'ಲೋಕಸಭಾ ಎಲೆಕ್ಷನ್‌ಗೂ ಮುನ್ನವೇ ರಾಮಮಂದಿರ ಶಂಕು ಸ್ಥಾಪನೆ'

By Web DeskFirst Published Nov 28, 2018, 6:31 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಮ ಮಂದಿರ ನಿರ್ಮಾಣದ ಕೂಗು ಹೆಚ್ಚುತ್ತಲೇ ಇದೆ. ಇನ್ನು ಈ ಬಗ್ಗೆ ವಿಜಯಪುರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಪ್ರತಿಕ್ರಿಯಿಸಿದ್ದು ಹೀಗೆ.

ವಿಜಯಪುರ, [ನ.28]: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲೇಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹೇರಲು ದೇಶಾದ್ಯಂತ ಹಲವು ಕಡೆಗಳಲ್ಲಿ ಜನಾಗ್ರಹ ಸಭೆಗಳು ನಡೆಯುತ್ತಿವೆ. 

ಅದರಲ್ಲೂ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಮ ಮಂದಿರ ನಿರ್ಮಾಣದ ಕೂಗು ಹೆಚ್ಚುತ್ತಲೇ ಇದೆ. 

ಇನ್ನು ಈ ಬಗ್ಗೆ ವಿಜಯಪುರದಲ್ಲಿ ಇಂದು [ಬುಧವಾರ] ಪ್ರತಿಕ್ರಿಯಿಸಿರುವ ವಿಜಯಪುರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್,  ರಾಮಮಂದಿರ ನಿರ್ಮಾಣ ಶತ ಸಿದ್ಧ. ಲೋಕಸಭಾ ಚುನಾವಣೆಗೂ ಮುನ್ನ ಶಂಕು ಸ್ಥಾಪನೆ. ನಂತರದಲ್ಲಿ ಉದ್ಘಾಟನೆಯಾಗಲಿದೆ ಎಂದು ಹೇಳಿದರು.

ಮೋದಿ, ಯೋಗಿ ತಲೆ ಕಡೆಯಲು ನಮ್ಮದೇನು ತಾಲಿಬಾನ ಅಲ್ಲ, ಎಐಎಂಐಎಂ ಅಧ್ಯಕ್ಷ ಪಾಕಿಸ್ತಾನಕ್ಕೆ ಹೋಗಲಿ ಎಂದು ಕಿಡಿಕಾರಿದರು.

 ಇದೇ ವೇಳೆ ರಾಜ್ಯ ಮೈತ್ರಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಅವರು, ಟಿಪ್ಪು ಸುಲ್ತಾನ್ ಜಯಂತಿ ಮಾಡುವಾಗ ಇಲ್ಲದ ಬರ ಈಗ ಸರ್ಕಾರಕ್ಕೆ ಬಂದಿದೆ. ನಾಡಿನ ಹೆಮ್ಮೆಯ ಹಂಪಿ ಉತ್ಸವವನ್ನು  ಸರ್ಕಾರಮಾಡಲೇಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಸರಕಾರ ಕೆಡವಬೇಕು, ಇಲ್ಲದಿದ್ದರೆ ದೇವೆಗೌಡ, ಕುಮಾರಸ್ವಾಮಿ ಸಿದ್ದರಾಮಯ್ಯನನ್ನು ಅಸ್ತಿತ್ವ ಇಲ್ಲದಂತೆ ಮಾಡುತ್ತಾರೆ ಎಂದರು.

click me!