ಬೆದರಿಕೆಗೆ ಹೆದರಿ ವಿಷ ಸೇವಿಸಿದ್ದ ಪ್ರೇಯಸಿಯೂ ಸಾವು!

Published : Nov 23, 2018, 11:32 AM IST
ಬೆದರಿಕೆಗೆ ಹೆದರಿ ವಿಷ ಸೇವಿಸಿದ್ದ ಪ್ರೇಯಸಿಯೂ ಸಾವು!

ಸಾರಾಂಶ

ಬ್ಲಾಕ್‌ಮೇಲ್‌ಗೆ ಹೆದರಿ ವಿಷ ಸೇವಿಸಿದ್ದ ಪ್ರೇಮಿಗಳಿಬ್ಬರೂ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವನ್ನಪ್ಪಿದ್ದಾರೆ.

ಶಿವಮೊಗ್ಗ[ನ.23]: ಬ್ಲಾಕ್‌ಮೇಲ್‌ಗೆ ಹೆದರಿ ಪ್ರೇಮಿಗಳಿಬ್ಬರು ವಿಷ ಸೇವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವನ್ನಪ್ಪಿದ್ದಾರೆ.

ಶಿವಮೊಗ್ಗದ ಆಯನೂರು ಸಮೀಪದ ಮಂಡಘಟ್ಟ ಬಳಿ ಪ್ರೇಮಿಗಳಿಬ್ವರು ಒಟ್ಟಿಗಿರುವುದನ್ನು ವಿಡಿಯೋ ಮಾಡಿದ್ದ ಮೂವರು ಅನ್ಯ ಕೋಮಿನ ಯುವಕರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೇ ಹಣ ಕೊಡದಿದ್ದರೆ ವಿಡಿಯೋವನ್ನು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿ ಮರ್ಯಾದೆ ಹರಾಜು ಹಾಕುವುದಾಗಿ ಹೆದರಿಸಿದ್ದರು.

ಮನನೊಂದ ಪ್ರೇಮಿಗಳಿಬ್ಬರು ಸೋಮವಾರ ವಿಷ ಸೇವಿಸಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಪ್ರಿಯಕರ ಸಂಜಯ್ ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 21 ಸಾವನ್ನಪ್ಪಿದ್ದು, ಪ್ರೇಯಸಿಯ ಸ್ಥಿತಿ ಚಿಮತಾಜನಕವಾಗಿತ್ತು. ಆದರೀಗ ಜೀವನ್ಮರಣ ಸ್ಥಿತಿಯಲ್ಲಿದ್ದ ಪ್ರಾಪ್ತ ಬಾಲಕಿ ಕೀರ್ತನಾ ಕೂಡಾ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. 

ಸಂಜು ಮತ್ತಿ ಕೀರ್ತಿ.. ಅದೊಂದು ವಿಡಿಯೋ.. ಪ್ರೇಮ್ ಕಹಾನಿ ಕ್ರೈಂ ಸ್ಟೋರಿ ಆಗಿದ್ದು ಹೇಗೆ?

ಈಗಾಗಲೇ ಕುಂಸಿ ಪೊಲೀಸರಿಂದ ಆರೋಪಿಗಳ ಬಂಧಿಸಿದ್ದಾರೆ. ಪ್ರಕರಣದ ಗಂಭೀರವಾಗಿರುವುದರಿಂದ ಆಯನೂರು ಮಂಡಘಟ್ಟದಲ್ಲಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ