ಎಲ್ಲಾ ಪಕ್ಷಗಳು ಸ್ಥಳೀಯರಿಗೆ ಟಿಕೆಟ್‌ ನೀಡಲಿ

By Kannadaprabha News  |  First Published Mar 16, 2023, 5:28 AM IST

ಮೈಸೂರು ಭಾಗದಲ್ಲಿ ಪ.ಪಂಗಡಕ್ಕೆ ಸೇರಿದ ನಾಯಕ ಸಮುದಾಯದ ಸುಮಾರು 15 ಲಕ್ಷ ಜನಸಂಖ್ಯೆಇದ್ದು ಕೇವಲ ಎಚ್‌.ಡಿ. ಕೋಟೆ ವಿಧಾನಸಭಾ ಕ್ಷೇತ್ರ ಮಾತ್ರ ಪ. ಪಂಗಡಕ್ಕೆ ಮೀಸಲಾಗಿದ್ದು, ಈ ಕ್ಷೇತ್ರ ನಮ್ಮ ಕೈ ತಪ್ಪಿದರೆ ನಮ್ಮ ರಾಜಕೀಯ ಪ್ರಾತಿನಿಧ್ಯವೇ ಇರುವುದಿಲ್ಲ ಹಾಗೂ ವಿಧಾನಸಭೆಯಲ್ಲಿ ನಮ್ಮ ದನಿಯಾಗುವ ನಮ್ಮ ಪ್ರತಿನಿಧಿ ಇಲ್ಲದಂತಾಗುತ್ತದೆ ಎಂದು ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ ಆತಂಕ ವ್ಯಕ್ತಪಡಿಸಿದರು.


 ಮೈಸೂರು :  ಮೈಸೂರು ಭಾಗದಲ್ಲಿ ಪ.ಪಂಗಡಕ್ಕೆ ಸೇರಿದ ನಾಯಕ ಸಮುದಾಯದ ಸುಮಾರು 15 ಲಕ್ಷ ಜನಸಂಖ್ಯೆಇದ್ದು ಕೇವಲ ಎಚ್‌.ಡಿ. ಕೋಟೆ ವಿಧಾನಸಭಾ ಕ್ಷೇತ್ರ ಮಾತ್ರ ಪ. ಪಂಗಡಕ್ಕೆ ಮೀಸಲಾಗಿದ್ದು, ಈ ಕ್ಷೇತ್ರ ನಮ್ಮ ಕೈ ತಪ್ಪಿದರೆ ನಮ್ಮ ರಾಜಕೀಯ ಪ್ರಾತಿನಿಧ್ಯವೇ ಇರುವುದಿಲ್ಲ ಹಾಗೂ ವಿಧಾನಸಭೆಯಲ್ಲಿ ನಮ್ಮ ದನಿಯಾಗುವ ನಮ್ಮ ಪ್ರತಿನಿಧಿ ಇಲ್ಲದಂತಾಗುತ್ತದೆ ಎಂದು ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ ಆತಂಕ ವ್ಯಕ್ತಪಡಿಸಿದರು.

ಈಗ ಪರಿಶಿಷ್ಟಪಂಗಡಕ್ಕೆ ಸೇರಿದ ಹೊರಜಿಲ್ಲೆಯ ಕೆಲವು ಅಕ್ರಮವಾಗಿ ಹಣ ಮಾಡಿರುವ ಉದ್ಯಮಿಗಳು, ನಿವೃತ್ತ ನೌಕರರು, ಗಣಿ ಧಣಿಗಳು ಸುಮಾರು ಎರಡು ಮೂರು ವರ್ಷಗಳಿಂದ ಆಗಮಿಸಿ ಹಣವನ್ನು ಹಂಚಿ, ಯುವಕರು ಹಾಗೂ ಮುಗ್ಧ ಮತದಾರರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಮೈಸೂರು ಭಾಗದಲ್ಲಿ ಪ. ಪಂಗಡದವರಿಲ್ಲ ಎಂದು ಬೊಬ್ಬೆ ಹೊಡೆದು ಹೋರಾಟ ಮಾಡುತ್ತಿದ್ದ ವ್ಯಕ್ತಿಗಳು ಈಗ ಇಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲು ಬಯಸಿ ಪ್ರಜ್ಞಾವಂತ ಮತದಾರರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

Latest Videos

undefined

ಅಲ್ಲದೆ, ಈ ಕಾರಣದಿಂದಾಗಿ ಪ್ರಜ್ಞಾವಂತ ಮತದಾರರು ಎಚ್ಚೆತ್ತುಕೊಂಡು ಇಂತಹವರಿಗೆ ಯಾವುದೇ ಮನ್ನಣೆ ನೀಡದೆ, ಸ್ಥಳೀಯರಿಗೆ ಆದ್ಯತೆ ನೀಡಬೇಕು. ಜೊತೆಗೆ ಸುಮಾರು 30 ವರ್ಷಗಳ ಸಮಸ್ಯೆಯಾದ ಪರಿವಾರ, ತಳವಾರವನ್ನು ಪ.ಪಂಗಡಕ್ಕೆ ಸೇರಿಸಲು ಹೋರಾಟ ನಡೆಸಿದ ಮೈಸೂರು ಭಾಗದ ನಾಯಕರಿಗೆ ಅನ್ಯಾಯವಾಗಲು ಬಿಡದೆ ಹಾಗೂ ಪ. ಪಂಗಡ ಸಮುದಾಯಕ್ಕೆ ಯಾವುದೇ ಕೊಡುಗೆ ನೀಡದೆ, ಕೇವಲ ರಾಜಕೀಯ ಹಿತಾಸಕ್ತಿಯಿಂದ ಬಂದು ಅಕ್ರಮವಾಗಿ ರಾಜಕೀಯ ಅಧಿಕಾರ ಪಡೆಯಲು ಯತ್ನಿಸುತ್ತಿರುವವರನ್ನು ಧಿಕ್ಕರಿಸಿ ಸ್ಥಳೀಯರಿಗೆ ಅವಕಾಶ ಮಾಡಿಕೊಡಬೇಕು ಎಂದು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಮನವಿ ಮಾಡಿದರು.

ಯಾವುದಾದರೂ ರಾಜಕೀಯ ಪಕ್ಷ ಮೈಸೂರು ಭಾಗದ ನಾಯಕರನ್ನು ಹೊರತುಪಡಿಸಿ ಅನ್ಯರಿಗೆ ಟಿಕೆಟ್‌ ನೀಡಿದರೆ ಅಂತಹ ಪಕ್ಷಗಳ ವಿರುದ್ಧ ನಮ್ಮ ಸಮುದಾಯದ ನಿರ್ಣಾಯಕ ಮತ ಚಲಾವಣೆಯಾಗುವಂತೆ ಕರಪತ್ರ ಚಳವಳಿಯನ್ನು ವೇದಿಕೆಯು ಹಮ್ಮಿಕೊಳ್ಳುತ್ತದೆ ಎಂಬ ಎಚ್ಚರಿಸಿದರು.

ಬಳಿಕ, ಜೆಡಿಎಸ್‌ನಿಂದ ಕುಣಿಗಲ್‌ನ ಕೃಷ್ಣನಾಯಕ ಎಂಬವರು ಮತ್ತು ಬಿಜೆಪಿಯಿಂದ ಕೋಲಾರದವರಾದ ಕೃಷ್ಣಸ್ವಾಮಿ ಎಂಬವರು ಟಿಕೆಟ್‌ಗೆಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಅನಿಲ್‌ ಚಿಕ್ಕಮಾದು ಇದ್ದಾರೆ. ಜೆಡಿಎಸ್‌ನಲ್ಲಿ ಜಯಪ್ರಕಾಶ್‌ ಚಿಕ್ಕಣ್ಣ ಇದ್ದಾರೆ. ಬಿಜೆಪಿಯಲ್ಲಿ ಅಪ್ಪಣ್ಣ, ಸಿದ್ದರಾಜು, ರಾಮಚಂದ್ರ ಇದ್ದಾರೆ. ಹೀಗಾಗಿ ತಾವು ಇಂತಹವರಿಗೇ ಟಿಕೆಟ್‌ ನೀಡಬೇಕೆಂದು ಹೇಳುವುತ್ತಿಲ್ಲ. ಆದರೆ ಒಂದು ವೇಳೆ ಬೇರೆ ಕಡೆಯಿಂದ ಬಂದವರಿಗೆ ಟಿಕೆಟ್‌ ಕೊಟ್ಟರೆ ಮತ ಚಲಾಯಿಸಬೇಡಿ ಎಂದು ನಾವು ಕರಪತ್ರ ಚಳುವಳಿ ಹಮ್ಮಿಕೊಳ್ಳವುದಾಗಿ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಎಸ್‌. ಸಿದ್ದಯ್ಯ, ವೆಂಕಟೇಶ ನಾಯಕ, ಮಂಜುನಾಥ ಇದ್ದರು.

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಲು ಆಗ್ರಹ

 ಮೈಸೂರು :  ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ವಿವಿಧಪಕ್ಷಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಖಾತೆಗಳಲ್ಲಿ ಅನುಮಾನಾಸ್ಪದವಾಗಿ ಹೆಚ್ಚು ಮೊತ್ತದ ಹಣದ ವರ್ಗಾವಣೆ, ಒಂದೇ ಖಾತೆಯಿಂದ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ, ಖಾತೆಯಿಂದ ದೊಡ್ಡ ಮೊತ್ತದ ನಗದು ಹಣ ತೆಗೆಯುವುದು ಕಂಡುಬಂದಲ್ಲಿ ನಿಗವಹಿಸಿ ಪರಿಶೀಲಿಸಿ ವರದಿ ನೀಡುವಂತೆ ಬ್ಯಾಂಕ್‌ ವ್ಯವಸ್ಥಾಪಕರ ಸಭೆ ನಡೆಸಿ ತಿಳಿಸಲಾಗಿದೆ ಎಂದರು.

click me!