ನಿಸ್ವಾರ್ಥವಾಗಿ ಸಮಾಜಕ್ಕೆ ದುಡಿದರೆ ಜೀವನ ಸಾರ್ಥಕ: ಗುರುಪರದೇಶಿಕೇಂದ್ರ ಸ್ವಾಮೀಜಿ

By Kannadaprabha News  |  First Published Jan 9, 2024, 10:31 AM IST

ನಿಸ್ವಾರ್ಥತೆ ಹಾಗೂ ಪ್ರಾಮಾಣಿಕತೆಯಿಂದ ಸಮಾಜಕ್ಕೆ, ಮಠಮಾನ್ಯಗಳಿಗೆ, ಸಂಘ ಸಂಸ್ಥೆಗಳಿಗೆ ದುಡಿದಾಗ ಮಾತ್ರ ಜೀವನದಲ್ಲಿ ಸಾರ್ಥಕತೆ ಹೊಂದಬಹುದು ಎಂದು ಕೆರೆಗೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.


 ತಿಪಟೂರು :  ನಿಸ್ವಾರ್ಥತೆ ಹಾಗೂ ಪ್ರಾಮಾಣಿಕತೆಯಿಂದ ಸಮಾಜಕ್ಕೆ, ಮಠಮಾನ್ಯಗಳಿಗೆ, ಸಂಘ ಸಂಸ್ಥೆಗಳಿಗೆ ದುಡಿದಾಗ ಮಾತ್ರ ಜೀವನದಲ್ಲಿ ಸಾರ್ಥಕತೆ ಹೊಂದಬಹುದು ಎಂದು ಕೆರೆಗೋಡಿ ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ರಂಗಾಪುರ ಶ್ರೀ ಮಠದ ಆವರಣದಲ್ಲಿ ಸುಕ್ಷೇತ್ರದ ಯ ಕಾರ್ಯದರ್ಶಿ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮತ್ತು ರಾಜಕೀಯ ಮುಖಂಡರೂ ಆಗಿದ್ದ ಲಿಂ. ಎಚ್.ಬಿ. ದಿವಾಕರ್ ಅವರ ಶರಣ ಸಂಗಮ ಹಾಗೂ ಪುಣ್ಯ ಸಂಸ್ಮರಣೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಭಗವಂತ ಮನುಷ್ಯನಿಗೆ ನೀಡಿರುವ ಬದುಕಿನಲ್ಲಿ ಯಶಸ್ಸನ್ನು ಕಾಣಬೇಕಾದರೆ ಧಾನ ಮಾಡಬೇಕು. ಸಮಾಜಕ್ಕಾಗಿ ಅವಿರತವಾಗಿ ದುಡಿಯಬೇಕು. ಕೇವಲ ಅಧಿಕಾರಕ್ಕೆ ಅಂಟಿಕೊಳ್ಳದೆ ಸೇವೆಯನ್ನೇ ಗುರಿಯಾಗಿಸಿಕೊಂಡು ಗ್ರಾಮ ಪಂಚಾಯಿತಿ ಮಟ್ಟದಿಂದ ರಾಜ್ಯ ರಾಜಕಾರಣದ ಹಂತದವರೆಗೆ ಶ್ರೀಮಠದ ಭಕ್ತರೂ ಆಗಿರುವ ಲಿಂ. ದಿವಾಕರ್ ಅವಿರತವಾಗಿ ದುಡಿಯುತ್ತ ಜನಾನುರಾಗಿಗಳೆನಿಸಿಕೊಂಡಿದ್ದರು. ಸುಕ್ಷೇತ್ರದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಗಳಾಗಿ ಹಾಗೂ ಶ್ರೀ ಮಠದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಬಡ ಹಾಗೂ ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರದ ವತಿಯಿಂದ ದೊರಕುವ ಸೌಲಭ್ಯಗಳನ್ನು ದೊರಕಿಸಿಕೊಟ್ಟಿದ್ದಾರೆ. ಕೃಷಿ ಸೇರಿದಂತೆ ಸಮಾಜದ ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡಿದ್ದ ಹಾಗೂ ಅಪಾರ ಯುವ ಬಳಗವನ್ನು ಹೊಂದಿ ಮಾರ್ಗದರ್ಶನ ನೀಡುತ್ತಿದ್ದ ಅವರು ಬದುಕಿದ್ದಷ್ಟು ಕಾಲ ಜನಾನುರಾಗಿಯಾಗಿ ಬದುಕಿ ರಾಜಕಾರಣಿಗಳಿಗೆ ಆದರ್ಶವಾಗಿದ್ದು, ನಮ್ಮೆಲ್ಲರನ್ನು ಅಗಲಿರುವ ಅವರಿಗೆ ಹಾಗೂ ಅವರ ಕುಟುಂಬಕ್ಕೆ ದುಃಖವನ್ನ ಸಹಿಸುವ ಶಕ್ತಿಯನ್ನು ಭಗವಂತ ನೀಡಲೆಂದು ತಿಳಿಸಿದರು.

Tap to resize

Latest Videos

undefined

ಸಮಾಜ ಸೇವಕ ಲೋಕೇಶ್ವರ ಮಾತನಾಡಿ, ಲಿಂ. ಎಚ್.ಬಿ. ದಿವಾಕರ್ ರಾಜಕೀಯವಾಗಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಯಾರೊಂದಿಗೂ ವೈಮನಸ್ಸು ಹೊಂದಿರದೆ ವಿಶ್ವಾಸದೊಂದಿಗಿದ್ದರು. ಸಮಾಜದಲ್ಲಿ ಸಾಮರಸ್ಯ, ಸಂಘಟನೆ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು ಎಲ್ಲರ ಸಹಕಾರದೊಂದಿಗೆ ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ಮಾಡುತ್ತಿದ್ದರು. ಇಂತಹ ಹೆಸರಾಂತ ಶ್ರೀಮಠ ತಮ್ಮ ಸಾಮಾನ್ಯ ಭಕ್ತನ ಶರಣ ಸಂಗಮ ಹಾಗೂ ಪುಣ್ಯ ಸಂಸ್ಮರಣೆ ಸಮಾರಂಭ ಏರ್ಪಡಿಸಿ ಶ್ರದ್ಧಾಂಜಲಿ ಸಲ್ಲಿಸುತ್ತಿರುವುದು ನಿಜಕ್ಕೂ ನಮ್ಮ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ ಅವರ ದಿವ್ಯದೃಷ್ಠಿ ಎಷ್ಟು ವಿಸ್ತಾರವಾಗಿದೆ ಎಂಬುದನ್ನು ತಿಳಿಸುತ್ತದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ಉಪನ್ಯಾಸ ನೀಡಿದರು. ಗುರುಕುಲ ಶ್ರೀಮಠದ ಇಮ್ಮಡಿ ಕರಿ ಬಸವದೇಶಿಕೇಂದ್ರ ಸ್ವಾಮೀಜಿ, ಗೋಡೆಕೆರೆಯ ಚರಪಟ್ಟಾಧ್ಯಧ್ಯಕ್ಷ ಮೃತ್ಯುಂಜಯ ದೇಶೀಕೇಂದ್ರ ಸ್ವಾಮೀಜಿ, ಮಾಡಾಳಿನ ನಿರಂಜನ ಪೀಠಾಧ್ಯಕ್ಷಾ ರುದ್ರಮುನಿ ಸ್ವಾಮೀಜಿ ಆಶೀರ್ವಚನ ನೀಡಿದರು. ಲಿಂ. ದಿವಾಕರ್ ಪತ್ನಿ, ಪುತ್ರಿ, ಪುತ್ರ ಸೇರಿದಂತೆ ಕುಟುಂಬದವರು, ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಯು.ಕೆ. ಶಿವಪ್ಪ, ಉಪಾಧ್ಯಕ್ಷ ಯು.ಎಸ್. ಬಸವರಾಜು, ನಿ. ಮುಖ್ಯಶಿಕ್ಷಕ ಗಂಗಣ್ಣ, ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಆರ್. ಶಂಕರಪ್ಪ, ದೇವರಾಜು, ಸದಾಶಿವಯ್ಯ, ಕಸಾಪ ಅಧ್ಯಕ್ಷ ಕೆ.ಎಂ. ಪರಮೇಶ್ವರಯ್ಯ, ಗಂಗರಾಜು, ಗಂಗಣ್ಣ, ರಾಜು, ಬಿಸಲೇಹಳ್ಳಿ ಜಗದೀಶ್, ಸುರೇಶ್, ಕುಮಾರಸ್ವಾಮಿ, ನಟರಾಜು ಶಿ. ಕುಮಾರಸ್ವಾಮಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

click me!