ತಾವರೆಕರೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಸಿಸಿ ಕ್ಯಾಮೆರಾದಲ್ಲಿ ಸೆರೆ

Published : Aug 02, 2023, 10:26 AM IST
ತಾವರೆಕರೆಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಸಿಸಿ ಕ್ಯಾಮೆರಾದಲ್ಲಿ ಸೆರೆ

ಸಾರಾಂಶ

ನಗರದ ಹೊರವಲಯ ತಾವರೆಕೆರೆಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಆದರೆ, ಜನರಲ್ಲಿ ಮೂಡಿರುವ ಚಿರತೆ ಭೀತಿಯನ್ನು ಹೋಗಲಾಡಿಸಬೇಕಾದ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದು, ಮತ್ತಷ್ಟು ಆತಂಕಪಡುವಂತಾಗಿದೆ.

ಬೆಂಗಳೂರು (ಆ.02): ನಗರದ ಹೊರವಲಯ ತಾವರೆಕೆರೆಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಆದರೆ, ಜನರಲ್ಲಿ ಮೂಡಿರುವ ಚಿರತೆ ಭೀತಿಯನ್ನು ಹೋಗಲಾಡಿಸಬೇಕಾದ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದು, ಮತ್ತಷ್ಟು ಆತಂಕಪಡುವಂತಾಗಿದೆ. ನಗರದಲ್ಲಿ ಮತ್ತೆ ಚಿರತೆ ಕಾಟ ಆರಂಭವಾಗಿದೆ. ಕಳೆದ ಕೆಲ ತಿಂಗಳ ಹಿಂದೆ ಬನ್ನೇರಘಟ್ಟರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇದೀಗ ಮಾಗಡಿ ರಸ್ತೆ ತಾವರೆಕೆರೆಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಅಪಾರ್ಚ್‌ಮೆಂಟ್‌ ಒಂದರ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರಿಂದಾಗಿ ಸುತ್ತಲಿನ ಬಡಾವಣೆಗಳಲ್ಲಿ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಚಿರತೆ ಕಾಣಿಸಿಕೊಂಡಿರುವ ಕುರಿತು ಹಾಗೂ ಅದಕ್ಕೆ ಪರಿಹಾರ ನೀಡುವಂತೆ ಸ್ಥಳೀಯ ಅರಣ್ಯಾಧಿಕಾರಿ ರವಿ ಅವರಿಗೆ ಜನರು ಕರೆ ಮಾಡಿದರೆ, ಮೊದಲು ದೂರು ನೀಡಿ, ಅದನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸುತ್ತೇವೆ. ಆನಂತರ ಸ್ಥಳ ಪರಿಶೀಲನೆ ನಡೆಸುತ್ತೇವೆ. ಚಿರತೆ ಹಿಡಿಯುವುದಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಚಿರತೆ ಕಾಣಿಸಿಕೊಂಡಿರುವ ಕುರಿತು ಆರ್‌ಎಫ್‌ಒ ಗೋವಿಂದರಾಜು ಪ್ರತಿಕ್ರಿಯಿಸಿದ್ದು, ನಿಯಮದ ಪ್ರಕಾರ ಜನರು ದೂರು ನೀಡಿದ ನಂತರ ಸ್ಥಳ ಪರಿಶೀಲನೆ ನಡೆಸಿ, ನಂತರ ಚಿರತೆಯ ಚಲನವಲವನ್ನು ಗಮನಿಸಿ ಅದನ್ನು ಹಿಡಿಯಲು ಕ್ರಮ ಕೈಗೊಳ್ಳಲಾಗುತ್ತದೆ. ಆದರೂ, ಬುಧವಾರ ಸ್ಥಳ ಪರಿಶೀಲನೆ ನಡೆಸಿ, ಚಿರತೆ ಮೇಲೆ ನಿಗಾವಹಿಸಲಾಗುವುದು. ಒಂದು ವೇಳೆ ಚಿರತೆ ಮತ್ತೆ ಕಾಣಿಸಿಕೊಂಡರೆ ಅದನ್ನು ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕ್ಯಾಬ್​ನಲ್ಲಿ ಪರ್ಸನಲ್ ವಿಚಾರ ಮಾತನಾಡುವ ಮುನ್ನ ಎಚ್ಚರ: ಮಾತಾಡೋದು ಕದ್ದು ಕೇಳಿ ಡ್ರೈವರ್ ಬ್ಲ್ಯಾಕ್‌ಮೇಲ್

ಕುಂತೂರು ಬೆಟ್ಟದ ಬಂಡೆಯಲ್ಲಿ ಚಿರತೆ ಪ್ರತ್ಯಕ್ಷ: ಮಲ್ಲಿಗೆಹಳ್ಳಿಯಲ್ಲಿ ಬಾಲಕನ ಮೇಲೆ ದಾಳಿ ನಡೆಸಿದ ಚಿರತೆ ಈಗ ಕುಂತೂರು ಬೆಟ್ಟದಲ್ಲಿ ಕಾಣಿಸಿಕೊಳ್ಳುವ ಮೂಲಕ ಅರಣ್ಯಾಧಿಕಾರಿಗಳ ನಿದ್ದೆಗೆಡಿಸಿದೆ. ಕಳೆದ ನಾಲ್ಕು ದಿನಗಳಿಂದ ಮಲ್ಲಿಗೆಹಳ್ಳಿ , ಕಟ್ನವಾಡಿ, ಕೆಸ್ತೂರು ಗ್ರಾಮಗಳಲ್ಲಿ ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಊರಿನ ಜನರು ಹೇಳಿದ ಕಡೆಯಲ್ಲ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಬೋನು ಇಡಲಾಗಿತ್ತು. ಜೊತೆಗೆ ಚಿರತೆ ಆಹಾರಕ್ಕಾಗಿ ಮೇಕೆ ಕರುಗಳನ್ನು ಕಟ್ಟಿಹಾಕಲಾಗಿತ್ತು.

ಆದರೆ, ಶುಕ್ರವಾರ ಕುಂತೂರು ಬೆಟ್ಟದ ಬಂಡೆಯ ಮೇಲೆ ಚಿರತೆ ಕಾಣಿಸಿಕೊಂಡಿದ್ದು, ಚಿಲಕವಾಡಿ, ಕುಂತೂರು, ಸಿಲ್ಕಲ್‌ಪುರ, ಕುಂತೂರು ಮೋಳೆ ಸೇರಿದಂತೆ ಇತರೆ ಗ್ರಾಮಗಳ ಜನರ ನಿದ್ದೆಗೆಡಿಸಿದ್ದು ಜನರು ಆತಂಕಕ್ಕೊಳಗಾಗಿದ್ದಾರೆ. ಕುಂತೂರು ಬೆಟ್ಟದಲ್ಲಿರುವ ಕಾಣಿಸಿಕೊಂಡಿದ್ದ ಚಿರತೆ ಮತ್ತು ಮಲ್ಲಿಗೆಹಳ್ಳಿಯಲ್ಲಿ ದಾಳಿ ನಡೆಸಿದ ಚಿರತೆ ಬೇರೆ ಬೇರೆಯಾಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿರುವ ಅರಣ್ಯಾ​ಧಿಕಾರಿಗಳು ಎರಡು ಕಡೆಗಳು ಕೂಡ ಬೋನನ್ನು ಇಡಲಾಗಿದೆ. ಈಗಾಗಲೇ ಚಿಲಕವಾಡಿ ಸುತ್ತಮುತ್ತ ಸಿಸಿ ಕ್ಯಾಮೆರಾ ಮತ್ತು 2 ಬೋನ್‌ ಇಡಲಾಗಿದ್ದು, ಚಿರತೆ ಸರಿ ಹಿಡಿಯಲು ಅರಣ್ಯ ಇಲಾಖೆ ಕಾರ್ಯಚರಣೆ ಮಾಡುತ್ತಿದೆ.

ಹನಿಟ್ರ್ಯಾಪ್‌ ಮಾಡಿ 30 ಜನರಿಗೆ 30 ಲಕ್ಷ ಟೋಪಿ: ಮೂವರ ಬಂಧನ

ಚಿರತೆ ಯಾವ ಸ್ಥಳದಲ್ಲಿ ಅವಿತಿ ಕುಳಿತಿದೆ ಎಂಬುದರ ಬಗ್ಗೆ ದ್ರೋಣ್‌ ಕ್ಯಾಮೆರಾ ಕಣ್ಣಲ್ಲಿ ಚಿರತೆಯ ಚಲನವಲನದ ಬಗ್ಗೆ ಅಧಿ​ಕಾರಿ ವರ್ಗ ಕಲೆ ಹಾಕುತ್ತಿದೆ. ಯಾವ ಕ್ಷಣದಲ್ಲಾದರೂ ಚಿರತೆ ಸೆರೆ ಸಿಗಬಹುದು ಎಂಬ ಆತ್ಮವಿಶ್ವಾಸದಿಂದ ಪಶುವೈದ್ಯಾ​ಕಾರಿಗಳು ಮತ್ತು ಅರವಳಿಕೆ ತಜ್ಞರು ತಮ್ಮ ಕರ್ತವ್ಯನಿರ್ವಹಿಸಲು ಸಜ್ಜಾಗಿದ್ದಾರೆ. ಬುದ್ಧಿವಂತ ಚಿರತೆ ಬೋನಿನ ಬಳಿ ಬಂದರೂ ತಪ್ಪಿಸಿಕೊಳ್ಳುತ್ತಿರುವುದು ನೋಡಿದರೆ ಇದೊಂದು ಚಾಣಾಕ್ಷತೆ ಹೊಂದಿರುವ ಹಳೆಯ ಚಿರತೆ ಇರಬಹುದು ಎಂಬುದೇ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಅನುಮಾನ ಹುಟ್ಟುಹಾಕಿದ್ದು ಅರಣ್ಯ ರಕ್ಷಕರಿಗೆ ತಲೆಬಿಸಿಯಾಗಿದೆ.

PREV
Read more Articles on
click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
New Hate-Speech Law: ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!