ಅಶ್ಲೀಲ ವೆಬ್‌ಸೈಟ್‌ಗಳ ನಿಷೇಧಕ್ಕೆ ಪ್ರಧಾನಿಗೆ ಪತ್ರ

Kannadaprabha News   | Asianet News
Published : Dec 20, 2019, 08:47 AM IST
ಅಶ್ಲೀಲ ವೆಬ್‌ಸೈಟ್‌ಗಳ ನಿಷೇಧಕ್ಕೆ ಪ್ರಧಾನಿಗೆ ಪತ್ರ

ಸಾರಾಂಶ

ಅಶ್ಲೀಲ ವೆಬ್‌ಸೈಟ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಹೊಸ ನಿಯಮಗಳನ್ನು ಜಾರಿಗೊಳಿಸಬೇಕೆಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್‌ ಲಾರೆನ್ಸ್‌ ಮುಕ್ಕುಯಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.

ಮಂಗಳೂರು(ಡಿ.20): ಇತ್ತೀಚೆಗೆ ಹಲವೆಡೆ ಲೈಂಗಿಕ ಕಿರುಕುಳಗಳ ಅಪರಾಧ ಪ್ರವೃತ್ತಿ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಅಶ್ಲೀಲ ವೆಬ್‌ಸೈಟ್‌ಗಳಾಗಿದ್ದು, ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಹೊಸ ನಿಯಮಗಳನ್ನು ಜಾರಿಗೊಳಿಸಬೇಕೆಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್‌ ಲಾರೆನ್ಸ್‌ ಮುಕ್ಕುಯಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.

ಮಹಿಳೆಯರ ಮತ್ತು ಮಕ್ಕಳ ವಿರುದ್ಧ ನಡೆಯುವ ಲೈಂಗಿಕ ದೌರ್ಜನ್ಯವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರ ಮಾಡುವ ಕೆಲಸ ನಡೆಯುತ್ತಿದೆ. ಇದಕ್ಕೆ ಕೊನೆ ಹಾಕಲೇಬೇಕಾಗಿದೆ ಎಂದಿದ್ದಾರೆ.

ಮಂಗಳೂರು: ಪ್ರವಾಹ ಪರಿಹಾರ ಗೋದಾಮಿನಲ್ಲೇ ಬಾಕಿ..!.

ಮಕ್ಕಳು ಮತ್ತು ಯುವಕರು ಹೆಚ್ಚಾಗಿ ಈ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಾರೆ. ಅವರ ಮನಸ್ಥಿತಿ ಹಾಳಾಗಲು ಈ ರೀತಿಯ ಚಿತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದುದರಿಂದ ಅಶ್ಲೀಲ ಜಾಲತಾಣಗಳನ್ನು ಮತ್ತು ಆಶ್ಲೀಲ ಮಾಹಿತಿಗಳನ್ನು ನಿಷೇಧಿಸಲುಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಕೋರಿದ್ದಾರೆ.

ರಾಜ್ಯ ಹೊತ್ತಿ ಉರಿಯುತ್ತೆ ಎಂದಿದ್ದ ಶಾಸಕ ಖಾದರ್ ವಿರುದ್ಧ ದೂರು

PREV
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್