ಆದ್ರೆ ಯುವತಿಯ ಮನೆಯವರು ಹುಡಗನಿಗೆ ಮದುವೆ ಮಾಡಿಕೊಡಲು ಒಪ್ಪದ ಕಾರಣ, ಯುವತಿಗೆ ಮನಯೆಲ್ಲಿಯೇ ಹಲ್ಲೆ ನಡರಸಿರೋ ಘಟನೆ ಕೂಡ ನಡೆದಿದೆ. ಇದೆಲ್ಲದ್ರಿಂದ ಬೇಸರಗೊಂಡ ಯುವತಿ, ತನ್ನ ಪ್ರಿಯತಮನೊಂದಿಗೆ ಮದುವೆ ಆಗಲು ನಿಶ್ಚಯಿಸಿದ್ದು, ಇಬ್ಬರೂ ಪರಸ್ಪರ ಒಪ್ಪಿ ವಿವಾಹವಾಗಿದ್ದಾರೆ.
ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ನ.04): ಪ್ರೀತಿಗೆ ಯಾವುದೇ ಜಾತಿ, ಧರ್ಮ ಎನ್ನುವ ಭೇದವಿಲ್ಲ. ಆದ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ ಜೋಡಿಯೊಂದು ಅಂತರ್ಜಾತಿ ವಿವಾಹವಾಗಿ ನ್ಯಾಯಕ್ಕಾಗಿ ರಕ್ಷಣೆಗಾಗಿ ಪೊಲೀಸರ ಮೊರೆ ಹೋದ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ.....
undefined
ಹೀಗೆ, ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗ ರಕ್ಷಣೆ ಕೋರಿ ನಿಂತಿರುವ ಮುದ್ದಾದ ಯುವ ಜೋಡಿ. ಮೊಳಕಾಲ್ಮೂರು ತಾಲ್ಲೂಕಿನ ಬಿ.ಜಿ ಕೆರೆ ಗ್ರಾಮದ ಹರೀಶ್ ಹಾಗೂ ಪ್ರಿಯಾ(ಹೆಸರು ಬದಲಾಯಿಸಲಾಗಿದೆ) ಕಳೆದ ಮೂರ್ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಈ ವಿಷಯ ಮನೆಯಲ್ಲಿ ತಿಳಿದ ಮೇಲೆ ನಮ್ಮ ಮನೆಯಲ್ಲಿ ಬೇರೆ ಜಾತಿಯ ಹುಡುಗನನ್ನು ಮದುವೆ ಆಗಿದ್ದೀಯ ಎನ್ನುವ ಕಾರಣಕ್ಕೆ ವಿವಾಹ ಮಾಡಿಕೊಡಲಿ ನಿರಾಕರಿಸಿದರು. ಭೋವಿ ಜನಾಂಗದ ಯುವಕ ಹರೀಶ್, ಕುರುಬ ಜನಾಂಗದ ಯುವತಿ ಪ್ರಿಯಾ ಇದೆಲ್ಲವನ್ನೂ ಲೆಕ್ಕಿಸದೇ ಮನೆಯವರಿಗೆ ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ. ಆದ್ರೆ ಯುವತಿಯ ಮನೆಯವರು ಹುಡಗನಿಗೆ ಮದುವೆ ಮಾಡಿಕೊಡಲು ಒಪ್ಪದ ಕಾರಣ, ಯುವತಿಗೆ ಮನಯೆಲ್ಲಿಯೇ ಹಲ್ಲೆ ನಡರಸಿರೋ ಘಟನೆ ಕೂಡ ನಡೆದಿದೆ. ಇದೆಲ್ಲದ್ರಿಂದ ಬೇಸರಗೊಂಡ ಯುವತಿ, ತನ್ನ ಪ್ರಿಯತಮನೊಂದಿಗೆ ಮದುವೆ ಆಗಲು ನಿಶ್ಚಯಿಸಿದ್ದು, ಇಬ್ಬರೂ ಪರಸ್ಪರ ಒಪ್ಪಿ ವಿವಾಹವಾಗಿದ್ದಾರೆ. ಆದ್ರೆ ಮನೆಯವರು ಇದನ್ನು ಒಪ್ಪದ ಕಾರಣ, ನಮ್ಮ ಮನೆಯವರಿಂದ ನನಗೆ ಭಯವಿದೆ. ಪೊಲೀಸರು ನಮ್ಮ ಜೋಡಿಗೆ ರಕ್ಷಣೆ ಕೊಡಬೇಕು ಎಂದು ಯುವತಿ ಮನವಿ ಮಾಡಿದ್ದಾರೆ.
'ಗಣಪತಿ ನಮ್ಮ ಸಂಸ್ಕೃತಿ ಅಲ್ಲ' ಮತ್ತೆ ಪುನರುಚ್ಚರಿಸಿದ ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀಗಳು!
ಇಬ್ಬರೂ ಅಕ್ಕ ಪಕ್ಕದ ಊರಿನವರಾಗಿದ್ದರಿಂದ ವಿಧ್ಯಾಭ್ಯಾಸ ಮಾಡುವಾಗ ಇಬ್ಬರಿಗೂ ಪ್ರೀತಿ ಹುಟ್ಟಿತು. ನಾಲ್ಕು ವರ್ಷದ ಪ್ರೀತಿ ಆಗಿದ್ದರಿಂದ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿರುವ ಕಾರಣಕ್ಕೆ ಮದುವೆ ಆಗಿದ್ದೀವಿ. ಆದ್ರೆ ಮದುವೆ ಆದಾಗನಿಂದ ಎರಡು ಮನೆ ಕಡೆಯವರಿಂದಲೂ ಭಯ ಶುರುವಾಗಿತ್ತು. ಎಲ್ಲಿ ಯಾವ ಕಡೆಯುಂದ ಬಂದು ನಮ್ಮ ಮೇಲೆ ಅಟ್ಯಾಕ್ ಮಾಡ್ತಾರೋ ಎನ್ನುವ ಆತಂಕವಿತ್ತು. ಅದಕ್ಕೆ ಎಸ್ಪಿ ಅವರ ಬಳಿ ಬಂದು ರಕ್ಷಣೆ ಕೋರಿದ್ದೀವಿ, ಎಸ್ಪಿ ಅವರು ಕೂಡ ಉತ್ತಮವಾಗಿ ಸ್ಪಂದಿಸಿದ್ದಾರೆ. ಜೀವನದಲ್ಲಿ ಬರೀ ಓಡಿ ಹೋಗುವುದೇ ಕೊನೆಯಲ್ಲ, ಲೈಫ್ ನಲ್ಲಿ ಏನಾದ್ರು ಉತ್ತಮ ಸಾಧನೆ ಮಾಡಿ ಎಂದು ಬುದ್ದಿ ಮಾತು ಕೇಳಿದರು. ಅಲ್ಲದೇ ನಿಮಗೆ ಯಾವುದೇ ತೊಂದರೆ ಆಗದಂತೆ ಪೊಲೀಸರಿಗೆ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದರು ಎಂದು ಯುವಕ ತಿಳಿಸಿದರು.
ಒಟ್ಟಾರೆಯಾಗಿ ಪ್ರೀತಿ ಮಾಡಿ ಓಡಿ ಹೋಗಿ ಮದುವೆ ಆಗುವುದು ದೊಡ್ಡದಲ್ಲ, ಮೇಲಾಗಿ ಇಬ್ಬರು ಸಂತೋಷದಿಂದ ಜೀವನ ಸಾಗಿಸಿದ್ರೆ ಅದೇ ಸಮಾಜಕ್ಕೆ ಕೊಡುವ ಒಳ್ಳೆಯ ಸಂದೇಶ.