ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ| ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ದುರ್ಗಾಬೆಟ್ಟದಲ್ಲಿ ನಡೆದ ಘಟನೆ| ಕಳೆದ 20 ದಿನಗಳ ಹಿಂದೆ ಅಡುಗೆದಾರನನ್ನು ಭಕ್ಷಿಸಿದ್ದ ಚಿರತೆ|
ಗಂಗಾವತಿ(ಡಿ.18): ಕಳೆದ ಕೆಲವು ದಿನಗಳಿಂದ ಜನರ ನಿದ್ದೆಡೆಸಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ದುರ್ಗಾಬೆಟ್ಟದಲ್ಲಿ (ಇಂದು) ಶುಕ್ರವಾರ ನಡೆದಿದೆ.
ದುರ್ಗಾಬೆಟ್ಟದಲ್ಲಿ ಕಳೆದ 20 ದಿನಗಳ ಹಿಂದೆ ಅಡುಗೆದಾರನನ್ನು ಚಿರತೆಯೊಂದು ಬಲಿ ತೆಗೆದುಕೊಂಡಿತ್ತು. ಹೀಗಾಗಿ ಇಲ್ಲಿನ ಜನರು ಮನೆ ಬಿಟ್ಟು ಹೊರಗಡೆ ಬರುವುದಕ್ಕೂ ಭಯಪಡುವಂತ ಸ್ಥಿತಿ ನಿರ್ಮಾಣವಾಗಿತ್ತು.
ಬಿಗ್ 3 ನೆರವಿನಿಂದ ವಿದ್ಯಾರ್ಥಿಗೆ ಸಿಕ್ತು ಎಂಬಿಬಿಎಸ್ ಸೀಟು; ಇದು ಕನ್ನಡಿಗರ ತಾಕತ್ತು
ಹೀಗಾಗಿ ಚಿರತೆಯನ್ನ ಹಿಡಿಯಲು ಬಳ್ಳಾರಿ ಜಿಲ್ಲೆಯ ಕರಡಿ ಧಾಮ ಮತ್ತು ದಾಂಡೇಲಿ ಅರಣ್ಯ ಇಲಾಖೆಯ ತಜ್ಞರು ಎರಡು ದಿನಗಳಿಂದ ಬಿಡಾರ ಹೂಡಿದ್ದರು. ಕೊನೆಗೂ ಇಂದು ಬೆಳಿಗ್ಗೆ ಚಿರತೆ ಬೋನಿಗೆ ಬಿದ್ದಿದೆ. ಈ ಪ್ರದೇಶದಲ್ಲಿ ಇನ್ನು ಮೂರು ಚಿರತೆಗಳು ಇರುವ ಸಾಧ್ಯತೆಗಳಿವೆ ಅರಣ್ಯ ಇಲಾಖೆಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಚಿರತೆ ಬೀನಿಗೆ ಬಿದ್ದಿದ್ದರಿಂದ ಗ್ರಾಮಸ್ಥರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ.