ನಾನು ಯಾರ ಒತ್ತಡಕ್ಕೂ ಮಣಿಯಲ್ಲ; ಮತ್ತೆ ಗುಡುಗಿದ ಹೆಬ್ಬಾಳ್ಕರ್

By Web Desk  |  First Published Oct 28, 2018, 9:23 PM IST

ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಸ್ಥಾನದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೋಕ್ ನೀಡಲಾಗುತ್ತದೆ ಎಂಬ ಮಾತಿಗೆ ಲಕ್ಷ್ಮೀ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ..?


ಬಾಗಲಕೋಟೆ(ಅ.28)  ನಾನು ಯಾರ ಮತ್ತು ಯಾವ ಒತ್ತಡಕ್ಕೂ ಮಣಿಯುವ ಹೆಣ್ಣುಮಗಳಲ್ಲ. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ನನ್ನನ್ನು ತೆಗೆದರು ಎಂದು ಕರೆದರೆ ತಪ್ಪಾಗುತ್ತದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಮುಧೋಳದಲ್ಲಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್,  ನಾನು ಎಂಎಲ್ ಆದ ತಕ್ಷಣ ಅಧ್ಯಕ್ಷ ಸ್ಥಾನ ಬೇರೆಯವರಿಗೆ ಕೊಡಿ ಅಂತ ಪತ್ರ ಬರೆದಿದ್ದೆ. ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡ್ತೇನೆ. ಯಾರೇ ಪ್ರಭಾವಿ ವ್ಯಕ್ತಿಯ ಒತ್ತಡಕ್ಕೆ ಮಣಿಯುವಂತಹ ಹೆಣ್ಣು ಮಗಳು  ನಾನಲ್ಲ ಎಂದರು.

Tap to resize

Latest Videos

ನನ್ನ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಲು ಬೇರೆಯವರು ಒತ್ತಡ ಹೇರೋಕೆ ಏನು ಕಾರಣವೇ ಇಲ್ಲ. ಜಾರಕಿಹೊಳೆ ಸಹೋದರರ ಜೊತೆ ಭಿನ್ನಾಭಿಪ್ರಾಯ ಇಲ್ಲದೇ ಇರೋವಾಗಲೇ ನಾನು ಅಧ್ಯಕ್ಷ ಸ್ಥಾನ ಬೇರೆಯವರಿಗೆ ಕೊಡಿ ಅಂತ ಪತ್ರ ಕೊಟ್ಡಿದ್ದೆ. ನಾನು ಅಧ್ಯಕ್ಷೆಯಾದ ಮೇಲೆ ಸಾಕಷ್ಟು ಆ ಸ್ಥಾನಕ್ಕೆ ಅರ್ಹ ಆಗುವ 20 ಮಹಿಳೆಯರನ್ನು ಬೆಳೆಸಿದ್ದೇನೆ. ಅವರೆಲ್ಲರನ್ನೂ ನಾನೇ ಸಂದರ್ಶನಕ್ಕೆ ಕಳಿಸಿದ್ದೆ. ಅದರಲ್ಲಿ ಐವರು ಅಂತಿಮ ರೇಸ್ ನಲ್ಲಿ ಇದ್ದಾರೆ ಎಂದರು.

 

 

 

click me!