ರಾಮನಗರ: ಮಾಗಡಿಯಲ್ಲಿ ಬೋನಿಗೆ ಬಿದ್ದ 10ನೇ ಚಿರತೆ

Kannadaprabha News   | Asianet News
Published : May 22, 2020, 03:19 PM IST
ರಾಮನಗರ: ಮಾಗಡಿಯಲ್ಲಿ ಬೋನಿಗೆ ಬಿದ್ದ 10ನೇ ಚಿರತೆ

ಸಾರಾಂಶ

ಗಂಗಮ್ಮ ಎಂಬ ವೃದ್ಧೆಯನ್ನು ಚಿರತೆ ಹೊತ್ತು ಕೊಂಡು ಹೋಗಿದ್ದ ಚಿರತೆ| ಕೊತ್ತಗಾನಹಳ್ಳಿಯ ಬಳಿ ಚಿರತೆಗಳನ್ನು ಸೆರೆ ಹಿಡಿಯಲು ಇಟ್ಟ ಬೋನ್‌| ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ 2 ವರ್ಷದ ಹೆಣ್ಣು ಚಿರತೆ ಸೆರೆ| 

ಮಾಗಡಿ (ಮೇ.22): ಸೋಲೂರು ಹೋಬಳಿ ಕೊತ್ತಗಾನಹಳ್ಳಿ ಬಳಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ 2 ವರ್ಷ ವಯಸ್ಸಿನ ಹೆಣ್ಣು ಚಿರತೆ ಸೆರೆಯಾಗಿದೆ. 

ತಾಲೂಕಿನ ಸೊಲೂರು ಹೋಬಳಿ ಕೊತ್ತಗಾನಹಳ್ಳಿ ಗ್ರಾಮದಲ್ಲಿ ಕಳೆದ ಶನಿವಾರ ಬೆಳಿಗ್ಗೆ 5.30ರ ಸಮಯದಲ್ಲಿ ಮನೆಯ ಕಾಂಪೌಂಡ್‌ನಲ್ಲಿದ್ದ ಗಂಗಮ್ಮ ಎಂಬ ವೃದ್ಧೆಯನ್ನು ಚಿರತೆ ಹೊತ್ತು ಕೊಂಡು ಹೋಗಿತ್ತು. ಈ ಸ್ಥಳಕ್ಕೆ ಅರಣ್ಯ ಸಚಿವ ಆನಂದ್‌ ಸಿಂಗ್‌, ಮಾಗಡಿ ಹಾಗೂ ನೆಲಮಂಗಲ ಶಾಸಕರು ಭೇಟಿ ನೀಡಿದ್ದರು. 

ಚಿರತೆ ದಾಳಿ: ಮೃತರ ಕುಟುಂಬಕ್ಕೆ 7.5 ಲಕ್ಷ ರೂ. ಪರಿಹಾರ, DCM ಅಶ್ವತ್ಥನಾರಾಯಣ

ಕೊತ್ತಗಾನಹಳ್ಳಿಯ ಬಳಿ ಚಿರತೆಗಳನ್ನು ಸೆರೆ ಹಿಡಿಯಲು ಬೋನ್‌ ಇಡುವುದರ ಜೊತೆಗೆ ಸಿಸಿ ಕ್ಯಾಮೆರಾಗಳನ್ನು ಆಳವಡಿಸಲಾಗಿತ್ತು. ಗುರುವಾರ ಬೆಳಿಗ್ಗೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ 2 ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ.
 

PREV
click me!

Recommended Stories

ಬನಶಂಕರಿ ಬಳಿ ಪ್ರತ್ಯಕ್ಷವಾಯ್ತು ಚಿರತೆ: ವೀಕೆಂಡ್‌ ಎಂಜಾಯ್‌ ಮಾಡ್ಬೇಕಾದ್ರೆ ಹುಷಾರು!
Chamarajanagar: ರೈತರ ಬೆಳೆ ಒಣಗುತ್ತಿದೆ, ವನ್ಯಜೀವಿಗಳಿಗೆ ನೀರಿಲ್ಲ: ಇಲ್ಲಿದೆ ಉಡುತೊರೆಹಳ್ಳದ ನೋವಿನ ಕಥೆ