ಬಿಜೆಪಿಯವರು ರೈಲು ಮತ್ತು ವಿಮಾನ ಸಾರಿಗೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ. ರಾಷ್ಟ್ರ ಹಿತಕ್ಕಾಗಿ ಹಾಗೂ ಕೋಮುವಾದಿ ಬಿಜೆಪಿಯನ್ನು ದೂರವಿಡುವುದಕ್ಕಾಗಿ ಕಾಂಗ್ರೆಸ್ ಅನ್ನು 2023ರ ಚುನಾವಣೆಯಲ್ಲಿ ಅಧಿಕಾರಕ್ಕೆ ತರಬೇಕಾಗಿದೆ
ಕೋಲಾರ(ಡಿ.06): ಬಿಜೆಪಿಯವರು ರೈಲು ಮತ್ತು ವಿಮಾನ ಸಾರಿಗೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ. ರಾಷ್ಟ್ರ ಹಿತಕ್ಕಾಗಿ ಹಾಗೂ ಕೋಮುವಾದಿ ಬಿಜೆಪಿಯನ್ನು ದೂರವಿಡುವುದಕ್ಕಾಗಿ ಕಾಂಗ್ರೆಸ್ ಅನ್ನು 2023ರ ಚುನಾವಣೆಯಲ್ಲಿ ಅಧಿಕಾರಕ್ಕೆ ತರಬೇಕಾಗಿದೆ, ಈ ನಿಟ್ಟಿನಲ್ಲಿ ಕಾರ್ಯಕರ್ತರು ಭಿನ್ನಾಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮನವಿ ಮಾಡಿದರು.
ಸೋಮವಾರ ನಗರದ (Congress) ಕಚೇರಿ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, 2019ರElection) ವೇಳೆ ನಡೆದ ಕಹಿ ನೆನಪು ಗಳನ್ನು ಮರೆತು ರಾಷ್ಟ್ರದ ಹಿತದೃಷ್ಟಿಯಿಂದ ಕಾಂಗ್ರೆಸ್ ಅನ್ನು ರಾಷ್ಟ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಜವಾಬ್ದಾರಿಯನ್ನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಖರ್ಗೆ ನೀಡಿದ್ದಾರೆ, ನನ್ನೆಲ್ಲಾ ನೋವುಗಳನ್ನು ನುಂಗಿ ಕೊಂಡು ಒಂದಾಗಿ ಹೋಗಲು ಒಪ್ಪಿದ್ದೇನೆ. ಹಳೆಯದ್ದನ್ನು ಮರೆತು ಮುಂದೆ ಪಕ್ಷ ಸಂಘಟನೆ ಹಾಗೂ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.
ರೈಲು, ವಿಮಾನ ಖಾಸಗೀಕರಣ
8 ವರ್ಷಗಳಿಂದ ಬಿ ಜೆ ಪಿಯವರು ದೇಶದಲ್ಲಿ ಆಶಾಂತಿ ಉಂಟು ಮಾಡುತ್ತಿದ್ದಾರೆ. ಮತೀಯ ಗಲಭೆಗಳು, ಧರ್ಮಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ನನ್ನ ಮುಖ ನೋಡಿ ಮತ ಕೊಡಿ ಎಂದು ಕೇಳುವ ಮಟ್ಟಕ್ಕೆ ಪ್ರಧಾನಿಯವರು ಬಂದಿದ್ದಾರೆ, ಇಂತಹ ಪ್ರಧಾನಿಯವರನ್ನು ನಾನೆಂದೂ ನೋಡಿಲ್ಲ, ಎಲ್ಲವನ್ನೂ ಖಾಸಗೀಕರಣ ಮಾಡಿದ್ದಾಯಿತು. ಈಗ ರೈಲು ಮತ್ತು ವಿಮಾನ ಸಾರಿಗೆಯನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ರಾಜಕಾರಣಕ್ಕಾಗಿ ರಾಹುಲ್ ಗಾಂಧಿಯವರು ಜೋಡೋ ಯಾತ್ರೆಯನ್ನು ಆರಂಭಿಸಿಲ್ಲ, ಧರ್ಮಗಳನ್ನು ಒಂದುಗೂಡಿಸುವ ಮತ್ತು ಮನಸ್ಸುಗಳನ್ನು ಒಂದುಗೂಡಿಸುವ ಹಾಗೂ ರಾಷ್ಟ್ರದ ಒಳಿತಿಗಾಗಿ 3570 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದಾರೆ. ಈಗಾಗಲೇ 2600 ಕಿ.ಮೀ ಮುಗಿಸಿದ್ದು ಉತ್ತಮ ಪ್ರತಿಕ್ರಿಯೆ ಬಂದಿದೆ, ಬೆಳಗ್ಗೆ 6 ಗಂಟೆಯಿಂದಲೇ ಪಾದಯಾತ್ರೆಗೆ ಜನರು ಕ್ಯೂ ನಿಲ್ಲುತ್ತಿದ್ದಾರೆ, ಕರ್ನಾಟಕ ದಲ್ಲಿಯೂ ಪಾದ ಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದರು.
ಸರ್ಕಾರ ಬದಲಾಗಬೇಕು
ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ಕೋಲಾರದಿಂದ ಬೆಳಗಾವಿ ತನಕ ಸೇರಿದಂತೆ ರಾಜ್ಯದ ಯಾವ ಮೂಲೆಗಳಲ್ಲಿ ಸಂಚರಿಸುತ್ತಿದ್ದರೂ ಸರ್ಕಾರ ಬದಲಾವಣೆಯಾಗಬೇಕೆಂದು ಜನ ಹೇಳುತ್ತಿದ್ದಾರೆ, ಜನರೇ ಈ ರೀತಿ ಹೇಳುವಾಗ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜವಾಬ್ದಾರಿ ಹೆಚ್ಚಾಗಿ ಜನರ ಪರ ಧ್ವನಿಯಾಗಬೇಕಿದೆ ಹಾಗೂ ಹೊಣೆಗಾರಿಕೆಯೂ ಆಗಬೇಕಾಗಿದೆ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ರಾಜ್ಯ-ರಾಷ್ಟ್ರದ ಹಿತದೃಷ್ಟಿಯಿಂದ ಪರಿಣಾಮಕಾರಿಯಾಗಿ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಮಾರ್ಗದರ್ಶನದಲ್ಲಿ ಕೆಲಸಗಳನ್ನು ಮಾಡುತ್ತಿದ್ದಾರೆಂದರು.
ಭಿನ್ನಮತ ಬಿಟ್ಟರೆ ಪಕ್ಷಕ್ಕೆ ಗೆಲುವು
ಕೋಡಾ ಮಾಜಿ ಅಧ್ಯಕ್ಷ ಅತಾವುಲ್ಲಖಾನ್ ಮಾತನಾಡಿ, ಕೋಲಾರ ಕ್ಷೇತ್ರದಲ್ಲಿ 15 ವರ್ಷದಿಂದ ಕಾಂಗ್ರೆಸ್ ಗೆಲ್ಲಲ್ಲು ಸಾಧ್ಯವಾಗಿಲ್ಲ, ಇಲ್ಲಿ ಭಿನ್ನಾಪ್ರಾಯಗಳನ್ನು ಬಿಡಬೇಕು. ಯಾರೇ ಪಕ್ಷದ ಅಭ್ಯರ್ಥಿಯಾದರೂ ಅವರ ಗೆಲುವಿಗೆ ಶ್ರಮಿಸಬೇಕು, ಸಿದ್ದರಾಮಯ್ಯ ಬರುವುದಾದರೆ ಸ್ವಾಗತಿಸೋಣ ಎಂದರು.
ಸಭೆಯಲ್ಲಿ ಮುಖಂಡರಾದ ಎಲ್.ಎ.ಮಂಜುನಾಥ್, ಊರುಬಾಗಿಲು ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್‌ಬಾಬು, ಉದಯಶಂಕರ್, ಮುಖಂಡರಾದ ಕೆ.ಜಯದೇವ್, ಸವಿತಾ ಮಂಜುನಾಥ್, ನಗರಸಭಾ ಸದಸ್ಯ ಅಂಬರೀಶ್ ಇದ್ದರು
ಬಿಜೆಪಿಯವರು ರೈಲು ಮತ್ತು ವಿಮಾನ ಸಾರಿಗೆಯನ್ನು ಮಾರಾಟಕ್ಕೆ ಇಟ್ಟಿದ್ದಾರೆ
ರಾಷ್ಟ್ರ ಹಿತಕ್ಕಾಗಿ ಹಾಗೂ ಕೋಮುವಾದಿ ಬಿಜೆಪಿಯನ್ನು ದೂರವಿಡುವುದಕ್ಕಾಗಿ ಕಾಂಗ್ರೆಸ್ ಅನ್ನು 2023ರ ಚುನಾವಣೆಯಲ್ಲಿ ಅಧಿಕಾರಕ್ಕೆ ತರಬೇಕಾಗಿದೆ,
ಈ ನಿಟ್ಟಿನಲ್ಲಿ ಕಾರ್ಯಕರ್ತರು ಭಿನ್ನಾಪ್ರಾಯಗಳನ್ನು ಬದಿಗೊತ್ತಿ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮನವಿ