ನರಗುಂದ: ಮಹದಾಯಿ ಕುರಿತು ಕೇಂದ್ರದ ನಿರ್ಧಾರಕ್ಕೆ ಸ್ವಾಗತ, ಪಟಾಕಿ ಸಿಡಿಸಿ ಸಂಭ್ರಮಾಚರಣೆ

By Suvarna NewsFirst Published Dec 25, 2019, 9:45 AM IST
Highlights

ಕೇಂದ್ರ ಸಚಿವ ಜಾವೇಡಕರ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದ್ದಕ್ಕೆ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಣೆ| ಮಹದಾಯಿ ನೀರು ಬಳಕೆಗೆ ಕೇಂದ್ರ ಗೆಜೆಟ್‌ ನೊಟಿಫಿಕೇಷನ್‌ ಹೊರಡಿಸಲಿ| ಮಹ​ದಾಯಿ ಹೋರಾಟ ವೇದಿ​ಕೆ​ಯಲ್ಲಿ ರೈತ ಸೇನಾ ಕೋಶಾ​ಧ್ಯಕ್ಷ ಜೋಗ​ಣ್ಣ​ವ​ರ|

ನರಗುಂದ[ಡಿ.25]: ರಾಜ್ಯದ ಉತ್ತರ ಕರ್ನಾಟಕ ಭಾಗದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರು ಬಳಕೆ ಮಾಡಿಕೊಳ್ಳಲು ಕೇಂದ್ರ ತಡೆ ಹಿಂದಕ್ಕೆ ತಗೆದುಕೊಂಡಿರುವುದು ಸಂತಸ ತಂದಿದೆ ಎಂದು ಕೇಂದ್ರ ಕಳಸಾ ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದ್ದಾರೆ.

ಅವರು ಮಂಗಳವಾರ ಪಟ್ಟಣದ ರಾಣಿ ಚೆನ್ನಮ್ಮ ವೃತ್ತದಲ್ಲಿ ಕೇಂದ್ರ ಸಚಿವ ಜಾವೇಡಕರ ಅವರು ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದ್ದಕ್ಕೆ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿ ಮಾತನಾಡಿದರು.

ಉತ್ತರ ಕರ್ನಾಟಕ ಭಾಗದ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಬೇಕೆಂದು ಈ ಭಾಗದ ರೈತ ಸಮುದಾಯ ಕಳೆದ 20 ವರ್ಷಗಳಿಂದ ಹೋರಾಟ ಮಾಡಿದ್ದರಿಂದ ಈ ಜಲ ವಿವಾದಕ್ಕೆ ನೇಮಕವಾದ ನ್ಯಾಯಾಧಿಕರಣ ನ್ಯಾಯಾಧೀಶರು 2018ರ ಆಗಸ್ಟ ತಿಂಗಳಲ್ಲಿ ಕರ್ನಾಟಕ ರಾಜ್ಯಕ್ಕೆ 13.42 ಟಿಎಂಸಿ ನೀರು ಬಳಕೆ ಮಾಡಿಕೊಳ್ಳು ಅನುಮತಿ ನೀಡಿದ ನಂತರ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಕೂಡ ಈ ನೀರು ಬಳಕಗೆ ಪರವಾನಗೆ ನೀಡಿತ್ತು. ಆದರೆ, ಗೋವಾ ರಾಜ್ಯದ ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಈ ನೀರು ಬಳಕೆ ಮಾಡಿಕೊಳ್ಳಲು ತಡೆ ಮಾಡಿದ್ದರು. ನಂತರ ದಿನಗಳಲ್ಲಿ ಈ ಭಾಗದಲ್ಲಿ ರೈತರು ಹೋರಾಟ ತೀವ್ರ​ಗೊಂಡ ಹಿನ್ನ​ಲೆ​ಯಲ್ಲಿ ರಾಜ್ಯ ಸರ್ಕಾರ ಮುಖ್ಯಮಂತ್ರಿ ಬಿ.ಎಸ್‌. ಯಡಯೂರಪ್ಪ ಗೃಹ ಸಚಿವ ಬಸವರಾಜ ಬೊಮ್ಮಯಿ ಅವರನ್ನು ದೆಹಲಿಗೆ ಕಳಿಸಿ ಈ ನೀರು ಬಳಕೆಯಿಂದ ಗೋವಾ ರಾಜ್ಯಕ್ಕೆ ಯಾವುದೇ ರೀತಿ ಹಾನಿ ಆಗುವುದಿಲ್ಲ ಎಂದು ಮನ​ವ​ರಿಕೆ ಮಾಡಿದ ನಂತರ ಕೇಂದ್ರ ಸಚಿವರು ಮಂಗಳವಾರ ಕರ್ನಾಟಕ ರಾಜ್ಯ ಈ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದ್ದು ಈ ಭಾಗದ ರೈತ ಸಮುದಾಯಕ್ಕೆ ಸಂತಸ ತಂದಿದೆ.

ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಕಳಸಾ ಕಾಮಗಾರಿ 450ಮೀ ಕೆಲಸ ಉಳಿದುಕೊಂಡಿದೆ. ಹಾಗಾಗಿ ಸರ್ಕಾರ ಉಳಿದ ಕಾಮಗಾರಿ ಬೇಗ ಮಾಡಿದರೆ ಕಳಸಾ, ಹರತಾಳ, ಹಳ್ಳಗಳ ನೀರು ಬಂದು ಮಲಪ್ರಭಾ ಜಲಾಶಯಕ್ಕೆ ಜೋಡಣೆಯಾಗುತ್ತದೆ. ಈ ಕಾಮಗಾರಿಯನ್ನು ಆದಷ್ಟುತೀವ್ರ​ಗ​ತಿ​ಯಲ್ಲಿ ಪೂರ್ಣ​ಗೊ​ಲಿ​ಸ​ಬೇಕು. ಬಂಡೂರಿ ಹಳ್ಳದ ನೀರು ಜೋಡಣೆಗೆ ಸರ್ಕಾರ ಟೆಂಡರ್‌ ಕರೆದು ಈ ಕಾಮಗಾರಿ ಪ್ರಾರಂಭಿ​ಸು​ವಂತೆ ಆಗ್ರ​ಹಿ​ಸಿ​ದ​ರು.

ಬಸನಗೌಡ ಚಿಕ್ಕನಗೌಡ್ರ, ಆನಂದ ತೊಂಡಿಹಾಳ, ಎ.ಎಸ್‌. ಮೇಟಿ, ಎಂ.ಎಂ. ಮುಳ್ಳೂರ, ಎಸ್‌.ಎಂ. ಮರಿಗೌಡ್ರ, ಬಸವರಾಜ ಭೋಸ್ಲೆ, ಎಂ.ಎಸ್‌. ಅರೇಬೆಂಚಿ, ಪಡಿಯಪ್ಪ ಮರಿಯಣ್ಣವರ, ಕಲ್ಲಪ್ಪ ಶಿಳೋದ, ಬಾಪು ಹಿರೇಗೌಡ್ರ, ಮಲ್ಲಕಾಜಪ್ಪ ಶಿಳೋದ, ಶರಣಪ್ಪ ಮೊರಬದ, ಶರಣು ಕುಲಕರ್ಣಿ, ಶೇಖಪ್ಪ ಹೂಲಿ, ಬಸಪ್ಪ ಹಾದಿಮನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಕೇಂದ್ರ ಸರ್ಕಾರ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರು ಬಳಕೆ ಮಾಡಿಕೊಳ್ಳಲು ತಡೆ ಮಾಡಿದ್ದನ್ನು ಹಿಂದಕ್ಕೆ ಪಡೆದುಕೊಂಡಿದ್ದು ಸಂತಸ ತಂದಿದೆ. ಸರ್ಕಾರ ಬೇಗನೇ ಈ ನೀರು ಬಳಕೆ ಮಾಡಿಕೊಳ್ಳಲು ಗೆಜೆಟ್‌ ನೊಟಿಫಿಕೇಷನ್‌ ಹೊರಡಿಸಬೇಕೆಂದು ರೈತ ಸೇನಾ ಸಂಘಟನೆ ಕೋಶಾಧ್ಯಕ್ಷ ಎಸ್‌.ಬಿ. ಜೋಗಣ್ಣವರ ಆಗ್ರಹಿಸಿ​ದ್ದಾರೆ.

1622ನೇ ದಿನದ ನಿರಂತರ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ಹೋರಾಟ ವೇದಿಕೆಯಲ್ಲಿ ಮಾತನಾಡಿ, ಈ ಹಿಂದೆ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರು ಬಳಕೆ ಮಾಡಿಕೊಳ್ಳಲು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಪರವಾನಿಗೆ ನೀಡಿತ್ತು. ಆದರೆ, ಗೋವಾ ರಾಜ್ಯದ ಮುಖ್ಯಮಂತ್ರಿಗಳ ಒತ್ತಡಕ್ಕೆ ಮಣಿದು ಈ ನೀರು ಬಳಕೆ ಮಾಡಿಕೊಳ್ಳುವ ಅನುಮತಿಯನ್ನು ಹಿಂದಕ್ಕೆ ಪಡೆದಿತ್ತು. ಆದರೆ, ರಾಜ್ಯದಲ್ಲಿ ರೈತರ ಹೋರಾಟ ತೀವ್ರ​ಗೊ​ಳ್ಳುವ ಹೆದರಿಕೆಯಿಂದ ಮಂಗಳವಾರ ಕೇಂದ್ರ ಸಚಿವ ಜಾವಡೇ​ಕರ್‌ ಅವರು ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದ್ದು ಸ್ವಾಗತಾರ್ಹ.

ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ 13.42 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದೆ. ಈ ನೀರು ಬಳಕೆಗೆ ಸರ್ಕಾರ ಗೆಜೆಟ್‌ ನೊಟಿಫಿಕೇಷನ್‌ ಹೊರಡಿಸಬೇಕು. ಅದೇ ರೀತಿ ಗೋವಾ ರಾಜ್ಯದ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪದೇ ಪದೇ ಈ ನೀರು ಬಳ​ಕೆಗೆ ತಡೆ ಮಾಡದೆ ನಮ್ಮ ಪಾಲಿನ ನೀರು ನಮಗೆ ಬಳಕೆ ಮಾಡಿಕೊಳ್ಳಲು ಅನುಕೂಲ ಕಲ್ಪಿಸ​ಬೇಕು ಎಂದು ಒತ್ತಾ​ಯಿ​ಸಿ​ದ​ರು.

ವೀರಬಸಪ್ಪ ಹೂಗಾರ, ಎಸ್‌.ಬಿ. ಜೋಗಣ್ಣವರ, ಜಗನ್ನಾಥ ಮುಧೋಳೆ, ಸುಭಾಸ ಗಿರಿಯಣ್ಣವರ, ಸಂಗಪ್ಪ ಶಾನವಾಡ, ವೆಂಕಪ್ಪ ಹುಜರತ್ತಿ, ಹನಮಂತ ಸರನಾಯ್ಕರ, ವಾಸು ಚವಾಣ, ಯಲ್ಲಪ್ಪ ಗುಡದೇರಿ, ಮಾರುತಿ ಬಡಿಗೇರ, ಹನಮಂತ ಸರನಾಯ್ಕರ, ಬಸವ್ವ ಪೂಜಾರ, ಮಂಜುಳಾ ಸರನಾಯ್ಕರ, ಮಲ್ಲಪ್ಪ ಐನಾಪೂರ, ಕೆ.ಎಚ್‌. ಮೊರಬದ, ನಾಗರತ್ನ ಸವಳಬಾವಿ, ಅನಸವ್ವ ಶಿಂದೆ, ಶಾಂತವ್ವ ಭೂಸರಡ್ಡಿ, ಈರಣ್ಣ ಗಡಗಿ ಸೇರಿದಂತೆ ಮುಂತಾದವರು ಇದ್ದರು.

click me!