ಉಡುಪಿಯ ಅಂಬಲಪಾಡಿಯ ರಾ.ಹೆ.66ರಲ್ಲಿ ಊಟಕ್ಕಾಗಿ ಅಕ್ಕಿ ಬೇಡುತಿದ್ದ ಇಬ್ಬರು ಬಾಲಕರಿಗೆ ಸಮಾಜಸೇವಕ ಅಂಬಲಪಾಡಿ ವಿಶು ಶೆಟ್ಟಿಅವರು 20 ಕೆಜಿ ಅಕ್ಕಿ ಕೊಟ್ಟು ಅವರನ್ನು ಹೆತ್ತವರಿಗೆ ಒಪ್ಪಿಸಿದ್ದಾರೆ.
ಉಡುಪಿ(ಮೇ 12): ಇಲ್ಲಿನ ಅಂಬಲಪಾಡಿಯ ರಾ.ಹೆ.66ರಲ್ಲಿ ಊಟಕ್ಕಾಗಿ ಅಕ್ಕಿ ಬೇಡುತಿದ್ದ ಇಬ್ಬರು ಬಾಲಕರಿಗೆ ಸಮಾಜಸೇವಕ ಅಂಬಲಪಾಡಿ ವಿಶು ಶೆಟ್ಟಿಅವರು 20 ಕೆಜಿ ಅಕ್ಕಿ ಕೊಟ್ಟು ಅವರನ್ನು ಹೆತ್ತವರಿಗೆ ಒಪ್ಪಿಸಿದ್ದಾರೆ.
ಬಡ ಕೂಲಿ ಕಾರ್ಮಿಕರ ಮಕ್ಕಳಾದ ಈ ಬಾಲಕರು ತಮಗೆ ಮೇ 3ರ ವರೆಗೆ ಉಚಿತ ಊಟ ಸಿಗುತ್ತಿತ್ತು. ನಂತರ ಮನೆಯಲ್ಲಿದ್ದ ಅಕ್ಕಿ ಖಾಲಿಯಾಗಿದೆ. ತಂದೆಗೆ ಉದ್ಯೋಗ ಸಿಗುತ್ತಿಲ್ಲ, ತಾಯಿಯ ಆರೋಗ್ಯ ಸರಿ ಇಲ್ಲ. ಆದ್ದರಿಂದ ಮನೆಯಲ್ಲಿ ಊಟಕ್ಕೆ ಅಕ್ಕಿ ಇಲ್ಲದೆ ಬೇಡುತ್ತಿರುವುದಾಗಿ ತಿಳಿಸಿದರು ಎಂದು ವಿಶು ಶೆಟ್ಟಿಹೇಳಿದ್ದಾರೆ.
ಇಂದು ಮಂಗಳೂರಿಗೆ ಬರಲಿದ್ದಾರೆ 177 UAE ಪ್ರಯಾಣಿಕರು
ಮಕ್ಕಳ ತಾಯಿಯನ್ನು ಭೇಟಿಯಾಗಿ, ಮಕ್ಕಳನ್ನು ಬೀದಿಯಲ್ಲಿ ಬೇಡಲು ಬಿಡಬೇಡಿ ಎಂದು ಮನವರಿಕೆ ಮಾಡಿ, ಅಸಹಾಯಕ ಕುಟುಂಬಕ್ಕೆ 20 ಕೆಜಿ ಅಕ್ಕಿ ಹಾಗೂ ದಿನಸಿ ಸಾಮಗ್ರಿ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಇಂತಹ ಅಸಹಾಯಕ ಮಕ್ಕಳು ಬೀದಿಗೆ ಬೀಳುವ ಸಂಭವವಿದೆ. ಆದ್ದರಿಂದ ಸಂಬಂಧಪಟ್ಟಅಧಿಕಾರಿಗಳು/ಇಲಾಖೆಯವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ವಿಶು ಶೆಟ್ಟಿಮನವಿ ಮಾಡಿದ್ದಾರೆ.