ಕೈ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ವಿರುದ್ಧ ಗಂಭೀರ ಆರೋಪ ಎದುರಾಗಿದೆ. ಮುಖಂಡರೋರ್ವರು ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿ (ನ.17): ಶಾಸಕ ಬಸವರಾಜ್ ಮತ್ತಿಮೂಡ್ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗ್ತಿದೆ ಎಂದು ಕಲಬುರಗಿಯಲ್ಲಿ ಐಪಿಎಲ್ ಬೆಟ್ಟಿಂಗ್ ಅಡ್ಡೆ ಮೇಲೆ ಸೋಲಾಪುರ ಪೊಲೀಸರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಪ್ರತಿಕ್ರಿಯಿಸಿದ್ದಾರೆ.
ಅಧಿಕಾರ ದುರುಪಯೋಗ ಪಡಿಸಿಕೊಂಡು ಎಫ್‌ಐಆರ್‌ನಲ್ಲಿ ಹೆಸರು ಇಲ್ಲದಿದ್ದರೂ ಶಾಸಕರ ಪತ್ನಿ ಜಯಶ್ರೀ ಮತ್ತಿಮೂಡ್ ಹೆಸರಿನಲ್ಲಿದ್ದ ಕಾರನ್ನ ಸೀಜ್ ಮಾಡಿದ್ದಾರೆ. ಇದರ ಹಿಂದೆ ಮಾಜಿ ಸಚಿವ ಪ್ರೀಯಾಂಕ್ ಖರ್ಗೆ ಕೈವಾಡವಿದೆ. ಮಹಾರಾಷ್ಟ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಈ ಕೃತ್ಯ ಎಸಗಲಾಗಿದೆ ಎಂದು ಪ್ರೀಯಾಂಕ್ ಖರ್ಗೆ ವಿರುದ್ಧ ನೇರವಾಗಿ ಮಾಲೀಕಯ್ಯ ಗುತ್ತೇದಾರ್ ಆರೋಪ ಮಾಡಿದ್ದಾರೆ.
ಜೆಡಿಎಸ್ ವಲಯದಿಂದ ಮಹತ್ವದ ಸುದ್ದಿ : ಬಿಜೆಪಿಗೆ ಕೈ ಜೋಡಿಸಲು ಮುಂದಾದ್ರ ಗೌಡ್ರು ..
ಮತ್ತಿಮೂಡ್ ಅವರ ಜನಪ್ರಿಯತೆ ಸಹಿಸಲು ಆಗದ ಪ್ರೀಯಾಂಕ್ ಖರ್ಗೆ ಜಿಲ್ಲೆಯಲ್ಲಿ ತಾವೇ ಬೆಳೆಯಬೇಕು ಎಂದು ಬೇರೆಯವರ ಬೆಳವಣಿಗೆ ಸಹಿಸದ ಪ್ರೀಯಾಂಕ್ ಈ ರೀತಿ ಮಾಡಿದ್ದಾರೆ.
ಈ ಹಿಂದೆ ನನ್ನ, ಬಾಬುರಾವ್ ಚಿಂಚನಸೂರು, ಉಮೇಶ ಜಾಧವ್‌ರನ್ನ ತುಳಿಯಲು ಯತ್ನಿಸಿದ್ದರು. ಅದಕ್ಕೆ ಜನ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆರನ್ನ ಸೋಲಿಸುವ ಮೂಲಕ ಉತ್ತರ ನೀಡಿದ್ದಾರೆ. ಪ್ರೀಯಾಂಕ್ ಅವರೇ ಇನ್ನಾದರು ಒಳ್ಳೆಯದನ್ನು ಕಲಿಯಿರಿ ಎಂದು
ಪ್ರೀಯಾಂಕ್ ಖರ್ಗೆಗೆ ಮಾಲಿಕಯ್ಯ ಗುತ್ತೇದಾರ ತಿರುಗೇಟು ನೀಡಿದ್ದಾರೆ.