'ಸುವರ್ಣ ನ್ಯೂಸ್' ಅದೃಷ್ಟದ ಗೂಬೆ ಕವರ್‌ ಸ್ಟೋರಿಗೆ ಕೋರ್ಟ್ ಶ್ಲಾಘನೆ

Kannadaprabha News   | Asianet News
Published : Apr 25, 2021, 10:15 AM ISTUpdated : Apr 25, 2021, 10:40 AM IST
'ಸುವರ್ಣ ನ್ಯೂಸ್' ಅದೃಷ್ಟದ ಗೂಬೆ ಕವರ್‌ ಸ್ಟೋರಿಗೆ ಕೋರ್ಟ್ ಶ್ಲಾಘನೆ

ಸಾರಾಂಶ

‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಕವರ್‌ ಸ್ಟೋರಿ ತಂಡದ ವರದಿಯಿಂದ ಬಯಲಾಗಿದ್ದ ಅದೃಷ್ಟದ ಗೂಬೆ ಹೆಸರಲ್ಲಿ ನಡೆಯುತ್ತಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ  ತೀರ್ಪು ಪ್ರಕಟವಾಗಿದೆ. ಪ್ರಕರಣದ ಎಲ್ಲ ಐವರು ಖತರ್ನಾಕ್‌ ಆರೋಪಿಗಳಿಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ, ತಲಾ 10 ಸಾವಿರ ದಂಡ ವಿಧಿಸಲಾಗಿದೆ. 

 ತುಮಕೂರು (ಏ.25):  ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಕವರ್‌ ಸ್ಟೋರಿ ತಂಡದ ವರದಿಯಿಂದ ಬಯಲಾಗಿದ್ದ ಅದೃಷ್ಟದ ಗೂಬೆ ಹೆಸರಲ್ಲಿ ನಡೆಯುತ್ತಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ತೀರ್ಪು ಪ್ರಕಟಿಸಿದೆ. ಪ್ರಕರಣದ ಎಲ್ಲ ಐವರು ಖತರ್ನಾಕ್‌ ಆರೋಪಿಗಳಿಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ, ತಲಾ 10 ಸಾವಿರ ದಂಡ ವಿಧಿಸಿ ಮಧುಗಿರಿಯ ನಾಲ್ಕನೇ ಹೆಚ್ಚುವರಿ ನ್ಯಾಯಾಲಯ ಆದೇಶ ಹೊರಡಿಸಿದೆ. ಇದೇ ವೇಳೆ, ಸುವರ್ಣ ನ್ಯೂಸ್‌ ವರದಿಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿರುವ ನ್ಯಾಯಾಧೀಶರಾದ ತಾರಕೇಶ್ವರ್‌ ಪಾಟೀಲ್‌, ವರದಿಗಾರನಿಗೆ ಬಹುಮಾನವನ್ನೂ ಘೋಷಿಸಿದ್ದಾರೆ.

ಕುಖ್ಯಾತ ಗೂಬೆ ಗ್ಯಾಂಗ್​- ಹಾಲಿ ಸಚಿವರಿಗೂ ಇದ್ಯಾ ಲಿಂಕ್​..? ...

ಆನಂದ್‌, ದೀಪು, ಚಿನ್ನು, ಜಯಕುಮಾರ್‌ ಮತ್ತು ವಿಜಯ್‌ ಶಿಕ್ಷೆಗೆ ಗುರಿಯಾಗಿರುವ ವಂಚಕರು. ಇವರು ತಮ್ಮ ಬಳಿ ಐದು ಕಾಲ್ಬೆರಳುಗಳುಳ್ಳ ಅದೃಷ್ಟದ ಗೂಬೆ ಇದೆ ಎಂದು ಹೇಳಿ ಸಾರ್ವಜನಿಕರನ್ನು ನಂಬಿಸುತ್ತಿದ್ದರು, ಖರೀದಿಗೆಂದು ಹಣದೊಂದಿಗೆ ಬರುತ್ತಿದ್ದವರನ್ನು ಬೆದರಿಸಿ ಸುಲಿಗೆ ಮಾಡಿ ಕಳುಹಿಸುತ್ತಿದ್ದರು.

ಚಿಕ್ಕಮಗಳೂರು: ಕಾಡು ಗೂಬೆಗಳ ಮಾರಾಟ, 7 ಮಂದಿ ಬಂಧನ ..

ಏನಿದು ಪ್ರಕರಣ?: ಕೊರಟಗೆರೆ ತಾಲೂಕು ಕಾಶಾಪುರ ಬಳಿ ಐದು ಬೆರಳುಗಳುಳ್ಳ ಅದೃಷ್ಟದ ಗೂಬೆ ಎಂದು ನಂಬಿಸಿ ಐದು ಮಂದಿ ಖತರ್ನಾಕ್‌ ಗ್ಯಾಂಗ್‌ ಸಾರ್ವಜನಿಕರಿಗೆ ವಂಚಿಸುತ್ತಿತ್ತು. ಐದು ಬೆರಳುಗಳಿದ್ದರೆ ಅದು ಅದು ಅದೃಷ್ಟದ ಗೂಬೆ ಎನ್ನುವ ಭಾವನೆ ಕೆಲವರಲ್ಲಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಆರೋಪಿಗಳು ಸಾರ್ವಜನಿಕರನ್ನು ವಂಚಿಸಿ ಸುಲುಗೆ ಮಾಡುತ್ತಿದ್ದರು. ನಾಲ್ಕು ಬೆರಳುಗಳುಳ್ಳ ಗೂಬೆಯ ಕಾಲಿಗೆ ಮತ್ತೊಂದು ಬೆರಳನ್ನು ಫೆವಿಕಾಲ್‌ ಮೂಲಕ ಅಂಟಿಸಿ ಈ ಗ್ಯಾಂಗ್‌ ವಂಚನೆ ನಡೆಸುತ್ತಿತ್ತು. ಈ ಗೂಬೆಗ್ಯಾಂಗ್‌ನ ಬೆನ್ನು ಹತ್ತಿದ ಕವರ್‌ ಸ್ಟೋರಿ ತಂಡ 2018ರ ಡಿಸೆಂಬರ್‌ 7 ರಂದು ವರದಿ ಪ್ರಸಾರ ಮಾಡಿತ್ತು. ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ತುಮಕೂರು ವರದಿಗಾರ ನೀಡಿದ ಸುಳಿವಿನ ಆಧಾರದ ಮೇಲೆ ಮಾಹಿತಿ ಪಡೆದ ಕವರ್‌ ಸ್ಟೋರಿ ತಂಡ ಒಂದು ವಾರಗಳ ಕಾಲ ದಂಧೆಕೋರರ ಕುರಿತು ರಹಸ್ಯ ಕಾರ್ಯಾಚರಣೆ ನಡೆಸಿತ್ತು. ಆರೋಪಿಗಳಾದ ಆನಂದ್‌, ದೀಪು, ಚಿನ್ನು, ಜಯಕುಮಾರ್‌ ಮತ್ತು ವಿಜಯ್‌ ವಿರುದ್ಧ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಕೊರಟಗೆರೆ ಪೊಲೀಸರಿಗೆ ನೀಡಿ ಆರೋಪಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿತ್ತು. ಬಳಿಕ ಪೊಲೀಸರು ಐದು ಮಂದಿ ವಿರುದ್ಧ ಚಾಜ್‌ರ್‍ ಶೀಟ್‌ ಸಲ್ಲಿಸಿದ್ದರು.

ಈ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಮಧುಗಿರಿ ನ್ಯಾಯಾಲಯ ಇದೀಗ ತೀರ್ಪು ಪ್ರಕಟಿಸಿದೆ.

ವರದಿಗಾರ ರವಿ ಕುಮಾರ್‌ಗೆ   15 ಸಾವಿರ ಬಹುಮಾನ

ಗೂಬೆ ಗ್ಯಾಂಗ್‌ನ ಬೆನ್ನುಬಿದ್ದು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಕವರ್‌ ಸ್ಟೋರಿ ವರದಿಗಾರ ರವಿಕುಮಾರ್‌ ಅವರಿಗೆ ನ್ಯಾಯಾಲಯ .15 ಸಾವಿರ ಬಹುಮಾನವನ್ನೂ ಪ್ರಕಟಿಸಿದೆ. ಆರೋಪಿಗಳಿಗೆ ವಿಧಿಸಿದ ತಲಾ 10 ಸಾವಿರ ದಂಡದಲ್ಲೇ ಈ ಬಹುಮಾನ ಘೋಷಿಸಿ ನ್ಯಾಯಾಧೀಶರಾದ ತಾರಕೇಶ್ವರ್‌ ಪಾಟೀಲ್‌ ಅವರು ಆದೇಶ ಹೊರಡಿಸಿದ್ದಾರೆ. ಟೀವಿ ವರದಿಯೊಂದಕ್ಕೆ ಈ ರೀತಿ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸುವುದು ನ್ಯಾಯಾಲಯದ ಇತಿಹಾಸದಲ್ಲೇ ಅತ್ಯಪರೂಪದ್ದಾಗಿದೆ. ಪ್ರಕರಣದಲ್ಲಿ ವಾದ ಮಂಡಿಸಿರುವ ಸರ್ಕಾರಿ ಅಭಿಯೋಜಕರಾಗಿ ನಿರಂಜನಮೂರ್ತಿ ಅವರು, ಈ ತೀರ್ಪಿನಿಂದ ದಂಧೆಕೋರರ ವಿರುದ್ಧದ ಹೋರಾಟಕ್ಕೆ ನಮಗೆ ಮತ್ತಷ್ಟುಬಲ ಬಂದಂತಾಗಿದೆ ಎಂದಿದ್ದಾರೆ.

PREV
click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ