ಈಗಾಗಲೇ ಮಂಗಳೂರು ಬಂದರು, ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಲಾಗುತ್ತಿದ್ದು, ಕೊರೋನಾ ವೈರಸ್ ತಡೆಯಲು ಎಲ್ಲಾ ರೀತಿಯ ಮುಂಜಾಗೃತೆಗಳನ್ನು ವಹಿಸಲಾಗಿದೆ. ಚೀನಾದ ವ್ಯಕ್ತಿಯೊಬ್ಬರು ಮಡಿಕೇರಿಗೆ ಬಂದಿದ್ದು, ಆತಂಕ ಸೃಷ್ಟಿಯಾಗಿದೆ.
ಮಡಿಕೇರಿ(ಮಾ.05): ಈಗಾಗಲೇ ಮಂಗಳೂರು ಬಂದರು, ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಲಾಗುತ್ತಿದ್ದು, ಕೊರೋನಾ ವೈರಸ್ ತಡೆಯಲು ಎಲ್ಲಾ ರೀತಿಯ ಮುಂಜಾಗೃತೆಗಳನ್ನು ವಹಿಸಲಾಗಿದೆ. ಚೀನಾದ ವ್ಯಕ್ತಿಯೊಬ್ಬರು ಮಡಿಕೇರಿಗೆ ಬಂದಿದ್ದು, ಆತಂಕ ಸೃಷ್ಟಿಯಾಗಿದೆ.
ಕೊಡಗು ಜಿಲ್ಲೆಯ ಕುಶಾಲನಗರದ ವ್ಯಕ್ತಿಯೊಬ್ಬರು ಫೆಬ್ರವರಿ 24 ರಂದು ಚೀನಾದಿಂದ ಭಾರತಕ್ಕೆ ಬಂದಿದ್ದು ಅವರ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾ ಸರ್ವೇಕ್ಷಣಾ ಘಟಕದ ಅಧಿಕಾರಿಗಳು ಸೋಮವಾರಪೇಟೆ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
ಪೊನ್ನಂಪೇಟೆ, ಕುಶಾಲನಗರ ಸೇರಿ ಮತ್ತೆ 12 ಹೊಸ ತಾಲೂಕು ರಚನೆ
ಕುಶಾಲನಗರದ ನಿವಾಸಿ ಮುಜೀಬುರ್ ರೆಹಮಾನ್ ಎಂಬವರು ಚೀನಾದಿಂದ ಬಂದ ಬಗ್ಗೆ ವರದಿಯಾಗಿದ್ದು, ರಾಜ್ಯ ಯೋಜನಾ ನಿರ್ದೇಶಕರು ಈ ಬಗ್ಗೆ ಮಾಹಿತಿ ಬಯಸಿರುವುದಾಗಿ ಪತ್ರ ಬರೆದಿರುವ ಜಿಲ್ಲಾ ಸರ್ವೇಕ್ಷಣಾ ಘಟಕದ ಅಧಿಕಾರಿಗಳು ಈ ವ್ಯಕ್ತಿಯ ಬಗ್ಗೆ ಸಂಪೂರ್ಣ ವಿಳಾಸದ ವಿವರ, ದೂರವಾಣಿ ಸಂಖ್ಯೆ ಮತ್ತು ಸಂಪೂರ್ಣ ಅನುಸರಣೆ ವರದಿಯನ್ನು ತುರ್ತಾಗಿ ನೀಡುವಂತೆ ಕೋರಿದ್ದಾರೆ.