ಹೃದಯ ವೈಶಾಲ್ಯತೆ ಎತ್ತಿ ಹಿಡಿದ ಬೆಂಗಳೂರಿನ ಜನತೆ: ಲೇಹರ್‌ಸಿಂಗ್‌

Published : Oct 02, 2019, 08:01 AM IST
ಹೃದಯ ವೈಶಾಲ್ಯತೆ ಎತ್ತಿ ಹಿಡಿದ ಬೆಂಗಳೂರಿನ ಜನತೆ: ಲೇಹರ್‌ಸಿಂಗ್‌

ಸಾರಾಂಶ

ಬೆಂಗಳೂರಿನ ಮೇಯರ್‌ ಚುನಾವಣೆ ಬೆಂಗಳೂರಿನ ಜನರ ಹೃದಯ ವೈಶಾಲ್ಯತೆಯ ನಿದರ್ಶನವಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಲೇಹರ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.  

ಬೆಂಗಳೂರು [ಅ.02]:  ಬಿಬಿಎಂಪಿ ಸದಸ್ಯ ಗೌತಮ್‌ ಕುಮಾರ್‌ ಜೈನ್‌ ಅವರು ಮೇಯರ್‌ ಆಗಿ ಆಯ್ಕೆಯಾಗಿದ್ದು ಸ್ವಾಗತಾರ್ಹವಾಗಿದ್ದು, ಮೇಯರ್‌ ಚುನಾವಣೆ ಬೆಂಗಳೂರಿನ ಜನರ ಹೃದಯ ವೈಶಾಲ್ಯತೆಯ ನಿದರ್ಶನವಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಲೇಹರ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಯಾವಾಗಲೂ ದೇಶದ ಎಲ್ಲಾ ಪಂಗಡಗಳ, ಪ್ರದೇಶಗಳ ಜನರನ್ನು ಅಪ್ಪಿಕೊಂಡಿದೆ. ಗೌತಮ್‌ ಕುಮಾರ್‌ ಜೈನ್‌ ಅವರನ್ನು ಬೆಂಗಳೂರಿನ ಮೊದಲ ಪ್ರಜೆಯಾಗಿ ಆಯ್ಕೆ ಮಾಡುವ ಮೂಲಕ ಮತ್ತೊಮ್ಮೆ ನಗರದ ಹೃದಯ ವೈಶಾಲ್ಯತೆಯನ್ನು ಜನತೆ ಎತ್ತಿಹಿಡಿದಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಂಗಳೂರಿನ ಹಿರಿಮೆಗೆ ಸಾರ್ಥಕತೆ ಸಲ್ಲಿಸಿದ್ದಕ್ಕಾಗಿ ವಿನಮ್ರತೆಯಿಂದ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ. ನೂತನ ಮೇಯರ್‌ ಗೌತಮ್‌ ಕುಮಾರ್‌ ಜೈನ್‌ ಅವರು ನಗರದ ನಾಗರಿಕರ ನಿರೀಕ್ಷೆಗೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ.

PREV
click me!

Recommended Stories

ವಿದ್ಯಾರ್ಥಿನಿಯರ ಮೈಮುಟ್ಟಿ ಅಸಭ್ಯ ವರ್ತನೆ; ಪ್ರೌಢಶಾಲೆಗೆ ನುಗ್ಗಿ ಪ್ರಾಂಶುಪಾಲನಿಗೆ ಧರ್ಮದೇಟು ಕೊಟ್ಟ ಗ್ರಾಮಸ್ಥರು!
ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!