ಸೇವಾ ಮನೋಭಾವದ ವೈದ್ಯರು ಸಂಖ್ಯೆ ಹೆಚ್ಚಾಗಲಿ: ಸಚಿವ ಪರಮೇಶ್ವರ್‌

By Kannadaprabha News  |  First Published Aug 14, 2023, 10:23 PM IST

ಡಾ.ರಮಣರಾವ್‌ ಅವರು 50 ವರ್ಷದ ಸೇವಾ ಸಾಧನೆ ಅನನ್ಯವಾದುದು. ಅವರಿಗೆ ಪದ್ಮಶ್ರೀ ಪ್ರಶಸ್ತಿಗಿಂತ ಜನರ ಆಶೀರ್ವಾದವೇ ಶ್ರೀರಕ್ಷೆ, ಇಂದಿನ ವೈದ್ಯರು ಅವರ ಆದರ್ಶಗಳನ್ನು ಪಾಲಿಸುವ ಮೂಲಕ ವಾರಕ್ಕೆ ಒಂದು ದಿನವಾದರೂ ಉಚಿತ ವೈದ್ಯಕೀಯ ಸೇವೆ ಸಲ್ಲಿಸಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಸಲಹೆ ಮಾಡಿದರು.


ದಾಬಸ್‌ಪೇಟೆ (ಆ.14): ಡಾ.ರಮಣರಾವ್‌ ಅವರು 50 ವರ್ಷದ ಸೇವಾ ಸಾಧನೆ ಅನನ್ಯವಾದುದು. ಅವರಿಗೆ ಪದ್ಮಶ್ರೀ ಪ್ರಶಸ್ತಿಗಿಂತ ಜನರ ಆಶೀರ್ವಾದವೇ ಶ್ರೀರಕ್ಷೆ, ಇಂದಿನ ವೈದ್ಯರು ಅವರ ಆದರ್ಶಗಳನ್ನು ಪಾಲಿಸುವ ಮೂಲಕ ವಾರಕ್ಕೆ ಒಂದು ದಿನವಾದರೂ ಉಚಿತ ವೈದ್ಯಕೀಯ ಸೇವೆ ಸಲ್ಲಿಸಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಸಲಹೆ ಮಾಡಿದರು.

ಟಿ.ಬೇಗೂರು ಬಳಿಯ ಸಂಡೆ ವಿಲೇಜ್‌ ಕ್ಲಿನಿಕ್‌ನ 50ನೇ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಸುವರ್ಣ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ನಾವು ಈಗಿನ ಆಧುನಿಕ ವೈದ್ಯರ ಜೀವನ ಕ್ರಮ ನೋಡಿದ್ದೇವೆ. ಆದರೆ ಡಾ.ರಮಣರಾವ್‌ ಸಾರ್ವಜನಿಕ ಜೀವನದಲ್ಲಿ 28 ಲಕ್ಷ ಜನರಿಗೆ ಚಿಕಿತ್ಸೆ ನೀಡಿದ್ದಾರೆ. ಇಡೀ ಕುಟುಂಬದ ಜೊತೆಗೂಡಿ ಪ್ರತಿ ಭಾನುವಾರ ಉಚಿತ ಚಿಕಿತ್ಸೆ ನೀಡುತ್ತಿರುವ ಅವರ ಸೇವೆ ಅನನ್ಯ. ವರ್ಷಕ್ಕೆ 1 ಲಕ್ಷಕ್ಕೂ ಅಧಿಕ ವೈದ್ಯರು ಹೊರಬರುತ್ತಾರೆ. ಆದರೆ, ಅದರಲ್ಲಿ ಕೆಲವೇ ಮಂದಿ ಮಾತ್ರ ಸೇವಾ ದೃಷ್ಟಿಯಿಂದ ಕೆಲಸ ಮಾಡುತ್ತಾರೆ. ಸೇವಾ ಮನೋಭಾವದ ವೈದ್ಯರ ಸಂಖ್ಯೆ ಹೆಚ್ಚಾಗಬೇಕಿದೆ ಎಂದರು.

Tap to resize

Latest Videos

ಕವಾಡಿಗರಹಟ್ಟಿ ಪ್ರಕರಣ: ಕುಡಿಯುವ ನೀರಿನ ಕುರಿತು ಜಿಲ್ಲಾಡಳಿತದಿಂದ ವಿಶೇಷ ಜಾಗೃತಿ

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ವೃತ್ತಿ ಜೊತೆ ಸೇವೆ ಮಾಡುವವರು ವಿರಳ, ಒಂದು ಸರ್ಕಾರ ಮಾಡದ ಕೆಲಸವನ್ನು ಡಾ.ರಮಣರಾವ್‌ ಮಾಡಿದ್ದಾರೆ. ಪ್ರತಿಯೊಬ್ಬ ರೋಗಿಗೂ ಕುಟುಂಬ ವೈದ್ಯರಾಗಿದ್ದಾರೆ. ವ್ಯಕ್ತಿ ನಿರಂತರ ಸಾಧನೆಗೆ, ಕುಟುಂಬ ಕಾರಣವಾಗಿದೆ. ಸಮಾಜಕ್ಕೆ ತ್ಯಾಗ ಮಾಡುವವರು, ಮನುಕುಲ ಒಂದೇ ಧರ್ಮ ಎಂದು ಜೀವಿಸಿದವರಲ್ಲಿ ಡಾ.ರಮಣ್‌ರಾವ್‌ ಒಬ್ಬರಾಗಿದ್ದಾರೆ ಎಂದು ಹೇಳಿದರು.

ಈ ಬಾರಿಯೂ ಅದ್ಧೂರಿ ದಸರಾ ಉತ್ಸವ ಆಚರಣೆ: ಸಚಿವ ಮಹದೇವಪ್ಪ

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆರ್‌.ವಿ.ದೇಶಪಾಂಡೆ, ರಾಜ್ಯಸಭಾ ಸದಸ್ಯ ಕೆ.ಬಿ.ಕೃಷ್ಣಮೂರ್ತಿ, ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ.ದೇವೇಗೌಡ, ಸಂಸದ ಪಿ.ಸಿ.ಮೋಹನ್‌, ವಿಧಾನ ಪರಿಷತ್‌ ಅಧ್ಯಕ್ಷ ಬಸವರಾಜ ಹೊರಟ್ಟಿ, ಮಾಜಿ ಸಚಿವ ರೋಷನ್‌ ಬೇಗ್‌, ನ್ಯಾಯಾಧೀಶ ಡಿ. ಪದ್ಮರಾಜ್‌, ಟಿ.ಬೇಗೂರು ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಅರೇಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷೆ ನೇತ್ರಾವತಿ ಮತ್ತಿತರರಿದ್ದರು.

click me!