ಕಾಫಿನಾಡಿನಲ್ಲಿ ಪರ್ವ: ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿದ ನಾಟಕ ಪ್ರದರ್ಶನ

By Govindaraj S  |  First Published May 3, 2022, 1:30 AM IST

ಕನ್ನಡ ಸಂಸ್ಕೃತಿಯ ಇಲಾಖೆಯ ನಿರ್ದೇಶನಾಲಯ ಸಹಕಾರದೊಂದಿಗೆ ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಇಂದು ಮೈಸೂರಿನ ರಂಗಾಯಣ ಕಲಾವಿದರು ಪ್ರಸ್ತುತಪಡಿಸಿದ ನಾಟಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು.


ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಮೇ.03): ಕಾಫಿನಾಡಿನಲ್ಲಿ (Chikkamagaluru) ‌ಪ್ರದರ್ಶನಗೊಂಡ ಪರ್ವ ನಾಟಕ (Drama) ಪ್ರೇಕ್ಷರಿಗೆ ನವರಸಗಳ ರಸದೌತಣವನ್ನು ನೀಡಿತ್ತು. ಕನ್ನಡ ಸಂಸ್ಕೃತಿಯ ಇಲಾಖೆಯ ನಿರ್ದೇಶನಾಲಯ ಸಹಕಾರದೊಂದಿಗೆ ಚಿಕ್ಕಮಗಳೂರು ನಗರದ ಕುವೆಂಪು ಕಲಾಮಂದಿರದಲ್ಲಿ ಇಂದು ಮೈಸೂರಿನ ರಂಗಾಯಣ ಕಲಾವಿದರು ಪ್ರಸ್ತುತಪಡಿಸಿದ ನಾಟಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು.

Tap to resize

Latest Videos

ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿಸಿದ ನಾಟಕ ಪ್ರದರ್ಶನ: ನಾಡಿನ ಖ್ಯಾತಿ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರ (Dr SL Bhyrappa) ಮೇರುಕೃತಿ ಪರ್ವ ಕಾದಂಬರಿ ಆಧಾರಿತ ರಂಗರೂಪಕ ಮಹಾಪರ್ವ ನಾಟಕ (Mahaparva Drama) ಪ್ರೇಕ್ಷಕರಿಗೆ ನವರಸಗಳ ರಸದೌತಣ ಉಣಬಡಿಸುವಲ್ಲಿ ಯಶಸ್ವಿಯಾಯಿತು. ಸೋಮವಾರ ಬೆಳಿಗ್ಗೆ 10ಗಂಟೆಗೆ ಆರಂಭಗೊಂಡ ಪರ್ವ ನಾಟಕದಲ್ಲಿ ಕಲಾವಿದರು ಅದ್ಬುತವಾಗಿ ಪ್ರದರ್ಶನ ನೀಡಿದರು. ಬೆಳಿಗ್ಗೆಯಿಂದ ಸಂಜೆ ತನಕ ಪ್ರದರ್ಶನಗೊಂಡ ನಾಟಕವನ್ನು ಪ್ರೇಕ್ಷಕರು 8 ಗಂಟೆಗಳ ಕಾಲ ಕುಳಿತು ಬಹುಸಹನೆಯಿಂದ ವೀಕ್ಷಿಸಿದರು. 

Chikkamagaluru: ಬಿ.ಎಸ್. ರಾಜು ಭಾರತೀಯ ಸೇನೆ ಉಪಮುಖ್ಯಸ್ಥರಾಗಿ ನೇಮಕ: ಹುಟ್ಟೂರಿನಲ್ಲಿ ಸಂಭ್ರಮ ಸಡಗರ

ಎಸ್.ಎಲ್.ಭೈರಪ್ಪನವರ ಪರ್ವ ಕಾದಂಬರಿಯನ್ನು ರಂಗರೂಪಕ್ಕಿಳಿಸಿ ಪ್ರಕಾಶ್‌ ಬೆಳವಾಡಿ ನಿರ್ದೇಶಿಸಿದ ಈ ನಾಟಕ ಒಟ್ಟು 4 ಭಾಗವಾಗಿ ಸುಮಾರು 35 ಮಂದಿ ಕಲಾವಿದರು, ತಂತ್ರಜ್ಞರು, ಸಂಗೀತನಿರ್ದೇಶಕರು, ರಂಗದಲ್ಲಿ ಪ್ರಸ್ತುತಪಡಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು. ಪ್ರದರ್ಶನ ಆರಂಭವಾಗುತ್ತಿದ್ದಂತೆ ಧೃತರಾಷ್ಟ್ರ ಭೀಮನನ್ನು ಕೊಲ್ಲುವ ಯತ್ನಿಸುವ ದೃಶ್ಯ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿ ಆಸನದ ತುದಿಯಲ್ಲಿ ಕೂರುವಂತೆ ಮಾಡಿತ್ತು. ಗಾಂಧಾರಿಯ ಮನಸ್ಸಿನ ತುಮುಲಗಳು ಕಣ್ಣಿಗೆ ಕಟ್ಟಿಕೊಂಡಿದ್ದರ ನಿಜವಾದ ಕಾರಣ ಹೇಳುವ ಸನ್ನಿವೇಶಗಳಲ್ಲಿ ಪಾತ್ರಾಧಾರಿಗಳು ಪರಾಕಾಯ ಪ್ರವೇಶಿಸಿ ಪಾತ್ರಕ್ಕೆ ನ್ಯಾಯ ಒದಗಿಸಿದರು. 

ನಾಟಕದ್ದಕ್ಕೂ ಒಂದೇ ವೇದಿಕೆಯಲ್ಲಿ 2-3 ಸನ್ನಿವೇಶಗಳನ್ನು ರಂಗಕ್ಕೆ ಅಳವಡಿಸಿ ಭೂತ, ಭವಿಷ್ಯ ಘಟನೆಗಳನ್ನು ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಪ್ರೇಕ್ಷಕರಿಗೆ ಮನದಟ್ಟು ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ನಾಟಕದಲ್ಲಿ ಒಬ್ಬೊಬ್ಬ ಪಾತ್ರಾಧಾರಿ 2 ಪಾತ್ರಗಳಿಂದಿಡಿದು 10ಪಾತ್ರಗಳವರೆಗೂ ನಿಭಾಯಿಸಿದರೂ ಪಾತ್ರಗಳ ಒಳಹೊಕ್ಕು ಅಭಿನಯಿಸಿ ಪ್ರೇಕ್ಷಕನ ಏಕತಾನತೆ ಹಾಗೂ ರಸಭಂಗವಾಗದಂತೆ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿ ಮೆಚ್ಚುಗೆಗೆ ಪಾತ್ರರಾದರು.ಇಡೀ ನಾಟಕದಲ್ಲಿ ರಂಗತಾಂತ್ರಿಕತೆಗಳನ್ನು ಆಗಾಧವಾಗಿ ಬಳಸಿಕೊಳ್ಳುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದು ಪ್ರೇಕ್ಷಕರು ನಾಟಕದ್ದಕ್ಕೂ ಹಲವು ವಿಸ್ಮಯಗಳಿಗೆ ಸಾಕ್ಷಿಯಾದರು. 

ಕರ್ಣಾನಂದಕರ ಸಂಗೀತ ಸಂಯೋಜನೆ: ಬಹುಗಂಭೀರವಾದ ಈ ನಾಟಕದಲ್ಲಿ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಂಭಾಷಣೆಯೊಳಗಿನ ಹಲವು ಗೂಡಾರ್ಥಗಳು, ನಗೆಬುಗ್ಗೆಗಳು ಕಾರಣವಾದವು. ರಂಗರೂಪದಲ್ಲಿ ಹಾದು ಹೋಗುವ ಸುಮಾರು 125ಪಾತ್ರಗಳಿಗೂ ಸಮನಾಂತರವಾಗಿ ನ್ಯಾಯ ಒದಗಿಸುವ ಮೂಲಕ ನಾಟಕ ಮುಗಿದ ನಂತರವೂ ಪಾತ್ರಗಳನ್ನು ಮನದಾಳದಲ್ಲಿ ಹುದುಗಿಸಿಕೊಳ್ಳಬಹುದಾಂತಹ ಪಾತ್ರ ಪೋಷಣೆಗಳು ಕಂಡುಬಂದವು. ಮುಖ್ಯ ಪಾತ್ರಗಳಿಂದಿಡಿದು ಪರಿಚಾರಕನ ಪಾತ್ರಗಳು ಸಹ ಸ್ಮೃತಿ ಪಟಲದಲ್ಲಿ ಉಳಿಯುತ್ತದೆ.

ಬಿಸಿಲ ಝಳಕ್ಕೆ ತತ್ತರಿಸಿದ ಚಿಕ್ಕಮಗಳೂರು: ತಂಪು ಪಾನೀಯಗಳ ಮೊರೆ ಹೋದ ಜನ..!

ನಾಟಕದ ಯಶಸ್ವಿಗೆ ರಂಗ ಸಂಗೀತ ಕಾರಣ ಎಂದರೆ ಅತಿಶಯೋಕ್ತಿಯಾಗಲಾರದು. ಚಂಡೆ, ತಬಲ, ಶಂಖ, ಜಾಗಟೆ, ರಿದಂಪ್ಯಾಡ್, ಲಯವಾದ್ಯಗಳನ್ನು ಬಳಸಿಕೊಂಡು ಕರ್ಣಾನಂದಕರ ಸಂಗೀತ ಸಂಯೋಜನೆ ಪ್ರೇಕ್ಷಕರಿಗೆ ಮುದನೀಡಿತ್ತು. ಅದ್ದೂರಿ ವಸ್ತ್ರವಿನ್ಯಾಸ, ಕಥೆಗೆ ಒಪ್ಪುವ ಸೀಮಿತವಾದ ಪ್ರಸಾದನದೊಂದಿಗೆ ನೆರಳು ಬೆಳಕಿನಾಟವು ಸೇರಿದಂತೆ ನಾಟಕ ಎಂಬುದು ಹೀಗೆಯೂ ಇರುತ್ತದೆ ಎಂಬುದನ್ನು ಚಿಕ್ಕಮಗಳೂರಿನ ಜನತೆಗೆ ಪರಿಚಯಿಸುವುದರಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.

click me!