ಮೂಡಿಗೆರೆ ಅರಣ್ಯ ಅಧಿಕಾರಿಗಳು ನಿಜಕ್ಕೂ ಭೈರನನ್ನೇ ಸೆರೆ ಹಿಡಿದ್ರಾ...?, ಲಕ್ಷಾಂತರ ರುಪಾಯಿ ಖರ್ಚು ಮಾಡಿದ್ದು ಭೈರನಿಗೋ... ಬೇರೆಯವನಿಗೋ..., ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಚರಣೆ ಬಗ್ಗೆಯೇ ಅನುಮಾನ...?
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಡಿ.20): ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಿಡಿದ ನರಹಂತಕ ಒಂಟಿ ಸಲಗ ಅದು. ಅವನನ್ನ ಹಿಡಿದಿದ್ದರಿಂದ ಸಾವಿರಾರು ಜನ ನಿಟ್ಟುಸಿರು ಬಿಟ್ಟಿದ್ದರು. ಅಧಿಕಾರಿಗಳು ಅಬ್ಬಾ... ಸದ್ಯ... ಇಬ್ರರನ್ನ ಬಲಿ ಪಡೆದಿದ್ದ ಹೇಗೋ ಸಿಕ್ಕಿಬಿದ್ದ ಅಂತ ಏದುಸಿರು ಬಿಟ್ಟಿದ್ದರು. ಆದ್ರೀಗ, ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರ ಹಾಗೂ ಜನರ ಕಣ್ಣಿಗೆ ಮಣ್ಣೆರಚಿದರಾ ಎಂಬ ಪ್ರಶ್ನೆ ಮೂಡಿದೆ. ಯಾಕಂದ್ರೆ, ಅಧಿಕಾರಿಗಳು ಮೂಡಿಗೆರೆ ಭೈರನನ್ನ ಹಿಡುದ್ವಿ ಅಂತಿದ್ರೆ ಜನ ಅವ್ನು ಮೂಡಿಗೆರೆ ಭೈರ ಅಲ್ಲ ಅಂತಿದ್ದಾರೆ. ಯಾಕಂದ್ರೆ, ಮೂಡಿಗೆರೆ ಭೈರ ಶಿಶಿಲ-ಭೈರಾಪುರ ಕಾಡಲ್ಲಿ ಆರಾಮಾಗಿದ್ದಾನೆ. ಹಾಗಾದ್ರೆ, ಅಧಿಕಾರಿಗಳು ಹಿಡಿದಿದ್ದು ಯಾವ ಆನೆ ಎಂಬ ಜನರಲ್ಲಿ ಪ್ರಶ್ನೆ ಮೂಡಿದೆ.
undefined
ಮೂಡಿಗೆರೆ ಭೈರನನ್ನ ಸೆರೆ ಹಿಡಿಯದೇ ಬೇರೆ ಆನೆ ಸೆರೆ ಹಿಡಿದಿರೋ ಅನುಮಾನ ಜನರಲ್ಲಿ ..?
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭೈರನ ಹೆಸರಲ್ಲಿ ಕಾಫಿನಾಡ ಮಲೆನಾಡು ಭಾಗದಲ್ಲಿ ಆಗಬಾರದ್ದೆಲ್ಲಾ ಆಗಿದೆ. ಶಾಸಕರು ಒದೆ ತಿಂದರು. ಇಬ್ಬರು ಉಸಿರು ಚೆಲ್ಲಿದರು. ಜನ ರೊಚ್ಚಿಗೆದ್ದು ಅರಣ್ಯ ಇಲಾಖೆ ಗೇಟ್ ಮುರಿದು ಕಚೇರಿಗೆ ಮುತ್ತಿಗೆ ಹಾಕಿದ್ರು. ಅರಣ್ಯ ಇಲಾಖೆ ಕಳ್ಳಬೇಟೆ ನಿಗ್ರಹ ಕಚೇರಿಯನ್ನ ದ್ವಂಸ ಮಾಡಿದ್ರು. ಶಾಸಕರ ಮೇಲೆ ಹಲ್ಲೆ ಮಾಡಿದರು ಊರು ಬಿಟ್ಟರು. ಹೇಳೋಕೆ ಒಂದೋ ಎರಡೋ. ಎಲ್ಲದಕ್ಕೂ ಕಾರಣ ಭೈರ. ಅಲಿಯಾಸ್ ಮೂಡಿಗೆರೆ ಭೈರ. ಯಾವಾಗ ಇವನ ಕಾಟ ಹೆಚ್ಚಾಯ್ತೋ ಆಗ ಸರ್ಕಾರ ಆನೆ ಹಿಡಿಯೋದಕ್ಕೆ ಅನುಮತಿ ನೀಡ್ತು. ಆದ್ರೆ, ಬಂದ ಆನೆಗಳು ಮೂಡಿಗೆರೆ ಬೈರ ನಾಟಕ ನೋಡಿ ವಾಪಸ್ ಹೋಗಿದ್ದರು. ಅವರು ವಾಪಸ್ ಹೋಗುತ್ತಿದ್ದಂತೆ ಮೂಡಿಗೆರೆ ಭೈರ ಮತ್ತೊಂದು ಬಲಿ ಪಡೆದಿದ್ದ. ಆಗ, ರೊಚ್ಚಿಗೆದ್ದ ಸ್ಥಳಿಯರು ಶಾಸಕರ ಮೇಲೂ ಹಲ್ಲೆಗೆ ಮುಂದಾಗಿದ್ದರು. ಆಗ ಸರ್ಕಾರ ಮತ್ತೆ ಮೂಡಿಗೆರೆ ಭೈರ ಸೇರಿದಂತೆ ಒಟ್ಟು ಮೂರು ಆನೆಯನ್ನ ಹಿಡಿಯಲು ಮುಂದಾಗಿದ್ದರು. ಅದರಂತೆ ಅಧಿಕಾರಿಗಳು ಹಿಡಿದರು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಮೂಡಿಗೆರೆ ಭೈರನನ್ನ ಹಿಡುದ್ವಿ ಅಂತ ಜನರ ಮುಂದೆ ಫೋಸ್ ಕೊಟ್ಟಿದ್ರು. ಅಂದು ಜನ ಕೂಡ ಸುಮ್ಮನಾಗಿದ್ದರು. ಆದ್ರೆ, ಈಗ ಅದೇ ಭೈರನ ಅಬ್ಬರ ಕಂಡು ಸ್ಥಳೀಯರಾದ ರಜನ್ ಅಜಿತ್ ಸರ್ಕಾರ-ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಮಗಳೂರು: ಕೆರೆಯಲ್ಲಿ ಮುಳುಗಿ ತಾಯಿ, ಮಗಳು ದಾರುಣ ಸಾವು
ನರಹಂತಕನನ್ನ ಸೆರೆಹಿಡಿಯದಿರೋದು ಜನರ ಆತಂಕಕ್ಕೆ ಕಾರಣ :
ಮೂಡಿಗೆರೆ ಭೈರ ಅನ್ನೋದು ಅರಣ್ಯ ಇಲಾಖೆಯ ವಾದ. ಆದರೆ, ಸ್ಥಳಿಯರು ಇವನೇ ಮೂಡಿಗೆರೆ ಭೈರ ಅಂತಿದ್ದಾರೆ. ಅಧಿಕಾರಿಗಳು ಯಾವ್ದೋ ಆನೆ ಹಿಡಿದು ಮೂಡಿಗೆರೆ ಭೈರನನ್ನ ಹಿಡುದ್ವಿ ಅಂತ ಯಾಮಾರಿಸುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಉತ್ತರ ದೇಹ. ಗೂರು ಬೆನ್ನು. ಉದ್ದ ಕೋರೆ. ಇವನೇ ಮೂಡಿಗೆರೆ ಭೈರ. ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಆನೆ ಹಾವಳಿಯಿಂದ ನೆಮ್ಮದಿ ಕಳೆದುಕೊಂಡಿರೋ ಜನ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರ ಅನುಮತಿ ನೀಡಿದ್ದು ಮೂರು ಆನೆ ಹಿಡಿಯೋದಕ್ಕೆ. ಮೂರು ಆನೆ ಹಿಡಿದ ಮೇಲೂ ಅಧಿಕಾರಿಗಳು ಏಕೆ ಕಾರ್ಯಚರಣೆ ಮುಂದುವರೆಸಿದ್ದಾರೆ.
ಚಿಕ್ಕಮಗಳೂರು: ಒಂದೇ ಕುಣಿಕೆಗೆ ಕೊರಳೊಡ್ಡಿದ ಪ್ರೇಮಿಗಳು
ಮೂಡಿಗೆರೆ ಭೈರ ಈಗಾಗಲೇ 2 ಬಲಿ ಪಡೆದಿದ್ದಾನೆ. ಹೊಲ-ಗದ್ದೆ-ತೋಟಗಳನ್ನ ನಾಶ ಮಾಡಿದ್ದಾನೆ. ಕೂಡಲೇ ಅವನನ್ನ ಸೆರೆ ಹಿಡಿಯಬೇಕೆಂದು ಆಗ್ರಹಿಸಿದ್ದಾರೆ. ಒಟ್ಟಾರೆ, ಆನೆ ಹಿಡಿಯೋ ನೆಪದಲ್ಲಿ ಸರ್ಕಾರ ಲಕ್ಷ-ಲಕ್ಷ ಹಣ ಬಿಡುಗಡೆ ಮಾಡಿದೆ. ಪಾಪ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಆನೆಗಳನ್ನೂ ಸೆರೆ ಹಿಡಿದಿದ್ದಾರೆ. ಆದರೆ, ಜನರ ಜೀವ ತೆಗೆಯುತ್ತಿರೋ ನರಹಂತಕನನ್ನ ಸೆರೆಹಿಡಿಯದಿರೋದು ಜನರ ಆತಂಕಕ್ಕೆ ಕಾರಣವಾಗಿದೆ. ಯಾಕಂದ್ರೆ, ಮೂಡಿಗೆರೆ ಭೈರನಿಂದ ಜನ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದಾರೆ.
ಕಾಡಂಚಿನ ಗ್ರಾಮಗಳ ಜನ ಹೊಲಗದ್ದೆ-ತೋಟಗಳಿಗೆ ಹೋಗೋದಕ್ಕೂ ಭಯಪಡುವಂತಹಾ ಸ್ಥಿತಿ ನಿರ್ಮಾಣವಾಗಿದೆ. ಮೂಡಿಗೆರೆ ಭೈರನನ್ನ ಹಿಡಿಯದಿದ್ರೆ, ಸರ್ಕಾರ ಕೂಡಲೇ ಜನರ ನೆಮ್ಮದಿ ಹಾಳು ಮಾಡಿರೋ ಒಂಟಿಸಲಗ, ನರಹಂತಕ ಭೈರನನ್ನ ಹಿಡಿದು ಜನ ನೆಮ್ಮದಿಯಿಂದ ಬದುಕುವಂತಹಾ ಸ್ಥಿತಿ ನಿರ್ಮಿಸಬೇಕಿದೆ.