ಸೇನಾ ವಸತಿಗೃಹದಲ್ಲಿ ಯೋಧನ ಮೃತದೇಹ ಪತ್ತೆ

By Kannadaprabha NewsFirst Published Jan 24, 2020, 8:07 AM IST
Highlights

ಪುಣೆಯ ಸೇನಾ ವಸತಿಗೃಹದಲ್ಲಿ ಕೊಡಗಿನ ಯೋಧನೊಬ್ಬ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ವಿರಾಜಪೇಟೆ ತಾಲೂಕಿನ ಮುಗುಟಗೇರಿ ನಿವಾಸಿ ರಚನ್‌ ಬೋಪಣ್ಣ(22) ಮೃತ ಯೋಧ. ನೇಣು ಬಿಗಿದ ಸ್ಥಿತಿಯಲ್ಲಿ ಯೋಧನ ಮೃತದೇಹ ದೊರೆತಿದ್ದು, ನಾಲ್ಕು ದಿನದ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಮಡಿಕೇರಿ(ಜ.24): ಪುಣೆಯ ಸೇನಾ ವಸತಿಗೃಹದಲ್ಲಿ ಕೊಡಗಿನ ಯೋಧನೊಬ್ಬ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ವಿರಾಜಪೇಟೆ ತಾಲೂಕಿನ ಮುಗುಟಗೇರಿ ನಿವಾಸಿ ರಚನ್‌ ಬೋಪಣ್ಣ(22) ಮೃತ ಯೋಧ. ನೇಣು ಬಿಗಿದ ಸ್ಥಿತಿಯಲ್ಲಿ ಯೋಧನ ಮೃತದೇಹ ದೊರೆತಿದ್ದು, ನಾಲ್ಕು ದಿನದ ಹಿಂದೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಘಟನೆ ನಡೆದ ಸ್ಥಳಕ್ಕೆ ಯೋಧ ರತನ್‌ ಬೋಪಣ್ಣ ಅವರ ಪಾಲಕರನ್ನು ಅಲ್ಲಿನ ಪೊಲೀಸರು ಕರೆಸಿಕೊಂಡಿದ್ದಾರೆ. 2019ರ ಏಪ್ರಿಲ್‌ ತಿಂಗಳಲ್ಲಿ ಸೇನೆಗೆ ಸೇರ್ಪಡೆಯಾಗಿದ್ದ ಯೋಧ ರತನ್‌ ಬೋಪಣ್ಣ, ಕಳೆದ ನವೆಂವರ್‌ ತಿಂಗಳಲ್ಲಿ ಮನೆಗೆ ಬಂದು ಹೋಗಿದ್ದರು. ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಕರ್ತವ್ಯದಲ್ಲಿದ್ದರು ಎಂದು ತಿಳಿದುಬಂದಿದೆ.

ಅಕ್ರಮ ವಲಸಿಗರ ಪತ್ತೆಗೆ ಕೊಡಗು ಪೊಲೀಸ್ ಬೇಟೆ..!

ತರಬೇತಿ ಕೊನೆಯ ಹಂತದಲ್ಲಿದ್ದ ರಚನ್‌ ಬೋಪಣ್ಣ, ಭಾನುವಾರ ಔಟ್‌ಪಾಸ್‌ ಪಡೆದು ತರಬೇತಿ ಶಿಬಿರದಿಂದ ಹೊರಹೋಗಿರುವ ಮಾಹಿತಿ ಕುಟುಂಬಸ್ಥರಿಗೆ ಲಭ್ಯವಾಗಿದೆ. ಶವದ ಬಳಿ ಡೆತ್‌ ನೋಟ್‌ ಕೂಡ ಪತ್ತೆಯಾಗಿದೆ.

ಅಂತ್ಯಕ್ರಿಯೆ ಜಬಲ್ಪುರದಲ್ಲಿರುವ ಸೇನಾ ತರಬೇತಿ ಶಿಬಿರದಲ್ಲಿ ನಡೆಯಲಿದೆ ಎಂದು ಸೇನೆಯ ಅಧಿಕಾರಿಗಳು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರಾದ ಚೀರಂಡ ಕಂದಾ ಸುಬ್ಬಯ್ಯ, ಪೊನ್ನಂಪೇಟೆ ಮಾಜಿ ಸೈನಿಕರ ಸಂಘ ಮಾಜಿ ಅಧ್ಯಕ್ಷ ಐನಂಡ ಮಂದಣ್ಣ ಹಾಗೂ ಸಹೋದರಿ ಅವರೊಂದಿಗೆ ರಾತ್ರಿ ಬೆಂಗಳೂರಿನಿಂದ ವಿಮಾನದಲ್ಲಿ ಜಬಲ್ಪುರಕ್ಕೆ ತೆರಳಿದ್ದಾರೆ. ರಚನ್‌ ಬೋಪಣ್ಣ ಅವರ ಪೋಷಕರು ಅನಾರೋಗ್ಯದ ಕಾರಣ ಮಗನ ಅಂತ್ಯಕ್ರಿಯೆಗೆ ತಲುಪಲು ಸಾಧ್ಯವಾಗಿಲ್ಲ.

click me!