹಿಳಾ ಪಿಎಸ್‌ಐಗೆ ಕರೆ ಮಾಡಿದ್ದ. ಈ ವೇಳೆ ಆರೋಪಿ ‘ಲಾಡ್ಜ್‌ಗೆ ಬರುತ್ತೀರಾ? ಎಷ್ಟುಬೇಕು ಹೇಳು ಕೊಡುತ್ತೇನೆ’ ಎಂದಿದ್ದ. ಆ ವೇಳೆ ‘ನಾನು ಯಾರೆಂದು ಗೊತ್ತೇನೋ ನಿನಗೆ’ ಎಂದು ಪಿಎಸ್‌ಐ ಗದರಿಸಿದಾಗ, ಆರೋಪಿಯು ಇವರ ಹೆಸರನ್ನು ಹೇಳಿದ್ದ. ‘ನನ್ನ ಮೊಬೈಲ್‌ ನಂಬರ್‌ ಯಾರು ಕೊಟ್ಟಿರುವುದು’ ಎಂದು ಪ್ರಶ್ನಿಸಿದಾಗ, ಪುಟ್ಟಮ್ಮ ಕೊಟ್ಟಿರುವುದಾಗಿ ಹೇಳಿದ್ದ.

ಮಹಿಳಾ ಎಸ್‌ಐಯನ್ನೇ ಮಂಚಕ್ಕೆ ಕರೆದ! ಅಶ್ಲೀಲ ಫೊಟೊ ಕಳಿಸಿ ಬ್ಲ್ಯಾಕ್‌ಮೇಲ್‌..

ಆತನಿಗೆ ಬೈದು ಪಿಎಸ್‌ಐ ಮೊಬೈಲ್‌ ಕರೆ ಕಡಿತಗೊಳಿಸಿದ್ದರು. ಇದಾದ ಕೆಲ ಹೊತ್ತಿನ ಬಳಿಕ ಪುಟ್ಟಮ್ಮಳ ನಗ್ನ ಫೋಟೋಗಳನ್ನು ಪಿಎಸ್‌ಐ ಮೊಬೈಲ್‌ಗೆ ಕಳಿಸಿ, ಮತ್ತೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದ. ಅಲ್ಲದೆ, ಜ.8ರಂದು ಮಧ್ಯಾಹ್ನ 12ಕ್ಕೆ ನಾನು ಹೇಳಿದ ಜಾಗಕ್ಕೆ ಒಂದು ಲಕ್ಷ ತರಬೇಕು. ಇಲ್ಲದಿದ್ದರೆ ನಿಮ್ಮ ಬಗ್ಗೆ ಇಲ್ಲ-ಸಲ್ಲದ ಆರೋಪ ಹೊರಿಸುವುದಾಗಿ ಹೇಳಿದ್ದ. ಇದರಿಂದ ನೊಂದ ಪಿಎಸ್‌ಐ ಈ ಬಗ್ಗೆ ದೂರು ನೀಡಿದ ಬಳಿಕ, ಪೊಲೀಸರು ಪುಟ್ಟಮ್ಮಳನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಇನ್ನು ತಲೆಮರೆಸಿಕೊಂಡಿದ್ದ ಆರೋಪಿ ಇದೀಗ ಬಲೆಗೆ ಬಿದ್ದಿದ್ದಾನೆ.

ಜೇಬು ಕಳ್ಳನೊಂದಿಗೆ ಲವ್ವಿಡವ್ವಿ!

ಬಂಧಿತ ರಾಮಕೃಷ್ಣ ಜೇಬು ಕಳ್ಳತ ಮಾಡುತ್ತಿದ್ದ. ಈತನ ಮೇಲೆ ಕಳ್ಳತನ ಪ್ರಕರಣಗಳಿವೆ. ಕಳವು ಪ್ರಕರಣದಲ್ಲಿ ಜೈಲು ಸೇರಿದ್ದ ರಾಮಕೃಷ್ಣನಿಗೆ ಜೈಲಿನಲ್ಲಿ ಮಹಿಳಾ ಹೋಂಗಾರ್ಡ್‌ ಪರಿಚಯವಾಗಿತ್ತು. ಇಬ್ಬರ ಸ್ನೇಹ ಬಳಿಕ ಪ್ರೀತಿಗೆ ತಿರುಗಿ, ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಮಹಿಳಾ ಸಬ್‌ ಇನ್ಸ್‌ಪೆಕ್ಟರ್‌ ನನಗೆ ತೊಂದರೆ ಕೊಡುತ್ತಿದ್ದಾರೆ ಎಂದು ಪ್ರಿಯತಮೆ ಹೇಳಿಕೊಂಡಿದ್ದಳು. ಹೀಗಾಗಿ ಕರೆ ಮಾಡಿ ಬೆದರಿಸಿದೆ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಜನವರಿ 17ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!