ಕಾಡು ಹಂದಿಗಳ ನಿಯಂತ್ರಿಸಲು ವನ್ಯಜೀವಿ (ಸಂರಕ್ಷಣಾ) ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಪತ್ರ ಬರೆದು ಮನವಿ ಮಾಡಿದ್ದಾರೆ.
ಮಂಡ್ಯ (ಡಿ. 06): ಜಿಲ್ಲೆಯಲ್ಲಿ ಕಾಡು ಹಂದಿಗಳ ಕಾಟ ಮಿತಿಮೀರಿದೆ. ರಾತ್ರಿ ವೇಳೆ ಹೊಲಗಳಿಗೆ ನುಗ್ಗುವ ಹಂದಿಗಳು ರೈತರ ಬೆಳೆಗಳನ್ನು ತೀವ್ರವಾಗಿ ಹಾನಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕಾಡು ಹಂದಿಗಳ ನಿಯಂತ್ರಿಸಲು ವನ್ಯಜೀವಿ (ಸಂರಕ್ಷಣಾ) ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಪತ್ರ ಬರೆದು ಮನವಿ ಮಾಡಿದ್ದಾರೆ.
ಗಳ (Pig) ಹಾವಳಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಕಂಡು ಬರುತ್ತಿರುವ ಸಮಸ್ಯೆ ಯಾಗಿದೆ. ಇವುಗಳಿಂದ (Farmers) ಕೃಷಿಯಲ್ಲಿ ತೊಡಗುವುದು ದುಸ್ತರವಾಗಿದೆ. ಮೊದಲೇ ರೈತ ಆರ್ಥಿಕವಾಗಿ ಸಂಕಷ್ಟ ದಲ್ಲಿದ್ದು, ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ. ವೈಜ್ಞಾನಿಕ ಬೆಲೆ (Price) ಇನ್ನೂ ನಿಗದಿಯಾಗಿಲ್ಲ. ಇನ್ನೂ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಈ ಮಧ್ಯೆ ಪರಿಶ್ರಮ ಪಟ್ಟು ಬೆಳೆ ಬೆಳೆದರೆ ಅವುಗಳೂ ಕಾಡುಪ್ರಾಣಿಗಳ ಪಾಲುಗುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಮಧ್ಯಪ್ರವೇಶ ಮಾಡಿ ರೈತರ ನೆರವಿಗೆ ಧಾವಿಸಬೇಕು. ಬೇಟೆಗಾರರು ಕಾಡುಹಂದಿಗಳನ್ನು ಬೇಟೆಯಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರಮುಖವಾಗಿ ಕಬ್ಬು ಹಾಗೂ ತೆಂಗು ಬೆಳೆ ಬೆಳೆಯಲಾಗುತ್ತದೆ. ಈ ಬೆಳೆಗಳಿಗೆ ಕಾಡು ಹಂದಿಗಳಿಂದ ತೀವ್ರ ಸಂಕಷ್ಟಎದುರಾಗಿದೆ. ಈ ಕಾಡು ಹಂದಿಗಳು ರೈತರು ಬೆಳೆದ ಕಬ್ಬು ಹಾಗೂ ತೆಂಗಿನ ಸಸಿಗಳ ಕಾಂಡಗಳನ್ನು ಬಗೆದು ತಿಂದು ಹಾಕಿರುವ ಪ್ರಕರಣಗಳು ಹೆಚ್ಚಾಗಿವೆ. ಕಾಡು ಹಂದಿಗಳ ಹಾವಳಿಯಿಂದ ರೈತರು ಸಂಕಷ್ಟಕ್ಕೀಡಾಗಿ ಹೈರಾಣಾಗಿದ್ದಾರೆ ಎಂದಿದ್ದಾರೆ.
ರಾತ್ರಿ ವೇಳೆ ಕಾಡು ಹಂದಿಗಳು ಹಿಂಡು ಹಿಂಡಾಗಿ ರೈತರ ಹೊಲ-ಗದ್ದೆಗಳಲ್ಲಿ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ. ಮೊದಲೇ ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ಹಾಗೂ ವೈಜ್ಞಾನಿಕ ದರವಿಲ್ಲದೆ ಕಂಗಾಲಾಗಿದ್ದಾರೆ. ಈಗ ಹಂದಿಗಳ ಹಾವಳಿಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಗಾದರೆ ಇದರ ನಿಯಂತ್ರಣವನ್ನು ರೈತರೇ ಮಾಡಿಕೊಳ್ಳಬಹುದೇ ಎಂದು ಕೇಳಿದರೆ, ಅದಕ್ಕೆ ಕಾನೂನಿನಲ್ಲಿ ಕೆಲವು ತೊಡಕುಗಳು ಇವೆ ಎಂದು ತಿಳಿಸಿದ್ದಾರೆ.
ಪರವಾನಗಿ ಹೊಂದಿರುವ ಬಂದೂಕಿನಿಂದ ರೈತರು ಕಾಡು ಹಂದಿಗಳ ಮೇಲೆ ಗುಂಡು ಹಾರಿಸಬಹುದು ಕೊಂದ ಅಥವಾ ಸೆರೆ ಹಿಡಿದ ಹಂದಿಗಳನ್ನು ಘಟನೆ ನಡೆದ 24 ಗಂಟೆ ಒಳಗೆ ಅರಣ್ಯ ಇಲಾಖೆ ಅಧಿಕಾರಿಗಳ ಸುಪರ್ದಿಗೆ ಒಪ್ಪಿಸಬೇಕಿದೆ. ಆದರೆ, ಈಗ ಯಾವ ರೀತಿಯಾಗುತ್ತಿದೆ ಎಂದರೆ ರೈತರಿಗೆ ಇದರ ಅರಿವು ಇರುವುದಿಲ್ಲ. ಹೀಗಾಗಿ ರೈತರು ಕಾಡು ಹಂದಿಗಳನ್ನು ಹಿಡಿದರೆ, ಇಲ್ಲವೇ ಗುಂಡು ಹೊಡೆದು ಸಾಯಿಸಿದರೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ದಂಡ ಹಾಕುತ್ತೇವೆ ಎಂದು ರೈತರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಾರೆಂಬ ದೂರುಗಳು ಕೇಳಿಬಂದಿವೆ. ಇಂತಹ ಸುಲಿಗೆ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.
ಈಗಿರುವ ಕಾನೂನಿನಲ್ಲಿಯೂ ಸ್ವಲ್ಪ ಮಾರ್ಪಾಡನ್ನು ಮಾಡಬೇಕು. ಎಲ್ಲ ರೈತರು ಬಂದೂಕುಗಳನ್ನು ಕೊಂಡುಕೊಳ್ಳಲು ಶಕ್ತರಾಗಿಲ್ಲ. ಪರವಾನಗಿಯೂ ಅಷ್ಟುಸುಲಭವಾಗಿ ಸಿಗುವುದಿಲ್ಲ. ಅದಕ್ಕಾಗಿ ಬೇಟೆಗಾರರಿಗೆ ಕಾಡುಹಂದಿಗಳನ್ನು ಹೊಡೆಯಲು ಅನುಮತಿ ತಾವುಗಳು ನೀಡಬೇಕು. ಇದರಿಂದ ರೈತರ ಜಮೀನುಗಳಿಗೆ ಕಾಡು ಹಂದಿಗಳು ನುಗ್ಗಿ ಉಪಟಳ ಮಾಡುವುದು ಕಡಿಮೆಯಾಗುತ್ತದೆ ಎಂದು ಒತ್ತಾಯಿಸಿದ್ದಾರೆ.
ರೈತರಿಗೆ ಅನ್ಯಾಯವಾಗಲು ಬಿಡಲ್ಲ
ಮೂಡಿಗೆರೆ : ಕಸ್ತೂರಿ ರಂಗನ್ ವರದಿ ಜಾರಿಯಾದರೆ ರೈತರ ಬದುಕು ಸಂಕಷ್ಟಕ್ಕೀಡಾಗುತ್ತದೆ. ಯಾವುದೇ ಕಾಯಿದೆಗಳು ರೈತರಿಗೆ ಅನ್ಯಾಯವಾಗುವ ಹಾಗಿದ್ದರೆ, ಜಾರಿಯಾಗಲು ಬಿಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಅವರು ಕಾಫಿ ಬೆಳಗಾರರ ಸಂಘದ ವತಿಯಿಂದ ಬೆಳೆಗಾರರ ವಿವಿಧ ಸಮಸ್ಯೆ ಬಗ್ಗೆ ಪಟ್ಟಣದ ಪ್ಲಾಂಟರ್ಸ್ ಕ್ಲಬ್‌ನಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಸಂವಾದ ಸಭೆಯಲ್ಲಿ ಮಾತನಾಡಿದರು. ಬಯಲುಸೀಮೆ, ಮಲೆನಾಡಿನ ರೈತರಿಗೆ ವ್ಯತ್ಯಾಸವಿದೆ. ಶ್ರಮ ಒಂದೇ ಆಗಿದ್ದರೂ ಮಲೆನಾಡು ಭಾಗದ ಬೆಳೆಗಾರರನ್ನು ನೋಡುವ ದೃಷ್ಟಿಕೋನ ಬೇರೆಯಿದೆ. ಈ ದೃಷ್ಟಿಕೋನ ಬದಲಾಗಬೇಕು.
ಸರ್ಫೇಸಿ ಕಾಯಿದೆ ಬಗ್ಗೆ ಎಲ್ಲಿ ಯಾಮಾರಿದ್ದೇವೋ ಗೊತ್ತಿಲ್ಲ. ಯಾವ ಕಾಯಿದೆಗಳು ರೈತರಿಗೆ ಅನ್ಯಾಯವಾಗುತ್ತವೆಯೋ, ಅವನ್ನು ಜಾರಿಯಾಗಲು ಬಿಡುವುದಿಲ್ಲ. ಅದಕ್ಕೆ ನಮ್ಮ ಪಕ್ಷ ಆಡಳಿತಕ್ಕೆ ಬರುವಂತೆ ಅವಕಾಶ ನೀಡಬೇಕೆಂದು ಎಂದು ಕೇಳಿಕೊಂಡರು. ಈ ಸಂದರ್ಭದಲ್ಲಿ ಕೆಜಿಎಫ್ ಮಾಜಿ ಅಧ್ಯಕ್ಷ ಬಿ.ಎಸ್. ಜಯರಾಂ ಮಾತನಾಡಿ, ಸರಕಾರ 2018ರಲ್ಲಿ 10 ಎಕರೆ ಕೃಷಿ ಭೂಮಿಯನ್ನು ಗುತ್ತಿಗೆ ನೀಡಲು ಹೊರಟಿತ್ತು. ಆದರೆ ಇದೂವರೆಗೂ ಕಾರ್ಯರೂಪಕ್ಕೆ ಬರಲಿಲ್ಲ. ಭೂ ಕಬಳಿಕೆ ಕಾಯಿದೆಯಿಂದ ಕೃಷಿ ಭೂಮಿ ಹೊರಗಿಡಬೇಕು.