ನಾನು ಹುಬ್ಬಳ್ಳಿ ಹುಡುಗ- ನಿಮ್ಮ ಮಧ್ಯೆ ಬೆಳೆದವನು..
ನಮ್ಮನ್ನು ಎಲ್ಲರೂ ಹೊಗಳ್ತಾರೆ- ಹಿರಿಯರು ತಿದ್ದಿ ಬುದ್ದಿಹೇಳಬೇಕು.
ನಿಮ್ಮ ಜೊತೆಗೆ ಬೆಳೆದ ಹುಡುಗ ಮುಖ್ಯಮಂತ್ರಿ ಆಗಿದ್ದಾನೆ.
ಹುಬ್ಬಳ್ಳಿ (ಜ.10): ನಾನು ನಿಮ್ಮ ಜೊತೆಗೆ ಬೆಳೆದ ಹುಡುಗ ಮುಖ್ಯಮಂತ್ರಿ ಆಗಿದ್ದಾನೆ.. ನಾನು ಏನೇನು ಕೆಲಸ ಮಾಡಿದ್ದೇನೆ ಅಂತ ನೋಡಬೇಕು. ಒಳ್ಳೆದನ್ನ ಮಾಡಿದ್ರೆ ಬೆನ್ನು ತಟ್ಟಿಬೇಕು, ಕೆಡಕು ಮಾಡಿದ್ರೆ ಕಿವಿ ಹಿಂಡಬೇಕು. ಬೇರೆ ಎಲ್ಲರೂ ನಮ್ಮನ್ನ ಹೊಗಳುತ್ತಾರೆ. ಆದ್ರೆ ಹುಬ್ಬಳ್ಳಿಯ ಹಿರಿಯರು ನಮ್ಮನ್ನ ತಿದ್ದಬೇಕು ಹೀಗೆ ಅತ್ಯಂತ ವಿನಯದಿಂದ ಮಾತನಾಡಿದ್ದು ಬೇರೆ ಯಾರು ಅಲ್ಲ. ನಮ್ಮ ಕಾಮನ್ ಮ್ಯಾನ್ ಸಿಎಂ ಅಂತಲೇ ಫೇಮಸ್ ಆಗಿರುವ ಬಸವರಾಜ ಬೊಮ್ಮಾಯಿ ಅವರು.
ಹುಬ್ಬಳ್ಳಿಗ ನವನಗರದ ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಆವರಣದಲ್ಲಿ ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ಏರ್ಪಿಡಿಸಿದ್ದ ಪದ್ಮಶ್ರೀ ಡಾ.ಆರ್.ಬಿ.ಪಾಟೀಲ ಅವರ ಕಂಚಿನ ಪುತ್ಥಳಿ ಅನಾವರಣ ಹಾಗು ಬ್ಲಾಕ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಸಿಎಮ್ ತಮ್ಮಹಳೆಯ ನೆನಪುಗಳನ್ನು ಮೆಲುಕು ಹಾಕಿದ್ರು. ಹುಬ್ಬಳ್ಳಿ ಜನರು ಇನ್ನೂ ಆಕ್ಟೀವ್ ಆಗಬೇಕು. ನಾನು ಏನೇನು ಕೆಲಸ ಮಾಡಿದ್ದೇನೆ ಗುರುತಿಸಬೇಕು..ಒಳ್ಳೆದನ್ನ ಮಾಡಿದ್ರೆ ಬೆನ್ನು ತಟ್ಟಿ,ಕೆಡಕು ಮಾಡಿದ್ರೆ ಕಿವಿ ಹಿಂಡಿ. ಅಧಿಕಾರಲ್ಲಿ ಇರುವ ನಮ್ಮನ್ನು ಎಲ್ಲರೂ ಹಾಡಿ ಹೂಗಳ್ತಾರೆ. ಆದರೆ ಹುಬ್ಬಳ್ಳಿಯ ಹಿರಿಯರು ತಿದ್ದಿ-ಬುದ್ದಿಹೇಳಬೇಕು ಎಂದರು.
ನನ್ನ ತಾಯಿಗೂ ಕ್ಯಾನ್ಸರ್ ಆಗಿತ್ತು:
ಕ್ಯಾನ್ಸರ್ ಎನ್ನುವುದು ದೈಹಿಕವಾಗಿರುವ ಸವಾಲನ್ನು ಮಾನಸಿಕ ಒತ್ತಡಕ್ಕೆ ಸಿಲುಕಿಸುತ್ತೆ. ಕ್ಯಾನ್ಸರ್ ಎಂದ ತಕ್ಷಣ ಮನುಷ್ಯ ಮಾನಸಿಕ ಒತ್ತಡಕ್ಕೆ ಸಿಲುಕತ್ತಾನೆ. ಇದರಿಂದ ಮನುಷ್ಯನ ರೋಗ ನಿರೋಧಕ ಶಕ್ತಿ ಕುಗ್ಗಿಸುತ್ತದೆ. ಯಾರಿಗೆ ಮಾನಸಿಕ ಶಕ್ತಿ ಧೃಡವಾಗಿರುತ್ತದೆಯೋ ಅವರಿಗೆ ದೈವಿಕ ಶಕ್ತಿಯಿದೆ. ಅವರಿಗೆ ಕ್ಯಾನ್ಸರ್ ಗೆಲುವ ಶಕ್ತಿಯಿದೆ. ನಾನು ಬಹಳಷ್ಟು ಹತ್ತಿರದಿಂದ ಕ್ಯಾನ್ಸರ್ ನೋಡಿದ್ದೆನೆ. ನನ್ನ ತಾಯಿಗೆ ಕ್ಯಾನ್ಸರ್ ಇತ್ತು ಅಂತ ಹೇಳಿದರು. ಕ್ಯಾನ್ಸರ್ ಬಗ್ಗೆ ಯಾರು ಭಯಪಡಬೇಕಿಲ್ಲ. ಕ್ಯಾನ್ಸರ್ ನೊಂದಿಗೆ ಜನ ಬದುಕಬೇಕಿದೆ. ಕ್ಯಾನ್ಸರ್ ರೊಗಕ್ಕೆ ಚಿಕಿತ್ಸೆ ನೀಡುವ ವೈದ್ಯರು, ಮಾನವೀಯತೆಯಿಂದ, ತಾಳ್ಮೆಯಿಂದ, ಕರುಣೆಯಿಂದ ನಡೆದುಕೊಳ್ಳಬೇಕು ಎಮದು ಹೇಳಿದರು.
ರಾಜ್ಯದ ನೇಕಾರರಿಗೆ ಸಿಹಿಸುದ್ದಿ: ನಾಳೆ ಬ್ಯಾಂಕ್ ಖಾತೆಗೆ 5 ಸಾವಿರ ರೂ. ಹಾಕುವ ಸರ್ಕಾರ
ಒಳಿತು ಬಯಸುವ ನಾಗರಿಕ ಸಮಾಜ ಕಣ್ಮರೆ:
ಈ ಹಿಂದೆ ಹುಬ್ಬಳ್ಳಿಗೆ ಒಳ್ಳೆಯದನ್ನು ಬಯಸುವ ಒಂದು ನಾಗರಿಕ ಸಮಾಜದ ಗುಂಪು ಹುಟ್ಟಿಕೊಂಡಿತ್ತು. ಆದರೆ, ಈಗ ಹುಬ್ಬಳ್ಳಿ ಬಹಳಷ್ಟು ಬೆಳೆದಿದೆ. ಆದರೆ ನಾಗರಿಕ ಸಮಾಜ ಮರೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಸಂಶೋಧನಾ ಕೇಂದ್ರವಾಗಿ ಬೆಳೆಯಬೇಕು ಅದಕ್ಕೆ ೫ ಕೋಟಿ ಅನುದಾನ ಒದಗಿಸುವ ಭರವಸೆ ನೀಡಿದರು. ಈ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಸಂಶೋಧನಾ ಕೇಂದ್ರವಾಗಿ ಮಾರ್ಪಾಡಾಗಬೇಕು. ಇದಕ್ಕೆ ಸರ್ಕಾರದ ಸಹಕಾರ ಇದ್ದೇ ಇದೆ. ಪದ್ಮಶ್ರೀ ಆರ್.ಬಿ. ಪಾಟೀಲ ಅವರು ಜನಸಾಮಾನ್ಯರಿಗೆ ಒಳ್ಳೆ ಚಿಕಿತ್ಸೆ ನೀಡ್ಡುತ್ತಿದ್ದರು. ಕ್ಯಾನ್ಸರ್ ಚಿಕಿತ್ಸೆಗೆ ಬಾಂಬೆ, ಬೆಂಗಳೂರಿಗೆ ಹೋಗುವ ಅನಿವಾರ್ಯತೆ ಇತ್ತು ಅಂತ ಸ್ಮರಿಸಿದರು.
10 ಕೋಟಿ ರೂ.ಗಳ ನೆರವು:
ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ದೂರದ ಊರುಗಳಿಗೆ ಹೋಗುವುದನ್ನು ತಪ್ಪಿಸಲು ಅನೇಕರು ಸೇರಿ ಒ.ಪಿ.ಡಿ ಪ್ರಾರಂಭಿಸಿದರು. ಈಗಾಗಲೇ ಸರ್ಕಾರ 10 ಕೋಟಿ ರೂ.ಗಳನ್ನು ನೀಡಿದೆ. ಬೆಂಗಳೂರಿನಲ್ಲಿ ಮೇಕ್ ಇನ್ ಇಂಡಿಯಾ ಫಲವಾಗಿ ಅತ್ಯಾಧುನಿಕ ರೆಡಿಯೇಷನ್ ಚಿಕಿತ್ಸೆ, ಸ್ಕ್ಯಾನಿಂಗ್ ಯಂತ್ರ ಇಲ್ಲಿಗೆ ನೀಡಲಾಗಿದೆ. ಮೇಕ್ ಇನ್ ಇಂಡಿಯಾ ಎಲ್ಲಾ ವಲಯಗಳಲ್ಲಿ ಹಲವಾರು ಬದಲಾವಣೆ ತಂದಿದೆ. ರಕ್ಷಣಾ ವಲಯದಲ್ಲಿ ನಾವು ಈಗ ಶೇ 69 ರಷ್ಟು ರಫ್ತು ಮಾಡುತ್ತಿದ್ದೇವೆ. ಇನ್ನೈದು ವರ್ಷಗಳಲ್ಲಿ ಶೇ.ನೂರರಷ್ಟು ಆತ್ಮ ನಿರ್ಭರಗಳು ಸಾಧ್ಯವಿದೆ. ಇದು ನಮ್ಮ ಪ್ರಧಾನಿಗಳ ದೂರದೃಷ್ಟಿಯ ಫಲ. ಕರ್ನಾಟಕ ಶಿಕ್ಷಣ, ಆರೋಗ್ಯ, ರಕ್ಷಣಾ, ಕೃಷಿ, ಆಡಳಿತ ಎಲ್ಲಾ ವಲಯಗಳಲ್ಲಿ ಮುಂಚೂಣಿಯಲ್ಲಿದೆ. ಹನ್ನೊಂದು ಸಾವಿರಕ್ಕೂ ಹೆಚ್ವಿನ ಸ್ಟಾರ್ಟ್ ಅಪ್ ಗಳು ಬೆಂಗಳೂರಿನಲ್ಲಿವೆ. ಶೇ 40 ರಷ್ಟು ಯೂನಿಕಾರ್ನ್ ಗಳು, ಡೆಕಾಕಾರ್ನ್ ಗಳು ಬೆಂಗಳೂರಿನಲ್ಲಿವೆ. ವಿಜ್ಞಾನ, ಆರ್ಥಿಕತೆ ತಂದಿರುವ ಬದಲಾವಣೆಯ ಲಾಭ ಇಲ್ಲಿ ಆಗಿದೆ.