Hubballi: ಬೇಸಿಗೆಗೆ ಲಿಂಬು ದರ ಹೆಚ್ಚಳದ ಬಿಸಿ..!

By Girish Goudar  |  First Published Mar 9, 2022, 4:12 AM IST

*   ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳ
*  ಕಡಿಮೆಯಾದ ಆಮದು ಪ್ರಮಾಣ
*  ಚೀಲವೊಂದಕ್ಕೆ 3,000-3,500
 


ಬಾಲಕೃಷ್ಣ ಜಾಡಬಂಡಿ

ಹುಬ್ಬಳ್ಳಿ(ಮಾ.09): ಬೇಸಿಗೆ(Summer Season) ಆರಂಭವಾಗುತ್ತಿದ್ದಂತೆ ಹುಬ್ಬಳ್ಳಿಯ(Hubballi) ಎಪಿಎಂಸಿ ಮಾರುಕಟ್ಟೆಯಲ್ಲಿ ಲಿಂಬು ದರ ಗಣನೀಯವಾಗಿ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಕಳೆದ ತಿಂಗಳಲ್ಲಿ ಲಿಂಬು ದರ(Lemon PriceP) ಚೀಲಕ್ಕೆ (ಸಾವಿರ ಲಿಂಬು) 1,200 ದಾಟಿರಲಿಲ್ಲ. ಆದರೆ ಮಾರ್ಚ್‌ ಮೊದಲ ವಾರದಲ್ಲಿ ಕ್ರಮೇಣವಾಗಿ 2 ಸಾವಿರದಿಂದ 4 ಸಾವಿರ ವರೆಗೆ ಏರಿಕೆ ಕಂಡಿದೆ. ಮಾ. 7ರಂದು ಸಣ್ಣ ಗಾತ್ರದ ಲಿಂಬು ಚೀಲಕ್ಕೆ . 1,800ರಿಂದ 2500ರ ವರೆಗೆ, ದೊಡ್ಡ ಗಾತ್ರದ ಲಿಂಬು 3000ರಿಂದ 3500ರ ವರೆಗೆ ಮಾರಾಟವಾಗಿದೆ. ಬೇಸಿಗೆಯ ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಲಿಂಬುಗೆ ಬೇಡಿಕೆ ಹಾಗೂ ಬೆಲೆ ಸಾಮಾನ್ಯವಾಗಿ ಹೆಚ್ಚುತ್ತದೆ. ಆದರೆ ಈ ಬಾರಿ ಅಪಾರ ಪ್ರಮಾಣದ ಏರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಾಗುವ ಸಂಭವ ಇದೆ ಎನ್ನುವುದು ವ್ಯಾಪಾರಿ ವಲಯದ ಮಾತಾಗಿದೆ.

Tap to resize

Latest Videos

ಒಂದು ಚೀಲದಲ್ಲಿ 900ರಿಂದ 1,000 ಲಿಂಬು ಇರುತ್ತವೆ. ಸಣ್ಣ ಲಿಂಬು ಚೀಲವೊಂದಕ್ಕೆ 1500ರಿಂದ 2,000 ವರೆಗೂ ಮಾರಾಟವಾಗುತ್ತಿದೆ. ದೊಡ್ಡ ಲಿಂಬು ಚೀಲವೊಂದಕ್ಕೆ 3000ದಿಂದ 4200ರವರೆಗೂ ಮಾರಾಟವಾಗುತ್ತಿದೆ. ಬೇಸಿಗೆ ಆರಂಭದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ(Market) ಲಿಂಬುಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಆಮದು ಪ್ರಮಾಣ ಕಡಿಮೆಯಾಗಿದೆ. ಪ್ರತಿ ವರ್ಷವೂ ಬೇಸಿಗೆ ದಿನಗಳ ಕನಿಷ್ಠ ಎರಡು ಅಥವಾ ಮೂರು ತಿಂಗಳು ಲಿಂಬು ದರ ಅಪಾರ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುತ್ತದೆ. ಅದರಂತೆ ಈ ಬಾರಿ ಬೇಸಿಗೆ ಆರಂಭವಾದ ತಕ್ಷಣವೇ ಬೇಡಿಕೆ ಹೆಚ್ಚುವ ಜೊತೆಗೆ ದರವೂ ಭಾರಿ ಜಿಗಿತ ಕಂಡಿದೆ.

Ukraine Crisis ಇತರ ದೇಶದಂತೆ ಭಾರತ ಮಾಡಿದ್ದರೆ ಅಲ್ಲೆ ಸುತ್ತು ಹೋಗ್ತಿದ್ವಿ, ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳ ಕಣ್ಣೀರು!

ಎಪಿಎಂಸಿಯಲ್ಲಿ(APMC) ವಾರಕ್ಕೆ ಮೂರು ಬಾರಿ ಲಿಂಬು ಸವಾಲು ಪ್ರಕ್ರಿಯೆ ನಡೆಯುತ್ತಿದೆ. ಸೋಮವಾರ, ಗುರುವಾರ ಮತ್ತು ಶನಿವಾರ ಸವಾಲು ನಡೆಯಲಿದೆ. ಕಡಿಮೆ ಪ್ರಮಾಣದಲ್ಲಿ ಲಿಂಬು ಬಂದಿದ್ದರ ಪರಿಣಾಮ ಬೆಲೆ ಹೆಚ್ಚಾಗುತ್ತಿದೆ. ಆಮದು ಪ್ರಮಾಣ ಏರಿಕೆ, ಇಳಿಕೆ ಸಾಮಾನ್ಯವಾಗಿದ್ದು, ಅದರ ಮೇಲೆ ಬೆಲೆ ನಿರ್ಣಯವಾಗಿರಲಿದೆ ಎಂದು ಹೇಳುತ್ತಾರೆ ಎಪಿಎಂಸಿಯ ತರಕಾರಿ ಮಾರುಕಟ್ಟೆ ಉಸ್ತುವಾರಿ ಪ್ರದೀಪ ಗಡೇದ.

ಕಳೆದ ತಿಂಗಳು ಮಾರುಕಟ್ಟೆಯಲ್ಲಿ ಲಿಂಬು ಕೇಳುವವರೇ ಇಲ್ಲದಂತಾಗಿತ್ತು. ಬೇಸಿಗೆ ಆರಂಭವಾಗಿದ್ದರಿಂದ ತಂಪು ಪಾನೀಯ ಸೇವಿಸುವವರು ಸೇರಿ ಲಿಂಬುಗೆ ಅತ್ಯಧಿಕ ಬೇಡಿಕೆ ಬರುತ್ತಿದೆ. ಬಿಸಿಲಿನ ಜಳಕ್ಕೆ ಲಿಂಬು ಶರಬತ್‌ನ ಮೊರೆ ಹೋಗುವವರೇ ಹೆಚ್ಚು. ಇದರಿಂದ ಬೇಡಿಕೆ ಹೆಚ್ಚಿದೆ. ಆದರೆ ಮಾರುಕಟ್ಟೆಗೆ ಸಾಕಷ್ಟುಪ್ರಮಾಣದಲ್ಲಿ ಲಿಂಬು ಬಂದಿಲ್ಲ. ಬೆಲೆ ಹೆಚ್ಚಳಕ್ಕೆ ಇದೇ ಕಾರಣ ಎನ್ನುತ್ತಾರೆ ಲಿಂಬು ವ್ಯಾಪಾರಸ್ಥೆ ಈರಮ್ಮ ಡೋಣಿ.

ಈ ಮೊದಲು ಸಣ್ಣ ಬುಟ್ಟಿಯಲ್ಲಿ 7-8 ಲಿಂಬು ತುಂಬಿಸಿ .10ಗೆ ನೀಡಲಾಗುತ್ತಿತ್ತು. ಆದರೆ ಬೆಲೆ ಹೆಚ್ಚಳದಿಂದ ಈಗ ಅದನ್ನೇ . 20ಗೆ ಮಾರಲಾಗುತ್ತಿದೆ. ಕೇಳುವವರ ಸಂಖ್ಯೆ ಹೆಚ್ಚುತ್ತಿದ್ದು, ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳಾದ ನಿಸಾರ್‌ ಅಹ್ಮದ್‌, ತನ್ವೀರ್‌ ಅಹ್ಮದ್‌.

ಹುಬ್ಬಳ್ಳಿ ಎಪಿಎಂಸಿ ಮಾರುಕಟ್ಟೆ ಮಾತ್ರವಲ್ಲದೇ ಸುತ್ತಮುತ್ತಲಿನ ಜಿಲ್ಲೆ ಹಾಗೂ ತಾಲೂಕಲ್ಲೂ ಲಿಂಬು ದರ ಏರಿಕೆಯಾಗುತ್ತಲೇ ಇದೆ. ಗ್ರಾಹಕರು ಮಾತ್ರವಲ್ಲದೇ, ಸಣ್ಣ ಪುಟ್ಟ ವ್ಯಾಪಾರಸ್ಥರು ಲಿಂಬು ಖರೀದಿಸಲು ಹಿಂದೆ ಮುಂದೆ ನೋಡುವಂತಾಗಿದೆ.

ಲಿಂಬು ದರ ಏರಿಕೆಯಿಂದ ಮಾರುಕಟ್ಟೆಯಲ್ಲಿ ತಂಪು ಪಾನೀಯ, ಜ್ಯೂಸ್‌(Juice) ಬೆಲೆ ಕೂಡ ಹೆಚ್ಚಾಗಲಿದೆ. ಮುಂಬರುವ ಮದುವೆ ಸೀಸನ್‌ ಸೇರಿ ಇನ್ನಿತರೆ ಕಾರ್ಯಕ್ರಮಗಳಿಗೂ ಇದರ ಬಿಸಿ ತಟ್ಟಲಿದೆ. ಜತೆಗೆ ಹೋಟೆಲ್‌, ಖಾನಾವಳಿಗಳಲ್ಲೂ ಇದರ ಬಳಕೆ ಕಡಿಮೆ ಆಗಬಹುದು, ಅಥವಾ ಊಟ, ತಿಂಡಿಗಳ ಬೆಲೆಯೂ ಹೆಚ್ಚುವ ಸಾಧ್ಯತೆ ಇಲ್ಲದಿಲ್ಲ.

Kalasa Banduri Project: ಕಳಸಾ-ಬಂಡೂರಿ ಶೀಘ್ರ ಆರಂಭ: ಬೊಮ್ಮಾಯಿ ವಿಶ್ವಾಸ

ವಿಜಯಪುರ(Vijayapura) ಮತ್ತು ಆಂಧ್ರಪ್ರದೇಶದಿಂದ(Andhra Pradesh) ಹುಬ್ಬಳ್ಳಿ ಎಪಿಎಂಸಿಗೆ ಲಿಂಬು ಆಮದಾಗುತ್ತದೆ. ಆದರೆ, ಈ ಬಾರಿಯ ಬೇಸಿಗೆ ಆರಂಭದಲ್ಲಿ ಆಮದು ಪ್ರಮಾಣ ಕಡಿಮೆಯಾಗಿದೆ. ಇದೇ ಸಂದರ್ಭ ಬೇಡಿಕೆ ಹೆಚ್ಚುತ್ತಿದೆ. ಪ್ರತಿ ವರ್ಷವೂ ಇದೇ ಸ್ಥಿತಿ ಸಾಮಾನ್ಯವಾಗಿ ನಿರ್ಮಾಣವಾಗುತ್ತಿರುತ್ತದೆ. ಆದರೆ ಈ ಬಾರಿ ಬೆಲೆ, ಬೇಡಿಕೆ ಎರಡೂ ಭಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ ಅಂತ ಎಪಿಎಂಸಿಯ ತರಕಾರಿ ಮಾರುಕಟ್ಟೆ ಉಸ್ತುವಾರಿ ಪ್ರದೀಪ ಗಡೇದ ತಿಳಿಸಿದ್ದಾರೆ. 

ಸವಾಲಿನಲ್ಲಿ ಖರೀದಿಸಿ ವ್ಯಾಪಾರ ಮಾಡಲು ಮುಂದಾದರೆ ಚೌಕಾಸಿ ಮಾಡುವವರ ಸಂಖ್ಯೆಯೇ ಹೆಚ್ಚಾಗಿದೆ. ಬೆಲೆ ಹೆಚ್ಚಾಗಿದೆ ಎಂದರೆ ಗ್ರಾಹಕರು ಅರ್ಥ ಮಾಡಿಕೊಳ್ಳುವುದಿಲ್ಲ. ವ್ಯಾಪಾರಕ್ಕಿಟ್ಟ ಲಿಂಬು ಮಾರಾಟವಾಗದೆ ಬಿಸಿಲಿಗೆ ಒಣಗಿ ಹಾಳಾಗುತ್ತಿದೆ ಅಂತ ಜನತಾ ಬಜಾರ್‌ನ ಲಿಂಬು ವ್ಯಾಪಾರಿ ಈರಣ್ಣ ಬ್ಯಾಹಟ್ಟಿ ಹೇಳಿದ್ದಾರೆ. 
 

click me!