ಸಮ್ಮೇಳನದಲ್ಲಿ ಅತಿಥಿಯನ್ನೇ ಒಳಬಿಡದ ಪೊಲೀಸರು, ಪೊಲೀಸರ ಮೇಲೆ ಮಹೇಶ್ ಜೋಶಿ ಗರಂ

By Kannadaprabha News  |  First Published Jan 7, 2023, 11:13 AM IST

ಶತಮಾನದ ಪುರುಷರು ಗೋಷ್ಠಿಯ ಅತಿಥಿಯಾಗಿದ್ದ ಸುಧಾ ನರಸಿಂಹರಾಜು ಅವರನ್ನೇ ಕಾರ್ಯಕ್ರಮದೊಳಗೆ ಬಿಡದೇ ಸುಮಾರು ಒಂದುವರೆ ಗಂಟೆ ಪೊಲೀಸರು ಹೊರಗೆಯೇ ಕಾಯಿಸಿದ ಪ್ರಸಂಗ ನಡೆದಿದೆ. ಇನ್ನೊಂದೆಡೆ ಪೊಲೀಸರ ಮೇಲೆ ಮಹೇಶ್ ಜೋಶಿ ಗರಂ ಆದ ಘಟನೆ ನಡೆಯಿತು. 


ಹಾವೇರಿ (ಜ.7): ಶತಮಾನದ ಪುರುಷರು ಗೋಷ್ಠಿಯ ಅತಿಥಿಯಾಗಿದ್ದ ಸುಧಾ ನರಸಿಂಹರಾಜು ಅವರನ್ನೇ ಕಾರ್ಯಕ್ರಮದೊಳಗೆ ಬಿಡದೇ ಸುಮಾರು ಒಂದುವರೆ ಗಂಟೆ ಪೊಲೀಸರು ಹೊರಗೆಯೇ ಕಾಯಿಸಿದ ಪ್ರಸಂಗ ನಡೆದಿದೆ.

ಹಾಸ್ಯನಟ ಟಿ.ಆರ್‌.ನರಸಿಂಹರಾಜು ಅವರ ಕುರಿತು ಸುಧಾ ನರಸಿಂಹರಾಜು ಅವರು ವಿಷಯ ಮಂಡಿಸಬೇಕಿತ್ತು. ಇದಕ್ಕಾಗಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಸರಿಯಾ ದ ಸಮಯಕ್ಕೆ ಬಂದಿದ್ದರು. ಗೋಷ್ಠಿ ಸಮಾನಂತರ ವೇದಿಕೆಯಲ್ಲಿತ್ತು. ಆದರೆ ಅವರು ಪ್ರಧಾನ ವೇದಿಕೆಯತ್ತ ಬಂದಿದ್ದರು. ಹೀಗಾಗಿ ಸಮಾನಂತರ ವೇದಿಕೆಯತ್ತ ತೆರಳಲು ಪೊಲೀಸರು ಅವಕಾಶವನ್ನೇ ಕೊಡಲಿಲ್ಲ. ತಾವು ಅತಿಥಿ. ಕಾರ್ಯಕ್ರಮದಲ್ಲಿ ಭಾಷಣ ಮಾಡಬೇಕಿದೆ. ಅದಕ್ಕಾಗಿ ತೆರಳಲು ಅವಕಾಶ ಕೊಡಿ ಎಂದು ಕೇಳಿಕೊಂಡರು ಪೊಲೀಸರು ಮಾತ್ರ ಹಾಗೆಲ್ಲ ಇಲ್ಲಿಂದ ಅಲ್ಲಿಗೆ ಕಳುಹಿಸಲು ಸಾಧ್ಯವಿಲ್ಲ ಎಂದು ಹೇಳಿದರಂತೆ.

Tap to resize

Latest Videos

undefined

Kannada sahitya sammelana: ಊಟೋಪಚಾರಕ್ಕೆ ಸಾಹಿತ್ಯಾಭಿಮಾನಿಗಳು ಖುಷ್‌; Mobile Network ಇಲ್ಲದೆ ಪರದಾಟ!

ಕೊನೆಗೆ ಸುಧಾ ನರಸಿಂಹರಾಜು ಅವರು ಸಂಘಟಕರ ಮೊಬೈಲ್‌ಗೆ ಕರೆ ಮಾಡಿ ವಿಷಯ ತಿಳಿಸಿ ದ್ದಾರೆ. ಅವರು ಬಂದು ಇವರನ್ನು ಕರೆದುಕೊಂಡು ಹೋಗಿದ್ದಾರೆ. ಇದರಿಂದಾಗಿ ಕಾರ್ಯಕ್ರಮಕ್ಕೆ ಒಂದುವರೆ ಗಂಟೆ ತಡವಾಗಿ ಬಂದರು. ಅಷ್ಟರಲ್ಲಾಗಲೇ ಅಧ್ಯಕ್ಷೀಯ ಭಾಷಣವೇ ಮುಗಿದಿತ್ತು. ಅಧ್ಯಕ್ಷೀಯ ಭಾಷಣ ಮುಗಿದ ಮೇಲೆ ಸುಧಾ ವಿಷಯ ಮಂಡಿಸಿದರು. ಪೊಲೀಸರು ಒಳಗೆ ಬಿಡದ ಬಗ್ಗೆ ಬೇಸರ ವ್ಯಕ್ತಪಡಿಸಿದ ಸುಧಾ, ತಮ್ಮ ಭಾಷಣದಲ್ಲೇ ಇದನ್ನು ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಮಾತು ಮುಗಿಯಲಿಲ್ಲ, ಮೈಕೂ ಬಂದ್‌ ಆಗಲಿಲ್ಲ!

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ವೇದಿಕೆಗಳಲ್ಲಿ ನಡೆಯುವ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳ ಸುದೀರ್ಘ ಭಾಷಣಕ್ಕೆ ಕಡಿತ ಹಾಕಲು ಸಂಘಟಕರು ಹೂಡಿದ್ದ ಹೊಸ ಉಪಾಯ ಅಷ್ಟೇನೂ ಫಲಕಾರಿಯಾಗಲಿಲ್ಲ.

ವಿವಿಧ ಗೋಷ್ಠಿಗಳಲ್ಲಿ ಭಾಷಣಕಾರರು ತಮಗೆ ನಿಗದಿ ಮಾಡಿದ ಸಮಯಕ್ಕಿಂತ ಹೆಚ್ಚಿನ ಹೊತ್ತು ಮಾತನಾಡುತ್ತಿದ್ದರೆ ಪೋಡಿಯಂನಲ್ಲಿ ಕೆಂಪು ದೀಪ ಹತ್ತಲಿದೆ. ನಂತರದಲ್ಲಿ ತಾನಾಗಿಯೇ ಮೈಕ್‌ ಬಂದ್‌ ಆಗಲಿದೆ ಎಂದು ಸಂಘಟಕರು ಹೇಳಿದ್ದರು. ಈ ಕ್ರಮವನ್ನು ಎಲ್ಲರೂ ಸ್ವಾಗತಿಸಿದ್ದರು. ಆದರೆ, ಸಮಯ ನಿಗದಿ ವಿಷಯದಲ್ಲಿ ಎಲ್ಲ ಸಮ್ಮೇಳನಗಳಂತೆ ಸಮಯ ಮೀರಿ ಭಾಷಣಗಳು ನಡೆಯುತ್ತಿರುವುದು ಸಾಮಾನ್ಯವಾಗಿತ್ತು.

ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಆದಿಯಾಗಿ ಸಚಿವರು, ಶಾಸಕರು ಹಾಗೂ ಸಮ್ಮೇಳನಾಧ್ಯಕ್ಷರ ಹೆಸರಿನ ಎದುರು ಇಷ್ಟೇೕ ಸಮಯ ಮಾತನಾಡಬೇಕೆಂದು ಪ್ರಕಟಿಸಲಾಗಿತ್ತು. ಇದಲ್ಲದೇ, ಪ್ರಧಾನ ವೇದಿಕೆ, ಸಮಾನಾಂತರದ ಎರಡು ವೇದಿಕೆಗಳಲ್ಲಿ ಭಾಗವಹಿಸಿ ಮಾತನಾಡಬೇಕಾದ ಸಂಪನ್ಮೂಲ ವ್ಯಕ್ತಿಗಳಿಗೂ ಸಮಯದ ನಿಗದಿ ಮಾಡಲಾಗಿತ್ತು. ಆದರೆ, ಯಾರೂಬ್ಬರೂ ಸಮಯಕ್ಕೆ ತಕ್ಕಂತೆ ತಮ್ಮ ಮಾತು ಮುಗಿಸಲಿಲ್ಲ.

 

ಕನ್ನಡದ ಒಂದಿಂಚು ನೆಲವನ್ನೂಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ; ಶಿವರಾಮ್ ಹೆಬ್ಬಾರ್

ಬೇಸರ ಎಂದರೆ, ಆರಂಭದಲ್ಲಿ ಉದ್ಘಾಟನಾ ಸಮಾರಂಭವೇ ಒಂದು ಗಂಟೆ ತಡವಾಗಿ ಆರಂಭವಾಯಿತು. ಹೀಗಾಗಿ ಪ್ರಧಾನ ವೇದಿಕೆಯಲ್ಲಿ ನಡೆಯಬೇಕಿದ್ದ ಮುಂದಿನ ಗೋಷ್ಠಿಗಳು ಸಹ ತಡವಾಗಿ ಶುರುವಾಗಿ ತಡವಾಗಿಯೇ ಮುಕ್ತಗೊಂಡವು. ಅದೇ ಹಾದಿಯಲ್ಲಿ ಸಮಾನಾಂತರ ವೇದಿಕೆಯಲ್ಲಿನ ಸಮಾರಂಭಗಳು ಸಹ ತಡವಾದವು. 

ನೃತ್ಯರೂಪದಲ್ಲಿ ಮೂಡಿ ಬಂದ ರೈತ ಗೀತೆ

ಇಲ್ಲಿಯ ಹೊರ ವಲಯದಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಹಾವೇರಿಯ ಕಲಾ ತಂಡವೊಂದು ರೈತ ಗೀತೆಯ ನ್ನು ವಿಶೇಷವಾಗಿ ಹಾಡುವ ಮೂಲಕ ಇಡೀ ಸಮ್ಮೇಳನಕ್ಕೆ ಆಗಮಿಸಿದ ಲಕ್ಷಾಂತರ ಕನ್ನಡಿಗರ ಗಮನ ಸೆಳೆದರು.

ಸುಮಾರು 20ಕ್ಕೂ ಹೆಚ್ಚು ಕಲಾವಿದರು ರೈತಗೀತೆಯನ್ನು ಹಾಡುವುದರ ಜೊತೆಗೆ ನೃತ್ಯರೂಪದಲ್ಲೂ ಪ್ರಸ್ತುತ ಪಡಿಸಿದರು. ಹಾಡಿಗೆ ತಕ್ಕಂತೆ ಕಲಾವಿದನೊಬ್ಬ ಸಂದರ್ಭೋಚಿತವಾಗಿ ನೃತ್ಯ ಮಾಡಿದ್ದು ವಿಶೇಷ ಎನಿಸಿತು. ಅಲ್ಲದೇ, ರೈತಗೀತೆ ಹಾಡುವಾಗ ಎದ್ದು ನಿಲ್ಲಬೇಕೆಂಬ ನಿಯಮವೇನಿಲ್ಲವಾದರೂ ರೈತರಿಗೆ ಗೌರವಾರ್ಪಣೆ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಆದಿಯಾಗಿ ವೇದಿಕೆಯ ಮೇಲಿನ ಗಣ್ಯರು ಹಾಗೂ ಎದುರಿಗಿನ ಸಹಸ್ರ ಸಂಖ್ಯೆಯ ಕನ್ನಡಿಗರು ಎದ್ದು ನಿಂತರು.

ಅನ್ಯ ರಾಜ್ಯದವರಿಂದ ಕನ್ನಡ ಪ್ರೀತಿ!

86ನೇ ಸಾಹಿತ್ಯ ಸಮ್ಮೇಳನ ಕೊರೋನಾ ಸಂಕಷ್ಟದ ನಂತರ ನಡೆಯುತ್ತಿರುವ ಮೊದಲ ಸಮ್ಮೇಳನವಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಈ ಬಾರಿ ನಿರೀಕ್ಷೆಗಿಂತಲೂ ಹೆಚ್ಚಿನ ಜನರು ಹರಿದು ಬಂದಿದೆ. ಹೀಗೆ ಸಮ್ಮೇಳನಕ್ಕೆ ಬಂದ ಸಾಹಿತ್ಯಾಭಿಮಾನಿಗಳಲ್ಲಿ ಕನ್ನಡ ಧ್ವಜದ ಕ್ರೇಜ್‌ ಬೆಳೆಸಿ, ನಿಮ್ಮ ಕೆನ್ನೆಯ ಮೇಲೆ ಕನ್ನಡ ಧ್ವಜ ಬಿಡಿಸುತ್ತೇವೆ ಎಂದು ಬಂದವರಿಗೆಲ್ಲಾ ಕೇಳಿ ಅವರ ಕೆನ್ನೆಯ ಮೇಲೆ ಕನ್ನಡಧ್ವಜ ಬಿಡಿಸುತ್ತಿದ್ದ ರಾಜಸ್ತಾನ, ಬಿಹಾರ, ಉತ್ತರ ಪ್ರದೇಶದ 8 ಜನರ ತಂಡ ವಿಶೇಷ ಜನಾಕರ್ಷಣೆಗೆ ಕಾರಣವಾಯಿತು.

ಸಮ್ಮೇಳನಕ್ಕೆ ಬರುವ ಪ್ರಮುಖ ದ್ವಾರಗಳು, ಮುಖ್ಯ ರಸ್ತೆಗಳಲ್ಲಿ ಇವರ ತಂಡದ ಸದಸ್ಯರು ನಿಂತುಕೊಂಡು ಜನರನ್ನು ಆಹ್ವಾನಿಸುತ್ತಿದ್ದರು. ಅದರಲ್ಲಿಯೂ ಮಕ್ಕಳಂತೂ ಹೆಚ್ಚಿನ ಸಂಖ್ಯೆಯಲ್ಲಿ ಇವರ ಧ್ವಜ ಚಿತ್ರಕ್ಕೆ ಪಿಧಾ ಆಗಿದ್ದು, ಪಾಲಕರಿಗೆ ಗಂಟು ಬಿದ್ದು ಕನ್ನಡದ ಧ್ವಜ ಚಿತ್ರ ಬಿಡಿಸಿಕೊಂಡೇ ಅಲ್ಲಿಂದ ಹೊರಡುತ್ತಿದ್ದರು.

ಕನ್ನಡ ಭಾಷೆಗೆ ಶೀಘ್ರ ಕಾನೂನು ಬಲ: ಸಿಎಂ ಬೊಮ್ಮಾಯಿ

ಪೊಲೀಸರ ವಿರುದ್ಧ ಜೋಶಿ ಗರಂ

86ನೇ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಪೊಲೀಸರ ವಿರುದ್ಧ ಕಸಾಪ ರಾಜ್ಯಾಧ್ಯಕ್ಷ ಮಹೇಶ ಜೋಶಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶುಕ್ರವಾರ ನಡೆಯಿತು. ಪೊಲೀಸರ ದರ್ಪ ಇಲ್ಲಿ ತೋರಿಸಬೇಡಿ ಎಂದು ವೇದಿಕೆ ಮೇಲೆಯೇ ಆಕ್ರೋಶ ವ್ಯಕ್ತಪಡಿಸಿದ ಅವರು, ವೇದಿಕೆ ಬಳಿಯ ವಿಐಪಿ ಗ್ಯಾಲರಿಯಲ್ಲಿ ಕೆಲವರನ್ನು ಪೊಲೀಸರು ತಡೆ ಹಿಡಿ ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ, ಮಹೇಶ ಜೋಶಿ ಮೇಲೆಯೇ ಏಕ ವಚನ ಪ್ರಯೋಗ ಮಾಡಲಾಯಿತು. ಇದರಿಂದ ಕುಪಿತಗೊಂಡ ಜೋಶಿ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಕೆಲ ಸ್ವಾಮೀಜಿ ಮತ್ತು ಗಣ್ಯರನ್ನು ಒಳಗೆ ಕಳುಹಿಸಿದರು. ಅಲ್ಲದೇ, ವೇದಿಕೆಗೆ ಬಂದು ಮೈಕ ಮೂಲಕವೂ ಪೊಲೀಸ್‌ ವರ್ತನೆಯನ್ನು ಜೋಶಿ ಖಂಡಿಸಿದರು.

ಕನ್ನಡದ ಶಾಲುಗಳಿಗೆ ಬೇಡಿಕೆ

86ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಿನ್ನೆಲೆಯಲ್ಲಿ ಸಮ್ಮೇಳನ ಇಡೀ ಆವರಣದಲ್ಲಿ ಕನ್ನಡದ ಶಾಲುಗಳಿಗೆ ಭಾರೀ ಬೇಡಿಕೆ ಉಂಟಾಗಿದೆ. ಶುಕ್ರವಾರ ವೇದಿಕೆ ಮುಂಬಾಗ ಹಾಗೂ ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ ಎದುರು ಸಾವಿರಾರು ಕನ್ನಡದ ಹಳದಿ ಮತ್ತು ಕೆಂಪು ಬಣ್ಣದ ಶಾಲುಗಳು ಮಾರಾಟವಾದವು. ಎರಡು ವರ್ಷಗಳ ಬಳಿಕ ನಡೆಯುತ್ತಿರುವ ಕನ್ನಡ ನುಡಿ ಜಾತ್ರೆಗೆ ಬಂದ ಸಾವಿರಾರು ಕನ್ನಡಿಗರು ಶಾಲುಗಳನ್ನು ಹಾಕಿಕೊಂಡು ಸಾಹಿತ್ಯದ ಕಾರ್ಯಕ್ರಮಗಳನ್ನು ಆಸ್ವಾದಿಸಿದ್ದು ವಿಶೇಷವಾಗಿತ್ತು. ಇದರೊಂದಿಗೆ ಮುಖ್ಯ ವೇದಿಕೆ ಹಾಗೂ ಇತರೆ ಎರಡು ವೇದಿಕೆಗಳಲ್ಲಿ ಕನ್ನಡಾಭಿಮಾನಿಗಳು ಕೈಯಲ್ಲಿ ಕನ್ನಡದ ಧ್ವಜ ಹಿಡಿದು ಅತ್ತಿಂದಿತ್ತ ಹಾರಿಸುತ್ತಿರುವುದು ಕನ್ನಡಾಭಿಮಾನಕ್ಕೆ ಸಾಕ್ಷಿಯಾಗಿತ್ತು.

click me!