ತಾಲೂಕಿನ ವೀರಶೈವ ಲಿಂಗಾಯಿತ ಸಮಾಜದ ಬಂಧುಗಳು ಬಹುತೇಕ ಶಾಸಕ ಎಂ.ವಿ.ವೀರಭದ್ರಯ್ಯನವರ ಬೆಂಬಲಕ್ಕೆ ನಿಲ್ಲಲಿದ್ದಾರೆಂದು ಸಮಾಜದ ಉಪಾಧ್ಯಕ್ಷ ರುದ್ರಾರಾಧ್ಯ ತಿಳಿಸಿದರು.
ಮಧುಗಿರಿ: ತಾಲೂಕಿನ ವೀರಶೈವ ಲಿಂಗಾಯಿತ ಸಮಾಜದ ಬಂಧುಗಳು ಬಹುತೇಕ ಶಾಸಕ ಎಂ.ವಿ.ವೀರಭದ್ರಯ್ಯನವರ ಬೆಂಬಲಕ್ಕೆ ನಿಲ್ಲಲಿದ್ದಾರೆಂದು ಸಮಾಜದ ಉಪಾಧ್ಯಕ್ಷ ರುದ್ರಾರಾಧ್ಯ ತಿಳಿಸಿದರು.
ಶುಕ್ರವಾರ ಪಟ್ಟಣದ ಸಿಪಿಸಿ ಸಭಾಂಗಣದಲ್ಲಿ ಸಭೆ ಸೇರಿ ಪತ್ರಿಕಾಗೋಷ್ಟಿನಡೆಸಿ ಮಾತನಾಡಿದ ಅವರು, ಕಳೆದ 5 ವರ್ಷದಲ್ಲಿ ಯಾವುದೇ ರೀತಿಯ ಶಾಂತಿ ಸೌಹಾರ್ದತೆಗೆ ಧಕ್ಕೆ ಬಾರದಂತೆ ಆಡಳಿತ ನಡೆಸಿರುವ ಶಾಸಕರು ಸರ್ಕಾರವಿಲ್ಲದಿದ್ದರೂ 1150 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ವೀರಶೈವ ಲಿಂಗಾಯಿತರಿಗೆ ಈ ವರ್ಷ 12 ಕೊಳವೆಬಾವಿ ನೀಡಿದ್ದು, ಇಂತಹ ಕಾರ್ಯ ಯಾವ ಶಾಸಕರೂ ಇತಿಹಾಸದಲ್ಲಿ ಮಾಡಿಲ್ಲ. ರಾಜ್ಯದಲ್ಲಿ ವೀರಶೈವರು ಬೇರೆ ಲಿಂಗಾಯಿತರು ಬೇರೆ ಎಂದು ಇಬ್ಬಾಗ ಮಾಡಲು ಮುಂದಾಗಿದ್ದ ಕಾಂಗ್ರೆಸ್ ಕೂಡ ಇಂದು ಕೋಮ ಸ್ಥಿತಿಯಲ್ಲಿದ್ದು, ಈಗಿನ ಬಿಜೆಪಿಯಲ್ಲಿ ನಮ್ಮ ಸಮಾಜಕ್ಕೆ ನಂಬಿಕೆಯಿಲ್ಲದಾಗಿದೆ. ಕ್ಷೇತ್ರದಲ್ಲಿ ಎಲ್ಲ ಅಭ್ಯರ್ಥಿಗಳಿಗಿಂತ ಸೌಮ್ಯ ಸ್ವಭಾವದ ಶಾಸಕರ ನಡೆಯನ್ನು ಮೆಚ್ಚಿ ನಮ್ಮ ಸಮಾಜದ ಬಹುತೇಕ ಜನತೆ ವೀರಭದ್ರಯ್ಯನವರ ಬೆಂಬಲಕ್ಕೆ ನಿಲ್ಲಲಿದೆ ಎಂದರು.
undefined
ತಾಲೂಕು ವೀರಶೈವ ಲಿಂಗಾಯಿತ ಸಮಾಜದ ನಿರ್ದೇಶಕ ಹಾಗೂ ಗ್ರಾ.ಪಂ. ಸದಸ್ಯ ದೊಡ್ಡೇರಿ ವಿಜಿ ಮಾತನಾಡಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬೆಂಗಳೂರಿನ ಖಾಸಗಿ ಹೋಟಲ್‌ನಲ್ಲಿ ರಾಜ್ಯ ಹೋಬಳಿ ಮಟ್ಟದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತ ಬಿಜೆಪಿಗೆ ಲಿಂಗಾಯಿತರ ಅಗತ್ಯವಿಲ್ಲ ಎಂಬ ಹೇಳಿಕೆ ನೀಡಿರುವುದು ನಮ್ಮ ಸಮಾಜವನ್ನು ಕಡೆಗಣಿಸುತಿ ್ತರುವುದಕ್ಕೆ ಸಾಕ್ಷಿಯಾಗಿದೆ. ಲಿಂಗಾಯಿತರಿಂದಲೇ ಅಧಿಕಾರಕ್ಕೆ ಬಂದ ಬಿಜೆಪಿಯ ನಿಜಬಣ್ಣ ಇಂದು ಕಳಚಿ ಬಿದ್ದಿದೆ. ಈ ಬಾರಿ ಕ್ಷೇತ್ರದ ಬಹುತೇಕ ಶೇ.75 ರಷ್ಟುವೀರಶೈವ ಲಿಂಗಾಯಿತರು ಜೆಡಿಎಸ್ ಬೆಂಬಲಿಸಲು ತೀರ್ಮಾನಿಸಿದ್ದೇವೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡೆ ಗಮನಿಸಿದ್ದು ನಮ್ಮ ನಡೆ ಜೆಡಿಎಸ್ ಕಡೆ ಎಂದು ಘೋಷಿಸಿದರು.
ತಾ.ಪಂ. ಮಾಜಿ ಅಧ್ಯಕ್ಷ ಸುನಂದಾ ಸಿದ್ದಪ್ಪ, ಸಮಾಜದ ಮುಖಂಡರಾದ ಜಯದೇವಪ್ಪ, ವಕೀಲ ಶಿವಾನಂದಯ್ಯ, ನಟರಾಜು, ಡಿ.ಸಿ.ಮಂಜುನಾಥ್, ಪರಮೇಶ್, ಪುಟ್ಟೇಶ್, ಓಂಕಾರಪ್ಪ, ಉಮೇಶ್, ಶಿವಕುಮಾರ್, ಚೆನ್ನಬಸಣ್ಣ, ಈಶ್ವರ, ಹಾಗೂ ಮುಂತಾದವರು ಇದ್ದರು.