ಸಾಧಾರಣವಾಗಿ ಬೆಳೆಯುವ ಸಣ್ಣ ಗಾತ್ರದ ನಿಂಬೆ ಹಣ್ಣುಗಳನ್ನು ನಾವೆಲ್ಲಾ ಕಂಡಿಯೇ ಇರುತ್ತೇವೆ ಅಲ್ವಾ. ಆದರೆ ಇಲ್ಲಿ ಬರೋಬ್ಬರಿ ಐದು ಕೆಜಿ ತೂಕದ ಒಂದೇ ನಿಂಬೆಹಣ್ಣು ನೋಡುಗರನ್ನು ನಿಬ್ಬೆರಗೊಳಿಸಿದೆ. ಹೌದು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟದ ಕಾಫಿ ತೋಟ ಒಂದರಲ್ಲಿ ಬೆಳೆದ ಗಿಡದಲ್ಲಿ ಬರೋಬರಿ 5 ಕೆಜಿ ಗಾತ್ರದ ಗಜ ನಿಂಬೆಹಣ್ಣು ಕಂಡು ಕಾರ್ಮಿಕರು, ಸ್ಥಳೀಯ ರೈತರು ಆಶ್ಚರ್ಯ ಚಕಿತರಾಗಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಡಿ.21): ಸಾಧಾರಣವಾಗಿ ಬೆಳೆಯುವ ಸಣ್ಣ ಗಾತ್ರದ ನಿಂಬೆ ಹಣ್ಣುಗಳನ್ನು ನಾವೆಲ್ಲಾ ಕಂಡಿಯೇ ಇರುತ್ತೇವೆ ಅಲ್ವಾ. ಆದರೆ ಇಲ್ಲಿ ಬರೋಬ್ಬರಿ ಐದು ಕೆಜಿ ತೂಕದ ಒಂದೇ ನಿಂಬೆಹಣ್ಣು ನೋಡುಗರನ್ನು ನಿಬ್ಬೆರಗೊಳಿಸಿದೆ. ಹೌದು ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟದ ಕಾಫಿ ತೋಟ ಒಂದರಲ್ಲಿ ಬೆಳೆದ ಗಿಡದಲ್ಲಿ ಬರೋಬರಿ 5 ಕೆಜಿ ಗಾತ್ರದ ಗಜ ನಿಂಬೆಹಣ್ಣು ಕಂಡು ಕಾರ್ಮಿಕರು, ಸ್ಥಳೀಯ ರೈತರು ಆಶ್ಚರ್ಯ ಚಕಿತರಾಗಿದ್ದಾರೆ.
undefined
ಕೊಡಗು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಹಾಗೂ ಸಮಾಜ ಸೇವಕ ಮೂಕೊಂಡ ವಿಜು ಸುಬ್ರಮಣಿ ಅವರ ಕಾಫಿ ತೋಟದಲ್ಲಿ ಈ ಗಜ ನಿಂಬೆಹಣ್ಣು ಬೆಳೆದಿದ್ದು ಅಚ್ಚರಿ ಎಂಬಂತೆ ಅಂದಾಜು 6 ಅಡಿ ಎತ್ತರದ ಗಿಡಗಳಲ್ಲಿ ಸಣ್ಣ ಗಾತ್ರದಿಂದ ಇಡಿದು ಒಂದೇ ನಿಂಬೆ ಹಣ್ಣು ಬರೋಬ್ಬರಿ ಐದು ಕೆಜಿ ತೂಕದ ಇರುವಷ್ಟು ದೊಡ್ಡ ನಿಂಬೆಹಣ್ಣು ಬೆಳೆದಿರುವುದು ಕಂಡುಬಂದಿದೆ. ಅಚ್ಚರಿ ಇದು ಜನರನ್ನು ಮೂಡಿಸಿದೆ. ನಾಲ್ಕು ವರ್ಷಗಳ ಹಿಂದೆ ವಿಜು ಸುಬ್ರಮಣಿ ಅವರು ಮೈಸೂರು ಮಾರುಕಟ್ಟೆಯಲ್ಲಿ ಸಿಟ್ರಸ್ ಹಣ್ಣು ಖರೀದಿ ಮಾಡಿ ತಂದಿದ್ದರು. ಉಪಯೋಗಕ್ಕೆ ಬಾರದ ಒಂದು ಹಣ್ಣನ್ನು ಮನೆಯ ಹಿಂಬದಿಯ ತೋಟದಲ್ಲಿ ಎಸೆದಿದ್ದರೂ ಕೆಲ ದಿನಗಳ ನಂತರ ಸಣ್ಣ ಎರಡು ಗಿಡಗಳು ಬೆಳೆದಿದ್ದವು. ನಂತರ ಅವರು ಗಿಡವನ್ನು ಕಿತ್ತು ತೋಟದ ಬದಿಯಲ್ಲಿ ಆರ್ಗನಿಕ್ ಗೊಬ್ಬರವನ್ನು ಬಳಸಿ ಗುಂಡಿ ತೋಡಿ ನೆಟ್ಟಿದ್ದರು.
ಮಹಾರಾಷ್ಟ್ರ: ಮಂಚದಿಂದ ಉರುಳಿಬಿದ್ದ 160 ಕೇಜಿ ತೂಕದ ವೃದ್ಧೆ ಎತ್ತಲು ಬಂದ ಅಗ್ನಿಶಾಮಕ!
ಸುಮಾರು ಮೂರು ವರ್ಷಗಳ ಕಾಲ ಗಿಡ ಮಾತ್ರ ಬೆಳೆದಿತ್ತು. ಆದರೆ ಗಿಡದಲ್ಲಿ ಹೂವು ಕಾಯಿ ಯಾವುದೂ ಕಂಡು ಬಂದಿರಲಿಲ್ಲ. ಇದು ಯಾವ ಗಿಡ ಎಂದು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ನಾಲ್ಕು ವರ್ಷಗಳ ನಂತರ ಇತ್ತೀಚೆಗೆ ಗಿಡದಲ್ಲಿ ಮಲ್ಲಿಗೆ ಹೂವಿನ ಆಕಾರದ ದೊಡ್ಡ ಹೂವುಗಳೊಂದಿಗೆ ಸಣ್ಣ ಕಾಯಿಗಳು ಕಾಣಿಸಿಕೊಂಡಿದ್ದವು. ಕೆಲ ತಿಂಗಳ ನಂತರ ಕಾಯಿಗಳು ದೊಡ್ಡದಾಗುತ್ತಾ ಬಾರಿ ಗಾತ್ರದಲ್ಲಿ ಹಣ್ಣುಗಳಾಗಿ ಬೆಳೆದಿದ್ದವು. ವಿಜು ಸುಬ್ರಮಣಿ ಅವರು ಇವು ಗಜ ನಿಂಬೆಹಣ್ಣು ಎಂದು ಹೇಳಲಾಗುತ್ತಿದ್ದು ಇಟಲಿ, ಯೂರೋಪ್, ದೇಶಗಳಲ್ಲಿ ಅಪರೂಪದಲ್ಲಿ ಕಂಡು ಬರುವ ಅಪರೂಪದ ಗಜ ನಿಂಬೆಹಣ್ಣುಗಳಾಗಿವೆ ಎಂದಿದ್ದಾರೆ.
ಗಜ ನಿಂಬೆಯ ಬಗೆಗಳಲ್ಲಿ ಇದು ಬಹು ಮುಖ್ಯವಾದದ್ದು, ಸಾಮಾನ್ಯವಾಗಿ ಎಲ್ಲ ತರಹದ ವಾತಾವರಣಕ್ಕೂ ಹೊಂದಿಕೊಂಡು ಬೆಳೆಯುತ್ತದೆ. ಇದರ ಹಣ್ಣು ಅಂಡಾಕಾರವಾಗಿದ್ದು, ಸಣ್ಣ ಬೀಜಗಳನ್ನು ಹೊಂದಿದೆ. ಹಣ್ಣುಗಳಲ್ಲಿ ಮಂದವಾದ ಸಿಪ್ಪೆ ಮತ್ತು ರಸಭರಿತ ತಿರುಳು ಇರುವುದರಿಂದ ಉಪ್ಪಿನಕಾಯಿ ಮತ್ತು ತಂಪಾದ ಪಾನೀಯಗಳ ತಯಾರಿಕೆಯೊಂದಿಗೆ ಹಲವು ಆರೋಗ್ಯಕರ ಉಪಯೋಗ ಔಷಧಿ ಗುಣಗಳಿಗೆ ಬಳಕೆಯಾಗುತ್ತಿದೆ ಎಂದಿದ್ದಾರೆ.
ಕ್ರಿಸ್‌ಮಸ್, ಹೊಸವರ್ಷಾಚರಣೆಗೆ ಯಾವುದೇ ನಿರ್ಬಂಧ ಇಲ್ಲ; ಸಿಎಂ ಸ್ಪಷ್ಟನೆ
ಕೃಷಿ ಹಾಗೂ ಪರಿಸರ ಕಾಳಜಿಯೊಂದಿಗೆ ವಿಜು ಸುಬ್ರಮಣಿ ಅವರು ತಮ್ಮ ಕಾಫಿ ತೋಟದಲ್ಲಿ ಹಲವು ತಳಿಯ ಹಣ್ಣು ಹಂಪಲು ಗಿಡಗಳನ್ನು ಬೆಳೆದಿದ್ದಾರೆ. ಅವಶ್ಯಕತೆ ಇರುವಷ್ಟನ್ನು ಮಾತ್ರ ಕೊಯ್ದು ಬಳಕೆ ಮಾಡಿ, ಬಾಕಿ ಹಣ್ಣುಗಳನ್ನು ಪಕ್ಷಿಗಳಿಗೆ ಆಹಾರವಾಗಲು ಬಿಡುತ್ತಾರೆ. ಪರಿಸರ ಕಾಳಜಿ ಸಮಾಜ ಸೇವೆಗಾಗಿ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಸಾಧಕರ ಸನ್ಮಾನ ಗೌರವ ಕಾರ್ಯಕ್ರಮದಲ್ಲಿ ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ ಸ್ವೀಕರಿಸಿದ್ದಾರೆ. ತಮ್ಮ ಕಾಫಿ ತೋಟದಲ್ಲಿ ಬೆಳೆದ ಗಜನಿಂಬೆ ಫಸಲನ್ನ ಸ್ಥಳೀಯ ದೇವಸ್ಥಾನಗಳಿಗೆ ನೀಡಿದ್ದಾರೆ. ಭಾರೀ ಗಾತ್ರದಲ್ಲಿ ಬೆಳೆಯುವುದಕ್ಕೇನೋ ಬಹುಷಃ ಇವುಗಳಿಗೆ ಗಜ ನಿಂಬೆ ಎಂದು ಹೆಸರಿಟ್ಟರಬಹುದೇನೋ ಅಲ್ವಾ?