ಎಂ. ಲಕ್ಷ್ಮಣ, ಸುನಿಲ್ ಬೋಸ್ ಗೆ ರಾಜ್ಯ ಕಾಯಕ ಸಮಾಜಗಳ ಒಕ್ಕೂಟ ಬೆಂಬಲ

Published : Apr 12, 2024, 06:46 PM IST
 ಎಂ. ಲಕ್ಷ್ಮಣ, ಸುನಿಲ್ ಬೋಸ್ ಗೆ ರಾಜ್ಯ ಕಾಯಕ ಸಮಾಜಗಳ ಒಕ್ಕೂಟ ಬೆಂಬಲ

ಸಾರಾಂಶ

ಕೋಮುವಾದಿ ಬಿಜೆಪಿ ದುರಾಡಳಿತ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರದ 5 ಗ್ಯಾರೆಂಟಿ ಕಾರ್ಯಕ್ರಮ, ಕಾಂಗ್ರೆಸ್‌ ನ ನ್ಯಾಯಪತ್ರಗಳ ಬಗ್ಗೆ ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟ ಒಲವು ಹೊಂದಿದೆ

 ಮೈಸೂರು : ಕೋಮುವಾದಿ ಬಿಜೆಪಿ ದುರಾಡಳಿತ ಹಾಗೂ ಸಿದ್ದರಾಮಯ್ಯ ಅವರ ಸರ್ಕಾರದ 5 ಗ್ಯಾರೆಂಟಿ ಕಾರ್ಯಕ್ರಮ, ಕಾಂಗ್ರೆಸ್‌ ನ ನ್ಯಾಯಪತ್ರಗಳ ಬಗ್ಗೆ ಕರ್ನಾಟಕ ರಾಜ್ಯ ಕಾಯಕ ಸಮಾಜಗಳ ಒಕ್ಕೂಟ ಒಲವು ಹೊಂದಿದೆ. ಹೀಗಾಗಿ, ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಮೈಸೂರು- ಕೊಡಗು ಕ್ಷೇತ್ರದಲ್ಲಿ ಎಂ. ಲಕ್ಷ್ಮಣ ಹಾಗೂ ಚಾಮರಾಜನಗರ ಕ್ಷೇತ್ರದಲ್ಲಿ ಸುನಿಲ್ ಬೋಸ್ ಅವರನ್ನು ಬೆಂಬಲಿಸಲಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷರಾದ ವಿಧಾನಪರಿಷತ್ತು ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ ತಿಳಿಸಿದರು.

2014 ಮತ್ತು 2019ರ ಚುನಾವಣೆಯಲ್ಲಿ ಗೆದ್ದ ಬಳಿಕ ಬಿಜೆಪಿ ಶ್ರೀಮಂತರ ಮತ್ತು ಆರ್‌.ಎಸ್‌.ಎಸ್ ಕೈಗೊಂಬೆಯಾಗಿ ಅನೇಕ ಪ್ರಮಾದ ಮಾಡಿದೆ. 2014 ರಲ್ಲಿ ಬಿಜೆಪಿ ಪ್ರಣಾಳಿಕೆಯನ್ನು ನಂಬಿ ಮತ ಹಾಕಿದವರ ಖಾತೆಗೆ 15 ಲಕ್ಷ ರೂ. ಈವರೆಗೂ ಜಮಾ ಆಗಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಆಗಲಿಲ್ಲ ಎಂದು ಅವರು ಕಿಡಿಕಾರಿದರು.

ನೋಟು ಅಮಾನ್ಯೀಕರಣ ಅನೇಕ ಅನಾಹುತ ಸೃಷ್ಟಿಸಿದೆ. ಕೋವಿಡ್ ನಿರ್ವಹಣೆ ವೈಫಲ್ಯದಿಂದ ಸುಮಾರು 4.5 ದಶಲಕ್ಷ ಜನರು ಸಾವಿಗೀಡಾದರು. ಸಡನ್ ಲಾಕ್‌ ಡೌನ್‌ ನಿಂದ 45 ಕೋಟಿ ಅಸಂಘಟಿತ ಕಾರ್ಮಿಕರು ಬೀದಿಪಾಲಾದರು. ಚುನಾವಣಾ ಬಾಂಡ್‌ ಗಳ ಮೂಲಕ ಲಕ್ಷಾಂತರ ಕೋಟಿ ಹಣ ಉದ್ಯಮಿಗಳಿಂದ ಪಡೆದಿದ್ದಾರೆ. ಹೀಗಾಗಿ, ಬಿಜೆಪಿ ಸಂಪೂರ್ಣ ವಿಫಲವಾಗಿರುವ ಕಾರಣ ಕಾಂಗ್ರೆಸ್ ಬೆಂಬಲಿಸಲಾಗುತ್ತಿದೆ ಎಂದರು.

ಒಕ್ಕೂಟದ ಪದಾಧಿಕಾರಿಗಳಾದ ನಂಜಪ್ಪ, ದಾಸಪ್ಪಶೆಟ್ಟಿ, ಕೆಂಪಶೆಟ್ಟಿ, ಭದ್ರಶೆಟ್ಟಿ ಇದ್ದರು.

PREV
Read more Articles on
click me!

Recommended Stories

ಬಾಗಲಕೋಟೆ: ದಾಸೋಹ ಚಕ್ರವರ್ತಿ, ಬಂಡಿಗಣಿ ಮಠದ ದಾನೇಶ್ವರ ಸ್ವಾಮೀಜಿ ಲಿಂಗೈಕ್ಯ!
ಬಾರ್ ಆಗಿ ಮಾರ್ಪಟ್ಟ KSRTC ಬಸ್: ಪ್ರಯಾಣದ ಮಧ್ಯೆಯೇ ಮದ್ಯ ಸೇವನೆ!