ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ: ಚಿಕ್ಕಮಗಳೂರಲ್ಲಿ ಕಾಂಗ್ರೆಸ್ ವಿರುದ್ಧ ಬೃಹತ್ ಪ್ರತಿಭಟನೆ

By Girish Goudar  |  First Published May 6, 2023, 12:30 AM IST

ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ, ದೇಶ ದ್ರೋಹಿಗಳ ಪರ ಎಂದು ಘೋಷಣೆ ಕೂಗಿದ ಕಾರ್ಯಕರ್ತರು, ದೇಶಭಕ್ತ ಸಂಘಟನೆಯನ್ನು ನಿಷೇಧಿಸುತ್ತೇವೆ ಎಂದು ಹೇಳಿರುವ ಕಾಂಗ್ರೆಸ್ ಪಕ್ಷದ ಅವಸಾನ ಆರಂಭವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು(ಮೇ.06): ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವುದಾಗಿ ಕಾಂಗ್ರೆಸ್ ನೀಡಿರುವ ಹೇಳಿಕೆಯನ್ನು ಖಂಡಿಸಿ ಬಜರಂಗದಳ ಕಾರ್ಯಕರ್ತರು ಚಿಕ್ಕಮಗಳೂರು  ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್ ವರೆಗೆ ನಡೆದ ಮೆರವಣಿಗೆಯಲ್ಲಿ ನುರಾರು ಕಾರ್ಯಕರ್ತರು ಭಾಗವಹಿಸಿ, ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದರು.

Latest Videos

undefined

ಕಾಂಗ್ರೆಸ್ ಪಕ್ಷದ ಅವಸಾನ ಆರಂಭ : 

ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ, ದೇಶ ದ್ರೋಹಿಗಳ ಪರ ಎಂದು ಘೋಷಣೆ ಕೂಗಿದ ಕಾರ್ಯಕರ್ತರು, ದೇಶಭಕ್ತ ಸಂಘಟನೆಯನ್ನು ನಿಷೇಧಿಸುತ್ತೇವೆ ಎಂದು ಹೇಳಿರುವ ಕಾಂಗ್ರೆಸ್ ಪಕ್ಷದ ಅವಸಾನ ಆರಂಭವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೋಲಿಲ್ಲದ ಸರದಾರ ಸಿ.ಟಿ.ರವಿಗೆ ಕಮಲದ ಗರಡಿಯಲ್ಲಿ ಪಳಗಿದ ತಮ್ಮಯ್ಯ ಟಕ್ಕರ್‌

ಉತ್ತರ ಪ್ರದೇಶ ರಾಜ್ಯದ ಪ್ರಯಾಗ್ ರಾಜ್ ನಿಂದ ಆಗಮಿಸಿದ್ದ ಬಜರಂಗದಳ ಮುಖಂಡ ವಾಮನ್ ದೇವ್ ಮಾತನಾಡಿ, ರಾಮಜನ್ಮ ಭೂಮಿಯನ್ನು ಧ್ವಂಸಗೊಳಿಸಿದ್ದವರು, ಸೋಮನಾಥ ಹಾಗೂ ಕೃಷ್ಣ ಜನ್ಮ ಭೂಮಿಯನ್ನು ನಾಶ ಪಡಿಸಿದ್ದವರ ಪರವಾಗಿ ಕಾಂಗ್ರೆಸ್ ನಿಂತಿದೆ ಎಂದು ಆರೋಪಿಸಿದರು.ಇದೀಗ ಕಾಂಗ್ರೆಸಿಗರು ಹನುಮಾನ್ ಮತ್ತು ಅವರ ವಂಶಜರನ್ನು ನಿಷೇಧಿಸುವ ಮಾತುಗಳನ್ನು ಆಡುತ್ತಿದೆ. ಅವರಿಗೆ ತಕ್ಕ ಉತ್ತರನ್ನು ಕರ್ನಾಟಕದ ಹಿಂದೂಗಳು ಹಾಗೂ ಜನತೆ ನೀಡುತ್ತಾರೆ ಎಂದರು.

ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕಿದ್ದರೆ ಸಿದ್ಧಾಂತ ಆಧಾರವಾಗಿ ಸ್ಪರ್ಧಿಸಲಿ, ಅದನ್ನು ಬಿಟ್ಟು ಬಜರಂಗದಳವನ್ನು ನಿಷೇಧಿಸುತ್ತೇವೆ ಎನ್ನುವ ಅವರ ಹೇಳಿಕೆ ಎಂದಿಗೂ ಜಾರಿಗೆ ಬರಲು ಅವಕಾಶ ನೀಡುವುದಿಲ್ಲ ಎಂದರು.
ಕಳೆದ ಹತ್ತು ವರ್ಷದಲ್ಲಿ ಇಡೀ ದೇಶದ ಜನರು ಹಿಂದೂಗಳನ್ನು ಜರಿಯುವ ಕಾಂಗ್ರೆಸನ್ನು ಎಲ್ಲಿ ಕೂರಿಸಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಈ ಬಾರಿಯ ಕರ್ನಾಟಕದ ಚುನಾವಣೆ ಮತ್ತು ಮುಂಬರುವ ಲೋಕಸಭೇ ಚುನಾವಣೆಗಳಲ್ಲಿ ರಾಜ್ಯ ಮತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷ ಕಾಣೆಯಾಗಲಿದೆ ಎಂದರು.

ಪ್ರಧಾನಿ ಮೋದಿ ಅವರೇ ಕರ್ನಾಟಕದ ಬಗ್ಗೆ ಮಾತನಾಡಿ: ರಾಹುಲ್‌ ಗಾಂಧಿ

ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ ಮಾತನಾಡಿ, ಬಜರಂಗಳವನ್ನು ನಿಷೇಧಿಸುವ ಪ್ರಸ್ತಾಪ ಮಾಡಿರುವ ಕಾಂಗ್ರೆಸ್ ತನ್ನ ಹಿಂದೂ ವಿರೋಧಿ ನೀತಿಯನ್ನು ಮತ್ತೊಮ್ಮೆ ತೋರ್ಪಡಿಸಿಕೊಂಡಿದೆ. ಅವರು ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಗೊತ್ತಿದ್ದೇ ಇಂತಹ ಅಸಾಧ್ಯದ ಭರವಸೆಯನ್ನು ನೀಡಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ನ ಕೆಟ್ಟ ಮನಸ್ಥಿತಿ

ಬಜರಂಗದಳ ನಗರ ಸಂಯೋಜಕ ಶ್ಯಾಂ ವಿ. ಮಾತನಾಡಿದರು.ಬಜರಂಗದಳ ರಾಷ್ಟ್ರೀಯತೆ ಪರವಾಗಿರುವ ಸಂಘಟನೆ, ಸೇವಾ, ಸುರಕ್ಷಾ ಹಾಗೂ ದೇಶಾದ್ಯಂತ ಗೋಹತ್ಯೆ ವಿರುದ್ಧವಾಗಿ, ಮತಾಂತರ ವಿರುದ್ಧವಾಗಿ ಹೋರಾಟ ಮಾಡುತ್ತಿರುವ ಹಿಂದುತ್ವದ ಸೈದ್ಧಾಂತಿಕ ಸಂಘಟನೆಯಾಗಿದೆ. ಕಾಂಗ್ರೆಸ್ ಪಕ್ಷ ಸಂಘಟನೆಯನ್ನು ಕೆಣಕಿದರೆ ತಕ್ಕ ಪಾಠ ಕಲಿಯುತ್ತದೆ ಎಂದು ಎಚ್ಚರಿಸಿದರು.

ದೇಶಭಕ್ತ ಬಜರಂಗದಳವನ್ನು ಉಗ್ರಗಾಮಿ ನಿಷೇಧಿತ ಪಿಎಫ್‌ಐ ಸಂಘಟನೆ ಜೊತೆ ಹೋಲಿಸಿರುವುದು ಕಾಂಗ್ರೆಸ್‌ನ ಕೆಟ್ಟ ಮನಸ್ಥಿತಿಯಾಗಿದೆ. ಇದನ್ನು ನೋಡಿಕೊಂಡು ಬಜರಂಗದಳ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳಾ ಕಾರ್ಯಕರ್ತರೂ ಭಾಗವಹಿಸಿದ್ದರು. ಜಿ.ಪಂ.ಸದಸ್ಯೆ ಜಸಂತ ಅನಿಲ್ ಕುಮಾರ್, ವೀಣಾ ಶೆಟ್ಟಿ, ಬಜರಂಗದಳ ನಗರ ಸಹ ಕಾರ್ಯದರ್ಶಿ ರಂಗನಾಥ್, ಜಿಲ್ಲಾ ವಿದ್ಯಾರ್ಥಿ ಪ್ರಮುಖ್ ಗುರು, ಜಿಲ್ಲಾ ಸಹ ಸಂಯೋಜಕ ಅಮಿತ್, ಭುವನ್, ಆಕಾಶ್ ಸೇರಿದಂತೆ ಇತರೆ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ಮುಖಂಡರು, ಕಾರ್ಯಕರ್ತರು ಬೆಂಬಲಿಸಿದರು.

click me!