ಕಮಲ ಮುಡಿದ ಬಾಗಲಕೋಟೆ: ಸಿದ್ದು ಮಾಡಿದ್ರು ಸ್ವಲ್ಪ ಜಾದೂ!

By Web Desk  |  First Published Sep 3, 2018, 5:20 PM IST

ಕರ್ನಾಟಕ ಸ್ಥಳೀಯ ಸಂಸ್ಥೆ ಫಲಿತಾಂಶ! ಬಿಜೆಪಿ ಕೈ ಹಿಡಿದ ಬಾಗಲಕೋಟೆ ಜಿಲ್ಲೆ! ಜಿಲ್ಲೆಯಲ್ಲಿ ಮುಂದುವರೆದ ಬಿಜೆಪಿ ಗೆಲುವಿನ ನಾಗಾಲೋಟ! ಸಿದ್ದು ‘ಕೈ’ಬಿಡದ ಬಾದಾಮಿ ಜನತೆ!


ಬಾಗಲಕೋಟೆ(ಸೆ.3): ಕರ್ನಾಟಕ ನಗರ ಸ್ಥಳೀಯ ಸಂಸ್ಥೆ  ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಅದರಂತೆ ಬಾಗಲಕೋಟೆಯಲ್ಲಿ ಈ ಬಾರಿ ಬಿಜೆಪಿ ಪಕ್ಷ ಮೇಲುಗೈ ಸಾಧಿಸಿದೆ. ಈ ಮೂಲಕ ವಿಧಾನಸಭೆ ಚುನಾವಣೆಯಂತೆಯೇ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಬಿಜೆಪಿ ತನ್ನ ಗೆಲುವಿನ ನಾಗಾಲೋಟ ಮುಂದುವರೆಸಿದೆ.

ಜಿಲ್ಲೆಯಲ್ಲಿ ನಡೆದ ಹನ್ನೇರಡು ಸ್ಥಳೀಯ ಸಂಸ್ಥೆಗಳಲ್ಲೂ ಹೆಚ್ಚಿನ ಅಧಿಕಾರ ಗಿಟ್ಟಿಸುವುದರ ಮೂಲಕ ತನ್ನ ಪಾರುಪತ್ಯ ಕಾಯ್ದುಕೊಂಡಿದೆ. ಜಿಲ್ಲೆಯ ಐದು ನಗರಸಭೆ, ಐದು ಪುರಸಭೆ, ಎರಡು ಪಟ್ಟಣ ಪಂಚಾಯಿತಿಗಳ 312 ವಾರ್ಡ್​ಗಳ ಪೈಕಿ 309 ವಾರ್ಡ್​ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ.

Tap to resize

Latest Videos

ಬಾಗಲಕೋಟೆ ನಗರಸಭೆ, ಮುಧೋಳ ನಗರಸಭೆ, ಇಳಕಲ್ ನಗರಸಭೆ, ರಬಕವಿ ಬನಹಟ್ಟಿ ನಗರಸಭೆ ಅಧಿಕಾರ ಬಿಜೆಪಿ ಪಾಲಾದರೆ, ದಿವಂಗತ ಶಾಸಕ ಸಿದ್ದು ನ್ಯಾಮಗೌಡ ಅವರ ಜಮಖಂಡಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಜಮಖಂಡಿ ನಗರಸಭೆ ಕಾಂಗ್ರೆಸ್ ಪಾಲಾಗಿದೆ.

ಇನ್ನು ಬಾದಾಮಿ ಕ್ಷೇತ್ರದ ಮತದಾರರು ಮತ್ತೆ ಮಾಜಿ ಸಿಎಂ ಸಿದ್ದರಾಮಯ್ಯನವರ ಕೈ ಹಿಡಿದಿದ್ದಾರೆ. ಬಾದಾಮಿ ಕ್ಷೇತ್ರ ವ್ಯಾಪ್ತಿಯ ಬಾದಾಮಿ ಪುರಸಭೆ ಹಾಗೂ ಗುಳೇದಗುಡ್ಡ ಪುರಸಭೆ ಕಾಂಗ್ರೆಸ್ ಪಾಲಾಗಿವೆ. ಕೆರೂರು ಪಟ್ಟಣ ಪಂಚಾಯತ್​ ಅತಂತ್ರವಾಗಿದೆ. 

ರಬಕವಿ-ಬನಹಟ್ಟಿ ನಗರಸಭೆ ಬಿಜೆಪಿ ಪಾಲಾಗಿದ್ದು ಮಾಜಿ ಸಚಿವೆ ಉಮಾಶ್ರೀ ಅವರಿಗೆ ತೀವ್ರ ಮುಖಭಂಗವಾಗಿದೆ.


ಬಾಗಲಕೋಟೆ ನಗರಸಭೆ-35 ಸ್ಥಾನ
ಬಿಜೆಪಿ-29
ಕಾಂಗ್ರೆಸ್-5
ಪಕ್ಷೇತರ-1

ಮುಧೋಳ ನಗರಸಭೆ-31 ಸ್ಥಾನ
ಬಿಜೆಪಿ-16
ಕಾಂಗ್ರೆಸ್-14
ಪಕ್ಷೇತರ-1

ಜಮಖಂಡಿ ನಗರಸಭೆ-31 ಸ್ಥಾನ
ಬಿಜೆಪಿ-7
ಕಾಂಗ್ರೆಸ್-20
ಪಕ್ಷೇತರ-3
ಪಿಪಿಪಿ-1

ಇಳಕಲ್ ನಗರಸಭೆ- 31 ಸ್ಥಾನ
ಬಿಜೆಪಿ-20
ಕಾಂಗ್ರೆಸ್-8
ಜೆಡಿಎಸ್-2
ಪಕ್ಷೇತರ-1

ಬೀಳಗಿ ಪಪಂಚಾಯತ್-18 ಸ್ಥಾನ
ಬಿಜೆಪಿ-11
ಕಾಂಗ್ರೆಸ್-6
ಪಕ್ಷೇತರ-1

ರಬಕವಿ-ಬನಹಟ್ಟಿ  ನಗರಸಭೆ-31 ಸ್ಥಾನ
ಬಿಜೆಪಿ-23
ಕಾಂಗ್ರೆಸ್-5
ಪಕ್ಷೇತರ-2

ತೇರದಾಳ ಪುರಸಭೆ-23 ಸ್ಥಾನ
ಬಿಜೆಪಿ-10
ಕಾಂಗ್ರೆಸ್-10
ಪಕ್ಷೇತರ-3

ಹುನಗುಂದ ಪುರಸಭೆ-23 ಸ್ಥಾನ
ಬಿಜೆಪಿ-8
ಕಾಂಗ್ರೆಸ್-12
ಜೆಡಿಎಸ್ -3

ಬಾದಾಮಿ ಪುರಸಭೆ-23 ಸ್ಥಾನ
ಬಿಜೆಪಿ-10
ಕಾಂಗ್ರೆಸ್-13

ಗುಳೇದಗುಡ್ಡ ಪುರಸಭೆ-23 ಸ್ಥಾನ
ಬಿಜೆಪಿ-2
ಕಾಂಗ್ರೆಸ್-15
ಜೆ ಡಿ ಎಸ್-5
1 ಪಕ್ಷೇತರ ಅವಿರೋಧ

ಮಹಾಲಿಂಗಪುರ ಪುರಸಭೆ ಒಟ್ಟು ಸ್ಥಾನ 23
ಬಿಜೆಪಿ-14
ಕಾಂಗ್ರೆಸ್-9

ಕೆರೂರು ಪಪಂಚಾಯತ್-20 ಸ್ಥಾನ
ಬಿಜೆಪಿ-9
ಕಾಂಗ್ರೆಸ್-6
ಪಕ್ಷೇತರ-5

click me!