ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ತಹಸೀಲ್ದಾರ್ ಕೆ. ಚಂದ್ರಮೌಳಿ ಅವರ ನೇತೃತ್ವ ನಡೆಯಬೇಕಿದ್ದ ಪ. ಜಾತಿ ಮತ್ತು ಪಂಗಡಗಳ ಹಿತರಕ್ಷಣಾ ಸಮಿತಿ ಸಭೆಗೆ ಪ್ರಮುಖ ಇಲಾಖೆಗಳ ಮೇಲಾಧಿಕಾರಿಗಳು ಗೈರಾದ ಹಿನ್ನೆಲೆ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದ ಪ್ರಸಂಗ ಜರುಗಿದೆ.
ಪಿರಿಯಾಪಟ್ಟಣ (ಅ.30):ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ತಹಸೀಲ್ದಾರ್ ಕೆ. ಚಂದ್ರಮೌಳಿ ಅವರ ನೇತೃತ್ವ ನಡೆಯಬೇಕಿದ್ದ ಪ. ಜಾತಿ ಮತ್ತು ಪಂಗಡಗಳ ಹಿತರಕ್ಷಣಾ ಸಮಿತಿ ಸಭೆಗೆ ಪ್ರಮುಖ ಇಲಾಖೆಗಳ ಮೇಲಾಧಿಕಾರಿಗಳು ಗೈರಾದ ಹಿನ್ನೆಲೆ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದ ಪ್ರಸಂಗ ಜರುಗಿದೆ.
(Dalit) ಸಮುದಾಯಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತಾಲೂಕು (Taluk) ಮಟ್ಟದ ಅಧಿಕಾರಿಗಳು ವಿಫಲರಾಗಿದ್ದು, ನೆಪ ಮಾತ್ರಕ್ಕೆ ಸಭೆ ಕರೆಯುತ್ತಾರೆ, ಈಚಿನ ದಿನಗಳಲ್ಲಿ ಠಾಣೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಹೆಚ್ಚು ದೂರುಗಳು ದಾಖಲಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಹಾಗೂ ಸಭೆಗೂ ಆಗಮಿಸಿಲ್ಲ, ದಲಿತ ವಿರೋಧಿ ನೀತಿ ಅನುಸರಿಸುವ ಅಧಿಕಾರಿಗಳ ನಡೆ ಖಂಡನೀಯ ಎಂದು ದಸಂಸ ಮುಖಂಡರಾದ ಎಸ್. ರಾಮು, ಸಿ.ಎಸ್. ಜಗದೀಶ್, ಪಿ. ಮಹದೇವ್, ಸೀಗೂರು ವಿಜಯ…ಕುಮಾರ್, ಧನರಾಜ…, ರಾಮಚಂದ್ರ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದರು.
undefined
ಜಮೀನಿನ ಸಮಸ್ಯೆ ಬಗೆಹರಿಸಿಕೊಡುವಂತೆ ದಲಿತ ಸಮುದಾಯದವರು ತಾಲೂಕು ಆಡಳಿತ ಕಚೇರಿಯ ಮುಂಭಾಗ ಹಲವು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದರು, ಸಮಸ್ಯೆ ಆಲಿಸಿ ಪರಿಹಾರ ಒದಗಿಸಿಕೊಡಲು ಅಧಿಕಾರಿಗಳು ವಿಫಲರಾಗಿದ್ದಾರೆ, ಮೂರು ತಿಂಗಳಿಗೊಮ್ಮೆ ನಡೆಸಬೇಕಿರುವ ದಲಿತ ಸಮಾಜಗಳ ಹಿತರಕ್ಷಣಾ ಸಭೆಯನ್ನು ಅಧಿಕಾರಿಗಳು ಮನಬಂದಂತೆ ವರ್ಷಕ್ಕೊಮ್ಮೆ ಆರು ತಿಂಗಳಿಗೊಮ್ಮೆ ನಡೆಸಿ ನಿರ್ಲಕ್ಷ ್ಯ ಭಾವನೆ ಹೊಂದಿದ್ದಾರೆ, ಇದರಿಂದ ದಲಿತ ಸಮಾಜಗಳ ಸಮಸ್ಯೆ ಬಗೆಹರಿಯದೆ ಮತ್ತಷ್ಟುಹೆಚ್ಚುತ್ತಿವೆ ಎಂದು ಮುಖಂಡರು ಆರೊಪಿಸಿ ಸಭೆಯಿಂದ ಹೊರನಡೆದರು.
ತಹಸೀಲ್ದಾರ್ ಕೆ. ಚಂದ್ರಮೌಳಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧೆಗೌಡ, ಪುರಸಭೆ ಮುಖ್ಯಧಿಕಾರಿ ಮಹೇಂದ್ರ, ಭೂ ಮಾಪನ ಇಲಾಖೆ ಸಹಾಯಕ ನಿರ್ದೇಶಕ ಚಿಕ್ಕಣ್ಣ, ಮುಖಂಡರಾದ ಆರ್.ಎಸ್. ದೊಡ್ಡಣ್ಣ, ದೊಡ್ಡಯ್ಯ, ಪುಟ್ಟಯ್ಯ, ಸಣ್ಣಪ ನಾಯಕ, ರಾಜಯ್ಯ, ತಿಮ್ಮನಾಯಕ, ಶಿವಣ್ಣ, ಭೀಮ… ಆರ್ಮಿ ಗಿರೀಶ್, ಸಿ.ಕೆ. ರಾಜಣ್ಣ, ಕೆ.ಬಿ. ಮೂರ್ತಿ, ನರಸಿಂಹಮೂರ್ತಿ, ಜಯಪ್ಪ, ಹೊನ್ನೂರಯ್ಯ, ಗೋಪಾಲ… ಇದ್ದರು.
ದಲಿತರ ಮನೆ ಭೇಟಿಗೆ ಅಸಮಾಧಾನ :
ಮೈಸೂರು (ಅ.23):ದಲಿತರ ಮನೆಯಲ್ಲಿ ಊಟ ಮಾಡುತ್ತೇವೆ ಎನ್ನುವುದು ಒಂದು ರೀತಿಯ ಫ್ಯಾಷನ್ ಆಗಿದೆ. ಇದರಿಂದ ಎಲ್ಲಾ ರಾಜಕೀಯ ನಾಯಕರು ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಗಾಂಧೀಜಿ ಅವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದರು.
ನಿಂದ (Hotel ) ತರಿಸಿಕೊಂಡು ಸೇವಿಸುತ್ತಾರೆ. ಈ ನಾಟಕ ಒಳ್ಳೆಯದಲ್ಲ, ಸಿಎಂ (CM)ಅವರಿಗೂ ನಾನು ವಿನಂತಿಸುತ್ತೇನೆ. ನಮಗೆ ಅವಮಾನ ಮಾಡಬೇಡಿ, ನಮ್ಮ ಸಮುದಾಯಗಳಿಗೆ ಮುಜುಗರ ಮಾಡಬೇಡಿ. ಹೊಟೇಲ್‌ನಿಂದ ಊಟ, ಹೊಸ ತಟ್ಟೆ, ಲೋಟ ತಂದು ನಮ್ಮ ಮನೆಗಳಲ್ಲಿ ತಿಂದು ಅವಮಾನ ಮಾಡಬೇಡಿ. ದಲಿತರ ಮನೆಗೆ ನೀವು ಬಂದ್ರೆ ನಿಮಗೆ ಲಾಭ, ನಮಗೇನು ಲಾಭ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ದಯಮಾಡಿ ದಲಿತರ ಮನೆಗೆ ಬರಬೇಡಿ, ಬಂದು ನಮಗೆ ಅವಮಾನ ಮಾಡಬೇಡಿ. ದಲಿತರು ಸಹ ಯಾರನ್ನೂ ತಮ್ಮ ಮನೆಗೆ ಊಟಕ್ಕೆ ಕರೆದು ಅವಮಾನಕ್ಕೆ ಒಳಗಾಗಬೇಡಿ ಎಂದು ಅವರು ಮನವಿ ಮಾಡಿದರು.
ದಲಿತರ ಮನೆಗೆ ಹೋಗುವುದಾದರೇ ನೀವು ಒಂದು ಕಾರ್ಯಕ್ರಮದೊಂದಿಗೆ ಹೋಗಿ. ಅದುಬಿಟ್ಟು ನೀವು ಬ್ರಾಂಡ್ ಹೋಟೆಲ್ ಊಟ ತಿಂಡಿ ತಿನ್ನೋಕೆ ದಲಿತರ ಮನೆಗೇ ಹೋಗಬೇಕಾ? ಬ್ರಾಹ್ಮಣರು, ಲಿಂಗಾಯತರ ಹೋಟೆಲ್ ಊಟ ತರಿಸಿ ತಿನ್ನೋಕೆ ದಲಿತರ ಮನೆಗೆ ಯಾಕ್ ಹೋಗ್ತಿರಾ? ದಲಿತರ ಮನೆಗೆ ಬರೋದಾದ್ರೆ ಒಂದು ಕಾರ್ಯಕ್ರಮದೊಂದಿಗೆ ಊಟಕ್ಕೆ ಬನ್ನಿ. ರಾಜಕೀಯ ಲಾಭಕ್ಕಾಗಿ ಬರಬೇಡಿ ಎಂದು ಅವರು ಕುಟುಕಿದರು.