ಸ್ಥಳೀಯ ಸಂಸ್ಥೆ ಫಲಿತಾಂಶ: ಮತ್ತೆ ಅತಂತ್ರವಾದ ಮುದ್ದೇಬಿಹಾಳ!

By Web DeskFirst Published Sep 3, 2018, 5:52 PM IST
Highlights

ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣೆ! ಮುದ್ದೇಬಿಹಾಳ ಪಟ್ಟಣ ಪಂಚಾಯ್ತಿ ಮತ್ತೆ ಅತಂತ್ರ! ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿಗೆ ಅಧಿಕಾರ?! ನಡೆಯಲಿಲ್ಲ ಎ.ಎಸ್. ಪಾಟೀಲ್ ನಡಹಳ್ಳಿ ಜಾದೂ! ಕಾಂಗ್ರೆಸ್-ಜೆಡಿಎಸ್ ದೋಸ್ತಿಯಾದರೂ ಪಕ್ಷೇತರರೆ ಕಿಂಗ್ ಮೇಕರ್​​​​

ವಿಜಯಪುರ(ಸೆ.3): ಕರ್ನಾಟಕ ನಗರ ಸ್ಥಳೀಯ ಸಂಸ್ಥೆ  ಚುನಾವಣಾ ಫಲಿತಾಂಶ ಹೊರ ಬಿದ್ದಿದೆ. ಅದರಂತೆ ವಿಜಯಪುರ ಜಿಲ್ಲೆಯ ಏಕೈಕ ಮುದ್ದೇಬಿಹಾಳ ಪಟ್ಟಣ ಪಂಚಾಯ್ತಿ ಫಲಿತಾಂಶ ಹೊರ ಬಿದ್ದಿದೆ. ಮುದ್ದೇಬಿಹಾಳ ಪಟ್ಟಣ ಪಂಚಾಯ್ತಿ ಕಳೆದ ಬಾರಿಯಂತೆ ಈ ಬಾರಿಯೂ ಮತ್ತೆ ಅತಂತ್ರ ಫಲಿತಾಂಶ ಕಂಡಿದೆ.

ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದ ಎ.ಎಸ್. ಪಾಟೀಲ್ ನಡಹಳ್ಳಿ ಈ ಬಾರಿಯೂ ಅತಂತ್ರ ಫಲಿತಾಂಶವನ್ನೇ ಕಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತ ಎನ್ನಲಾಗಿದೆ.

ಒಂದು ವೇಳೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಏರ್ಪಟ್ಟರೂ ಆಗಲೂ ಪಕ್ಷೇತರರೇ ಕಿಂಗ್ ಮೇಕರ್ ಆಗುವುದು ಖಚಿತ.

click me!