ರೈತರಿಗೆ ಕೃಷಿ, ತೋಟಗಾರಿಕೆ ಮಾಡಲು ಸರ್ಕಾರಗಳು ಯಾವುದೇ ವೈಜ್ಞಾನಿಕ ಸವಲತ್ತುಗಳನ್ನು ಸಮಯಕ್ಕೆ ಸರಿಯಾಗಿ ನೀಡದಿರುವುದು ಹಾಗೂ ಬೆಳೆದ ಉತ್ಪನ್ನಗಳಿಗೆ ಲಾಭದಾಯಕ ಬೆಂಬಲ ಬೆಲೆ ನೀಡದಿರುವುದರಿಂದ ರೈತರ ಬದುಕು ಅತಂತ್ರದಲ್ಲಿದೆ ಎಂದು ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಜಿ.ಟಿ. ಶಂಕರೇಗೌಡರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಿಪಟೂರು : ರೈತರಿಗೆ ಕೃಷಿ, ತೋಟಗಾರಿಕೆ ಮಾಡಲು ಸರ್ಕಾರಗಳು ಯಾವುದೇ ವೈಜ್ಞಾನಿಕ ಸವಲತ್ತುಗಳನ್ನು ಸಮಯಕ್ಕೆ ಸರಿಯಾಗಿ ನೀಡದಿರುವುದು ಹಾಗೂ ಬೆಳೆದ ಉತ್ಪನ್ನಗಳಿಗೆ ಲಾಭದಾಯಕ ಬೆಂಬಲ ಬೆಲೆ ನೀಡದಿರುವುದರಿಂದ ರೈತರ ಬದುಕು ಅತಂತ್ರದಲ್ಲಿದೆ ಎಂದು ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಜಿ.ಟಿ. ಶಂಕರೇಗೌಡರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಕಳೆದ 15 ದಿನಗಳಿಂದ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ, ಹಸಿರು ಸೇನೆ, ರೈತ ಸಂಘ ಹಾಗೂ ತೆಂಗು ಬೆಳೆಗಾರರ ವತಿಯಿಂದ ಕ್ವಿಂಟಲ್ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ನಿಗದಿ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.
ಧರಣಿಯಲ್ಲಿ ಆಲ್ ಇಂಡಿಯಾ ಕಿಸಾನ್ ಸಭಾದ ತುರುವೇಕೆರೆ ಶಿವಾನಂದ್, ಭಾರತೀಯ ಕಮ್ಯುನಿಸ್ಟ್ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿ ಗಿರೀಶ್, ಸಮಾನ ಮನಸ್ಕರ ಸಂಘಟನೆಗಳು, ಕಲ್ಪಶ್ರೀ ಕಲಾವಿದ ಸಂಘದ ರಾಮಯ್ಯ, ಕಟ್ಟಡ ಕಾರ್ಮಿಕ ಸಂಘದ ಮುಖಂಡರು, ಹಿರಿಯರ ಚಿಂತನಾ ವೇದಿಕೆಯ ಮಾರನಗೆರೆ ನಿರಂಜನಮೂರ್ತಿ ಭಾಗವಹಿಸಿ ಮಾತನಾಡಿ, ಜನಪ್ರತಿನಿಧಿಗಳು ರೈತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ರೈತರು ಬೆಳೆಯುವ ಉತ್ಪನ್ನಗಳಿಗೆ ಸ್ವಾತಂತ್ರ್ಯ ಬಂದ ಇಷ್ಟುವರ್ಷಗಳಾದರೂ ಲಾಭದಾಯಕ ಬೆಲೆ ನೀಡಿಲ್ಲದಿರುವುದು ದೇಶದ ಕೃಷಿ ಮೇಲೆ ದೊಡ್ಡ ಹೊಡೆತ ನೀಡಿದೆ. ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿರುವುದರಿಂದ ಯುವಕರು ಕೃಷಿಯಿಂದ ವಿಮುಖವಾಗುತ್ತಿರುವುದರಿಂದ ಮುಂದೆ ದೇಶದ ಜನತೆಗೆ ಆಹಾರಕ್ಕೆ ತೀವ್ರ ಕೊರತೆ ಉಂಟಾಗಲಿದ್ದು, ಸರ್ಕಾರಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕೆಂದು ತಿಳಿಸಿದರು.
ಧರಣಿಯಲ್ಲಿ ನಿವೃತ್ತ ನೌಕರ ಸಂಘದ ಪ್ರಮುಖರಾದ ಕೆ.ಎಂ.ರಾಜಣ್ಣ, ಕಾರ್ಯದರ್ಶಿ ಗುರುಸ್ವಾಮಿ, ನಿವೃತ್ತ ತಹಸೀಲ್ದಾರ್ ಚನ್ನಬಸಪ್ಪ, ನಿವೃತ್ತ ಪ್ರಾಂಶುಪಾಲರಾದ ಶಿವಗಂಗಪ್ಪ, ಮಕ್ಕಳ ಸಾಹಿತಿ ನಾಗರಾಜಶೆಟ್ಟಿ, ನಿವೃತ್ತ ಸಿಡಿಪಿಓ ಚಂದ್ರರಾಜ್‌ಅರಸ್, ನಿವೃತ್ತ ಪ್ರಾಂಶುಪಾಲ ಕುಮಾರಸ್ವಾಮಿ, ಸಾಹಿತಿ ಮಡೆನೂರು ಸೋಮಣ್ಣ, ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ಗೌರವಾಧ್ಯಕ್ಷ ಬಿ.ಬಿ.ಸಿದ್ದಲಿಂಗಮೂರ್ತಿ, ಅಧ್ಯಕ್ಷ ಯೋಗಾನಂದ್, ಪೊ›. ಟಿ.ಬಿ.ಜಯಾನಂದಯ್ಯ, ಸಹ ಕಾರ್ಯದರ್ಶಿ ಜಯಚಂದ್ರ ಶರ್ಮ, ರೈತ ಸಂಘದ ಅಧ್ಯಕ್ಷ ದೇವರಾಜು, ಉಪಾಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಬೇಲೂರನಹಳ್ಳಿ ಷಡಪ್ಪ, ಮುನೇಶ್, ಸತೀಶ್, ತುರುವೇಕೆರೆ ರೈತ ಸಂಘದ ಪದಾಧಿಕಾರಿಗಳು, ಪೊ›. ಜಯಾನಂದಯ್ಯ, ಗಂಗನಘಟ್ಟಶ್ರೀಹರ್ಷ, ರೈತ ಮುಖಂಡರು ಮತ್ತಿತರರಿದ್ದರು.
ಒಂದು ತೆಂಗಿನ ಕಾಯಿ ಬೆಳೆಯಲು ರು. 15 ಖರ್ಚು ಬರುತ್ತಿದ್ದು, ತೆಂಗಿನ ಕಾಯಿ ಕಿತ್ತು ಕೊಬ್ಬರಿ ಮಾಡಲು ಮತ್ತೆ ಒಂದು ವರ್ಷ ಬೇಕಾಗಿದ್ದು ಕೊಬ್ಬರಿ ಮಾಡಲು ಒಟ್ಟು ರು.18 ಖರ್ಚು ಬರುತ್ತದೆ. ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ರು. 20 ಸಾವಿರಕ್ಕಾದರೂ ಏರಿಸಬೇಕು. ರೈತರಿಗೆ ಸಮಯಕ್ಕೆ ಸರಿಯಾಗಿ ಹಗಲು ವೇಳೆ ಹೆಚ್ಚು ಸಮಯ ಗುಣಮಟ್ಟದ ತ್ರೀಫೇಸ್ ವಿದ್ಯುತ್ ನೀಡಬೇಕು. ಕಳೆದ 15 ದಿನಗಳಿಂದ ರೈತರು ಧರಣಿ ನಡೆಸುತ್ತಿದ್ದರೂ ಸರ್ಕಾರ ಮಾತ್ರ ತುಟಿಬಿಚ್ಚದಿರುವುದು ದುರಂತ.
ಜಿ.ಟಿ. ಶಂಕರೇಗೌಡರು ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ