Dakshina kannada ಅಶಕ್ತರಿಗೆ ಶಾಶ್ವತ ಉಚಿತ ಔಷಧಿ ವಿತರಣೆ

By Kannadaprabha News  |  First Published Oct 11, 2021, 10:58 AM IST
  •   ಜೀವನ ಮೌಲ್ಯ ಅರಿತು ಸಮಾಜದಲ್ಲಿ ಅಶಕ್ತರಿಗೆ ನೆರವಾಗುವ ಮೂಲಕ ಸಮಾಜದ ಕಟ್ಟಕಡೆಯ ಮಂದಿಯೂ ಆರೋಗ್ಯವಂತರಾಗಿರಲು ಶ್ರಮಿಸಬೇಕು. 
  • ಬೆಳ್ತಂಗಡಿ ಸಹಕಾರದೊಂದಿಗೆ  6 ಜನ ಅಶಕ್ತರಿಗೆ ಜೀವನ ಪರ್ಯಂತ ಉಚಿತ ಔಷಧ ವಿತರಣೆ

 ಬೆಳ್ತಂಗಡಿ (ಅ.11):  ಜೀವನ ಮೌಲ್ಯ ಅರಿತು ಸಮಾಜದಲ್ಲಿ ಅಶಕ್ತರಿಗೆ ನೆರವಾಗುವ ಮೂಲಕ ಸಮಾಜದ ಕಟ್ಟಕಡೆಯ ಮಂದಿಯೂ ಆರೋಗ್ಯವಂತರಾಗಿರಲು ಶ್ರಮಿಸಬೇಕು. ಆರೋಗ್ಯ ಸೇವೆ (Health Service) ಮಹತ್ವವನ್ನರಿತು ಬಿಜೆಪಿ (BJP) ಯುವ ಮೋರ್ಚಾ ಹಮ್ಮಿಕೊಂಡಿರುವ ಸೇವಾ ಕಾರ್ಯ ಇನ್ನಷ್ಟುಸಮಾಜದ ಜನರಿಗೆ ಬೆಳಕಾಗಲಿ ಎಂದು ಶಾಸಕ ಹರೀಶ್‌ ಪೂಂಜ (Harish Poonja) ಹೇಳಿದರು.

ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ (Belthangadi) ಮಂಡಲ ವತಿಯಿಂದ ಜನೌಷಧಿ ಕೇಂದ್ರ (Jan Aushadhi centre)  ಉಜಿರೆ (Ujire) ಮತ್ತು ಬೆಳ್ತಂಗಡಿ ಸಹಕಾರದೊಂದಿಗೆ ತಾಲೂಕಿನ 6 ಜನ ಅಶಕ್ತರಿಗೆ ಜೀವನ ಪರ್ಯಂತ ಉಚಿತ ಔಷಧ (Free Medicine) ವಿತರಣಾ ಕಾರ್ಯಕ್ರಮಕ್ಕೆ ಸೋಮವಾರ ಶಾಸಕರ ಶ್ರಮಿಕ ಕಚೇರಿಯಲ್ಲಿ ಚಾಲನೆ ನೀಡಿ ಮಾತನಾಡಿದರು.

Tap to resize

Latest Videos

ಜನೌಷಧಿ ಮಳಿಗೆಗಳಿಂದ ಬಡವರಿಗೆ ಹೆಚ್ಚು ಲಾಭ: ಕೇಂದ್ರ ಸಚಿವ ಮನ್ಸುಖ್‌ ಮಾಂಡವೀಯ

ಯುವ ಮೋರ್ಚಾ ತಾಲೂಕು ಅಧ್ಯಕ್ಷ ಯಶವಂತ್‌ ಗೌಡ ಬೆಳಾಲು , ಜನೌಷಧಿ ಕೇಂದ್ರದ ರವೀಶ್‌, ಯುವಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್‌ ಕುಲಾಲ್, ವಿನೀತ್‌ ಕೋಟ್ಯಾನ್‌, ಉಪಾಧ್ಯಕ್ಷ ಪ್ರಮೋದ್‌ ದಿಡುಪೆ, ಕಾರ್ಯದರ್ಶಿ ಮಂಜುನಾಥ್‌ ಬೆಳ್ತಂಗಡಿ, ಮಹಾಶಕ್ತಿ ಕೇಂದ್ರಗಳ ಪ್ರಮುಖರಾದ ಸಂಕೇತ್‌ ಬೆಳ್ತಂಗಡಿ, ಆದಶ್‌ರ್‍ ಕುವೆಟ್ಟು, ಪ್ರಶಾಂತ್‌ ಇಂದಬೆಟ್ಟು, ಉದಯ ನಾವರ ಉಪಸ್ಥಿತರಿದ್ದರು.

ಮೀನಾಕ್ಷಿ ಬೆಳಾಲು, ಸುಮಿತ್ರಾ ಬೆಳ್ತಂಗಡಿ, ಗಂಗಯ್ಯ ನಾಯಕ್‌ ಓಡಿಲ್ನಾಳ, ಸುಶೀಲಾ ಬೆಳಾಲು, ಚಂದ್ರಯ್ಯ ಲಾಲ, ಜಾನಕಿ ಇಂದಬೆಟ್ಟು ಹಾಗೂ ಓಡಿಲ್ನಾಳ ಗ್ರಾಮದ ದರ್ಣಪ್ಪ ಮೂಲ್ಯ ಅವರು ಕೊರೋನಾಗೆ ಮೃತಪಟ್ಟಿದ್ದು ಅವರಿಗೆ ಪುತ್ರರಿಲ್ಲದ ಕಾರಣ ಅವರ ಮನೆಯ ಕಾಮಗಾರಿ ಕೆಲಸ ಅರ್ಧದಲ್ಲಿ ನಿಂತು ಹೋಗಿದ್ದು ಅವರ ಮನೆಯ ಮುಂದುವರಿದ ಕಾಮಗಾರಿಗೆ ಎಲೆಕ್ಟ್ರಕಲ್‌ ಸಾಮಗ್ರಿಗಳನ್ನು ಯುವಮೋರ್ಚಾ ವತಿಯಿಂದ ನೀಡಲಾಯಿತು.

ಜನೌಷಧಿ ಮಳಿಗೆಗಳಿಂದ ಬಡವರಿಗೆ ಹೆಚ್ಚು ಲಾಭ

ದೇಶದಲ್ಲಿ 8 ಸಾವಿರಕ್ಕೂ ಅಧಿಕ ಜನೌಷಧಿ ಮಳಿಗೆಗಳನ್ನು ಸ್ಥಾಪಿಸಿದ್ದು ಉನ್ನತ ಗುಣಮಟ್ಟದ ಔಷಧಿ (Medicine) ವಿತರಿಸಲಾಗುತ್ತಿದ್ದು, ಬಡವರು, ಮಧ್ಯಮ ವರ್ಗದವರ ಔಷಧ ವೆಚ್ಚ ಗಣನೀಯವಾಗಿ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್‌ ಮಾಂಡವೀಯ (Mansukh mandaviya) ಹೇಳಿದರು.

ನಗರದಲ್ಲಿ ಭಾನುವಾರ ಫಾರ್ಮಸಿಟಿಕಲ್ಸ್‌ ಆ್ಯಂಡ್‌ ಮೆಡಿಕಲ್‌ ಡಿವೈಸ್‌ ಬ್ಯೂರೋ ಆಫ್‌ ಇಂಡಿಯಾದಿಂದ (Pharmaceuticals & Medical Devices Bureau of India) ಆಯೋಜಿಸಿದ್ದ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಮಂತ್ರಿ (Prime Minister) ಜನೌಷಧಿ ಮಳಿಗೆ ಕಾರ್ಯಕ್ರಮದಡಿ ನಾಗರಿಕರಿಗೆ ಅಗತ್ಯವಾಗಿರುವ ಔಷಧಿಗಳನ್ನು ಯುವ ಸಮೂಹ ಒಳಗೊಂಡಿರುವ ಜನಮಿತ್ರ ಕಾರ್ಯಕರ್ತರು ಸೂಕ್ತ ರೀತಿಯಲ್ಲಿ ತಲುಪಿಸುತ್ತಿದ್ದಾರೆ. ಪ್ರತಿ ತಿಂಗಳೂ ಔಷಧ ನಿಯಂತ್ರಕರು ಸೂಕ್ತ ತಪಾಸಣೆ ನಡೆಸುವ ಮೂಲಕ ಜನರಿಗೆ ಅತ್ಯುತ್ತಮ ಸೇವೆ ಒದಗಿಸಲಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತಪರ, ಜನಪರ ಮತ್ತು ಕೈಗಾರಿಕಾ ಸ್ನೇಹಿಯಾಗಿ ಆಡಳಿತ ನಡೆಸುತ್ತಿದೆ ಎಂದು ಬಣ್ಣಿಸಿದರು.

click me!