ಉತ್ತರಕನ್ನಡ‌: ಕೆಸರಿನಲ್ಲಿ ಸಿಲುಕಿದ ಮತಯಂತ್ರಗಳನ್ನು ಸಾಗಿಸುತ್ತಿದ್ದ ಲಾರಿ

By Girish Goudar  |  First Published May 11, 2023, 10:04 AM IST

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಪಟ್ಟಣದ ಹವಗಿಯ ಸರಕಾರಿ ಪದವಿ ಕಾಲೇಜಿನ‌ ಭದ್ರತಾ ಕೊಠಡಿಯಿಂದ ಕುಮಟಾಕ್ಕೆ ಸಾಗಿಸುತ್ತಿದ್ದ ವೇಳೆ ನಡೆದ ಘಟನೆ. 


ಕಾರವಾರ(ಮೇ.11): ಮತಯಂತ್ರಗಳನ್ನು ಸಾಗಿಸುತ್ತಿದ್ದ ಕಂಟೈನರ್ ಲಾರಿ ಕೆಸರಿನಲ್ಲಿ ಹುದುಗಿದ ಘಟನೆ ಉತ್ತರಕನ್ನಡ‌ ಜಿಲ್ಲೆಯ ಹಳಿಯಾಳದಲ್ಲಿ ಇಂದು(ಗುರುವಾರ) ಬೆಳಗಿನ ಜಾವ ನಡೆದಿದೆ. ಹಳಿಯಾಳ ಪಟ್ಟಣದ ಹವಗಿಯ ಸರಕಾರಿ ಪದವಿ ಕಾಲೇಜಿನ‌ ಭದ್ರತಾ ಕೊಠಡಿಯಿಂದ ಕುಮಟಾಕ್ಕೆ ಸಾಗಿಸುತ್ತಿದ್ದ ವೇಳೆ ಈ ಘಟನೆ ಜರುಗಿದೆ. 

ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ಕಂಟೈನರ್ ಲಾರಿ ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಭಾರೀ ಮಳೆ ಸುರಿದಿದ್ದ ಕಾರಣ ಕಾಲೇಜು ಮೈದಾನದ ಕೆಸರಿನಲ್ಲಿ ಮತಯಂತ್ರಗಳನ್ನು ಸಾಗಿಸುತ್ತಿದ್ದ ಲಾರಿ ಸಿಲುಕಿಕೊಂಡಿತ್ತು. 

Latest Videos

undefined

KARNATAKA ASSEMBLY ELECTION: ಭಟ್ಕಳದಲ್ಲಿ ಬಿಜೆಪಿ-ಕಾಂಗ್ರೆಸ್ ಮಾತಿನ ಚಕಮಕಿ: ಲಘು ಲಾಠಿ ಪ್ರಹಾರ!

ಜೆಸಿಬಿ ಮೂಲಕ ಸತತ 1.30 ಗಂಟೆಗಳ ಪ್ರಯತ್ನದ ಬಳಿಕ ಕಂಟೈನರ್ ಲಾರಿಯನ್ನು ಹೊರಗೆಳೆಯಲಾಗಿದೆ. ನಂತರ ಅಧಿಕಾರಿಗಳು ಮತಯಂತ್ರಗಳನ್ನು ಕುಮಟಾ ಬಾಳಿಗಾ ಕಾಲೇಜಿನ ಭದ್ರತಾ ಕೊಠಡಿಯಲ್ಲಿರಿಸಿದ್ದಾರೆ. 

click me!