ಮಹಾರಾಷ್ಟ್ರದಲ್ಲಿ ವಿಪರೀತ ಮಳೆ, ಭೀಮಾ ಪ್ರವಾಹದ ಕುರಿತು ಮುನ್ನೆಚ್ಚರಿಕೆ ಸೂಚಿಸಿದ ರಾಹುಲ್ ಸಿಂಧೆ

By Suvarna NewsFirst Published Jul 27, 2023, 8:33 PM IST
Highlights

ಮಹಾರಾಷ್ಟ್ರದಲ್ಲಿ ಮಳೆಯಾಗ್ತಿರೋ ಕಾರಣ ಭೀಮಾನದಿ ತೀರದಲ್ಲು ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ.

ವರದಿ: ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಜು.27):  ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ  ಆಲಮೇಲ ತಾಲೂಕಿನಾದ್ಯಂತ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಗತ್ಯ ಸೂಚನೆಗಳನ್ನು ನೀಡಿದರು. ಇನ್ನು ಮಹಾರಾಷ್ಟ್ರದಲ್ಲಿ ಮಳೆಯಾಗ್ತಿರೋ ಕಾರಣ ಭೀಮಾನದಿ ತೀರದಲ್ಲು ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಲು ಸೂಚನೆ ನೀಡಿದರು.

ಭೀಮಾತೀರದಲ್ಲಿ ಅಗತ್ಯ ಮುಂಜಾಗ್ರತಾ ಇರಲಿ: ಸಿಇಓ ರಾಹುಲ್ ಸಿಂಧೆ
ಮಹಾರಾಷ್ಟ್ರದಲ್ಲಿ ಮಳೆಯಾಗ್ತಿರೋ ಪರಿಣಾಮ ಕೃಷ್ಣಾನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರ್ತಿದೆ. ಈ ನಡುವೆ ಭೀಮಾನದಿಗು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆಗಳಿವೆ. ಹೀಗಾಗಿ ಭೀಮಾತೀರದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲು ಸಿಇಓ ರಾಹುಲ್ ಸಿಂಧೆ ಸೂಚನೆ ನೀಡಿದರು. ಆಲಮೇಲ ತಾಲೂಕಿನ ತಾರಾಪುರ, ತಾವರಖೇಡ, ಬ್ಯಾಡಗಿಹಾಳ, ದೇವಣಗಾಂವ ಸೇರಿದಂತೆ ಭೀಮಾತೀರದ ಹಳ್ಳಿಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಸಲಹೆ ನೀಡಿದರು.

ಚಾಮರಾಜನಗರದಲ್ಲಿ ಚಿರತೆ ಸೆರೆಗೆ ಲೆಫರ್ಡ್ ಟಾಸ್ಕ್ ಫೋರ್ಸ್ ಕೂಂಬಿಂಗ್

ಮಾದರಿ ಅಂಗನವಾಡಿಗೆ ಸಿಇಓ ಭೇಟಿ
ಆಲಮೇಲ ತಾಲೂಕಿನ ಕೊರಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮದರಿ ಗ್ರಾಮದಲ್ಲಿ ನಿರ್ಮಾಣವಾದ ಅಂಗವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಪಿಓಪಿ ಸೇರಿದಂತೆ ಬಾಕಿಯಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಹಾಗೂ ಅಂಗನವಾಡಿ ಮುಂದೆ ಖಾಲಿಯಿರುವ ಸ್ಥಳದಲ್ಲಿ ಆಟದ ಮೈದಾನ, ಜಾರು ಬಂಡೆಯಂತಹ ಮಕ್ಕಳಿಗೆ ಅನುಕೂಲಕರವಾದ ಆಟಿಗೆಗಳನ್ನು ಅಳವಡಿಸಿ, ಸಸಿಗಳನ್ನು ನೆಟ್ಟು ಮಕ್ಕಳ ಸ್ನೇಹಿ ಅಂಗನವಾಡಿಯನ್ನಾಗಿಸಲು ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿದ್ದ ಪಿಆರ್‍ಇಡಿ ಅಭಿಯಂತರ ಜಿ.ವಾಯ್. ಮುರಾಳ ಅವರಿಗೆ ಸೂಚಿಸಿದರು. 

ಆರೋಗ್ಯ ಉಪಕೇಂದ್ರಗಳ ವ್ಯವಸ್ಥೆಗಳ ಪರಿಶೀಲನೆ
ಗ್ರಾಮದಲ್ಲಿರುವ ಅರೋಗ್ಯ ಉಪ ಕೇಂದ್ರಕ್ಕೆ ಭೇಟಿ ನೀಡಿ, ಸಿಬ್ಬಂದಿಗಳ ಹಾಜರಾತಿಯನ್ನು ಪರಿಶೀಲನೆ ನಡೆಸಿದರು. ಸಿಬ್ಬಂದಿಗಳು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಕ್ತ ಕ್ರಮ ಕೈಗೊಳ್ಳಲು ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು. ನೂತನವಾಗಿ ನಿರ್ಮಾಣ ಮಾಡಲಾದ ಸಿಂದಗಿ- ಗಣಿಹಾರ್ ಡಾಂಬರ್ ರಸ್ತೆಯ ಅಳತೆ ಮತ್ತು ಗುಣಮಟ್ಟ ಪರಿಶೀಲಿನೆ ನಡೆಸಿ, ಗ್ರಾಮೀಣ ಭಾಗದಲ್ಲಿ ಜನರಿಗೆ ಅನುಕೂಲಕರವಾಗುವಂತೆ ಉತ್ತಮ ಗುಣ್ಣಮಟ್ಟದ ರಸ್ತೆಗಳನ್ನು ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಮೊರಾರ್ಜಿ ವಸತಿ ಶಾಲೆಯಲ್ಲಿ ಟೊಮೆಟೊ ಬಾತ್ ಸೇವಿಸಿ 7 ಮಂದಿ ವಿದ್ಯಾರ್ಥಿಗಳು ಅಸ್ವಸ್ಥ

ಆರೋಗ್ಯ ಕೇಂದ್ರಗಳ ಸ್ಥಿತಿ ಅವಲೋಕಿಸಿದ ಸಿಇಓ
ಆಲಮೇಲ ಪಟ್ಟಣದಲ್ಲಿರುವ ಸಮುದಾಯ ಅರೋಗ್ಯ ಕೇಂದ್ರ, ರಕ್ತ ತಪಾಸಣಾ ಕೇಂದ್ರ, ಆರ್‍ಎನ್‍ಟಿಸಿಪಿ, ನೇತ್ರ ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿ, ಆರೋಗ್ಯ ಕೇಂದ್ರದಲ್ಲಿ ದೊರೆಯುವ ವಿವಿಧ ಸೌಲಭ್ಯಗಳ ಕುರಿತು ವೈಧ್ಯರಿಂದ ಮಾಹಿತಿ ಪಡೆದರು. ನಂತರ ಸಿಬ್ಬಂದಿಗಳ ಹಾಜರಾತಿ ಪರಿಶೀಲಿಸಿ ಮಂಜೂರಾದ ಹುದ್ದೆಗಳ ಎದುರಾಗಿ ಖಾಲಿಯಿರುವ ಹುದ್ದೆಗಳ ಮಾಹಿತಿ ಪಡೆದ ಅವರು,  ಆಸ್ಪತ್ರೆಗೆ ಬರುವವರೊಂದಿಗೆ ಸೌಜನ್ಯಯುತವಾಗಿ ವರ್ತಿಸುವಂತೆ ಸೂಚನೆ ನಿಡಿದರು. ನಂತರ ಸೊನ್ನ ಬ್ಯಾರೆಜ್ ಗೆ ಭೇಟಿ ನೀಡಿ,ನೀರಿನ ಸಂಗ್ರಹ ಮಟ್ಟ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಈರಣ್ಣ ಆಶಾಪುರ, ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಾಬು ರಾಠೋಡ, ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಸ್.ಆರ್.ಸ್ವಾಮಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಸವರಾಜ್ ಜಿಗಳೂರ, ಜಿಲ್ಲಾ ಪಂಚಾಯತಿಯ ಅರುಣಕುಮಾರ ದಳವಾಯಿ, ಪೃಥ್ವಿರಾಜ್ ಪಾಟೀಲ್, ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ನರೇಗಾ ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

click me!