ವಕೀಲ ವೃತ್ತಿಯಲ್ಲಿ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿ. ಯಾವುದೇ ಪ್ರಕರಣವನ್ನು ಕಕ್ಷಿದಾರನಿಂದ ಪಡೆಯುವ ಮುನ್ನ ಸತ್ಯಾಸತ್ಯೇತೆಯನ್ನು ಪರಾಮರ್ಶೆ ಮಾಡುವ ಮೂಲಕ ನ್ಯಾಯವನ್ನು ಕೊಡಿಸುವಂತಾಗಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಕಿವಿಮಾತು ಹೇಳಿದರು.
ಕೋಲಾರ (ಸೆ.25): ವಕೀಲ ವೃತ್ತಿಯಲ್ಲಿ ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿ. ಯಾವುದೇ ಪ್ರಕರಣವನ್ನು ಕಕ್ಷಿದಾರನಿಂದ ಪಡೆಯುವ ಮುನ್ನ ಸತ್ಯಾಸತ್ಯೇತೆಯನ್ನು ಪರಾಮರ್ಶೆ ಮಾಡುವ ಮೂಲಕ ನ್ಯಾಯವನ್ನು ಕೊಡಿಸುವಂತಾಗಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಕಿವಿಮಾತು ಹೇಳಿದರು. ತಾಲೂಕಿನ ಅರಹಳ್ಳಿ ಕಾನೂನು ಕಾಲೇಜಿನ ವಾರ್ಷಿಕೋತ್ಸವ, ಶಿಕ್ಷಕರ ದಿನಾಚರಣೆ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಗೊಡುಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲರಿಗೂ ಕಾನೂನು ಅರಿವು ಅಗತ್ಯ: ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಕಾನೂನು ಅರಿವು ಮೂಡಿಸುವ ಮೂಲಕ ಮುಂದಿನ ಪೀಳಿಗೆಗೆ ದಾರಿ ದೀಪವಾಗಿ ಧರ್ಮದ ಹಾದಿಯಲ್ಲಿ ಸಾಗುವಂತಾಗ ಬೇಕು. ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸುವ ಮೂಲಕ ಕಕ್ಷಿದಾರನಿಗೆ ಹೊರೆಯಾಗದಂತೆ ಬಡವರ ಬಗ್ಗೆ ಕರುಣೆ ತೋರುವ ಮೂಲಕ ಕಾರ್ಯನಿರ್ವಹಿಸಬೇಕೆಂದು ಕಿವಿಮಾತು ತಿಳಿಸಿದರು.
undefined
ನ್ಯಾಯಾಧೀಶರಿಗೆ ಸಮಾಜದಲ್ಲಿ ದೇವರ ಸ್ಥಾನ ಮಾನಗಳು ಇದೆ. ಹಲವಾರು ಪ್ರಕರಣಗಳಲ್ಲಿ ಜಾಮೀನು ಪಡೆಯಲು ವಕೀಲರಿಗೆ ಹಣ ನೀಡಲು ಸಾಧ್ಯವಾಗದೆ ಕಾರಾಗೃಹ ಸೇರಿದ ಪ್ರಕರಣಗಳಿವೆ. ರಾಜ್ಯಾದ್ಯಂತ ಸರ್ವೆ ಮಾಡಿ ನ್ಯಾಯಯುತವಾಗಿರುವ ಬಡವರ್ಗದವರಿಗೆ ಮಾನವೀಯತೆ ತೋರುವ ಮೂಲಕ ಬೇಲ್ ದೊರಕಿಸಿ ನ್ಯಾಯ ಕೊಡಿಸಲು ಮುಂದಾಗಿ ಎಂದು ಸಲಹೆ ನೀಡಿದರು.
ಹಾಡಹಗಲೇ 43 ಲಕ್ಷ ನಗದು, 250 ಗ್ರಾಂ ಚಿನ್ನ ದೋಚಿ ಖತರ್ನಾಕ್ ಗ್ಯಾಂಗ್ ಪರಾರಿ!
ದಕ್ಷ ಅಧಿಕಾರಿಗಳಿಂದ ಸಂಸ್ಥೆಗೆ ಗೌರವ: ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ಈ ಹಿಂದೆ ಚುನಾವಣಾ ಆಯುಕ್ತರಾಗಿ ಶೇಷನ್ ನೇಮಕಗೊಂಡಾಗ ಚುನಾವಣಾ ಆಯೋಗದ ಪ್ರಾಮುಖ್ಯತೆ, ಅದರ ಅಧಿಕಾರ ಏನೆಂಬುದು ಜನತೆಗೆ ಅರ್ಥವಾಯಿತು. ಮುಳಬಾಗಿಲಿನ ವೆಂಕಟಾಚಲ ಲೋಕಯುಕ್ತರಾದ ಮೇಲೆ ಲೋಕಾಯುಕ್ತದ ಸಾಮರ್ಥ್ಯ ತಿಳಿಯುವಂತಾಯಿತು. ಬೈರಾರೆಡ್ಡಿ ಅಡ್ವೊಕೇಟ್ ಜನರಲ್ ಆಗಿ ಕಾರ್ಯನಿರ್ವಹಿಸಿದರು ಎಂದರು.
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಕೋಲಾರ ಜಿಲ್ಲೆಯು ವಕೀಲರ ಉತ್ಪಾದನ ಕೇಂದ್ರವಾಗಿದೆ. ಉಚ್ಚನ್ಯಾಯಾಲಯದಲ್ಲಿ ಜಿಲ್ಲೆಯ ಅನೇಕ ಮಹನೀಯರು ನ್ಯಾಯಾಮೂರ್ತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಒಬ್ಬ ಮುಖ್ಯ ಮಂತ್ರಿಗೆ ಜೈಲು ಶಿಕ್ಷೆ ನೀಡಿದ ನ್ಯಾಯಾಧೀಶ ಸುದೀಂದ್ರ ಕೋಲಾರ ಜಿಲ್ಲೆಯವರು ಆಗಿದ್ದಾರೆ. ಗೋಪಾಲಗೌಡ, ನಾಗಮೋಹನ್ ದಾಸ್, ವೀರಯ್ಯ, ಸುಬ್ಬರೆಡ್ಡಿ ಮುಂತಾದವರನ್ನು ನೆನಪಿಸಿದರು.
ವಕೀಲರು ಆಸೆಗೆ ಬಲಿಯಾಗಬಾರದು: ಕೋಲಾರದಲ್ಲಿ ಕಾನೂನು ಕಾಲೇಜು ಸೂಕ್ತವಾದ ಜಾಗದಲ್ಲಿ ಆಗದೆ ಇರುವ ಬಗ್ಗೆ ಅಸಮಾಧಾನವಿದೆ. ಕಾಲೇಜು ಯೋಜನಾ ಬದ್ದವಾಗಿ ರೂಪಿತಗೊಂಡಿಲ್ಲ, ಈ ಬಗ್ಗೆ ಕಾನೂನು ಮಂತ್ರಿಗಳ ಗಮನಕ್ಕೆ ತಂದಾಗ ಕೂಡಲೇ ಸ್ಪಂದಿಸಿದ ಸಚಿವರು ಅನೇಕ ಸಮಸ್ಯೆಗಳನ್ನು ಬಗೆಹರಿಸಿ ಕೊಟ್ಟಿದ್ದಾರೆ ಎಂದ ಅಋೂರು, ವಕೀಲರ ಬಳಿ ಒಳ್ಳೆಯ ಮತ್ತು ಕೆಟ್ಟವರು ಇಬ್ಬರು ಕಕ್ಷೀದಾರರು ಬರುತ್ತಾರೆ. ನೀವುಗಳು ಆಸೆ ಆಮಿಷಗಳಿಗೆ ಬಲಿಯಾಗದೆ ನ್ಯಾಯವನ್ನು ಎತ್ತಿ ಹಿಡಿಯಬೇಕು ಎಂದರು.
ಶಾಸಕ ಕೆ.ಶ್ರೀನಿವಾಸಗೌಡರು ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಮಂದಿ ನ್ಯಾಯಾಧೀಶರು ಇದ್ದು ಅವರ ಆದರ್ಶಗಳನ್ನು ಅಳವಡಿಸಿ ಕೊಳ್ಳುವ ಮೂಲಕ ಸಮಾಜ ಸೇವೆ ಸಲ್ಲಿಸಿ, ನ್ಯಾಯಾಯುತವಾದ ಪ್ರಕರಣಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಕಾನೂನು ಕಾಲೇಜಿಗೆ 4.5 ಎಕರೆ ಜಮೀನು ಮಂಜೂರು ಮಾಡಿಸಿದೆ, ಇದೇ ರೀತಿ ಕೋಲಾರ ಮಹಿಳಾ ಪದವಿ ಕಾಲೇಜನ್ನು ಕೆರೆಯಂಗಳದಲ್ಲಿ ಮಂಜೂರು ಮಾಡಿಸಿದೆ. ಈ ಕಾಲೇಜಿನಲ್ಲಿ 3.5 ಸಾವಿರಕ್ಕೂ ಹೆಚ್ಚು ಮಂದಿ ವ್ಯಾಸಂಗ ಮಾಡುತ್ತಿದ್ದಾರೆ ಎಂದರು.
Lumpy skin disease: ರಾಸುಗಳಿಗೆ ಚರ್ಮಗಂಟು ರೋಗ; ಆತಂಕದಲ್ಲಿ ರೈತರು
ಸಿಮೆಂಟ್‌ರಸ್ತೆ ಮಾಡಿಸುವ ಭರವಸೆ: ಇದೇ ಸಂದರ್ಭದಲ್ಲಿ ಶಾಸಕರ ಅನುದಾನದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಸಿಮೆಂಟ್ ರಸ್ತೆಯನ್ನು ಮಂಜೂರು ಮಾಡಿಸಿ ಕೊಡುವುದಾಗಿ ಭರವಸೆ ನೀಡಿದರು. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮಶಂಕರ್, ಪ್ರಾಂಶುಪಾಲೆ ಡಾ. ಅನಿತಾ, ಕಾಲೇಜಿನ ಹೆಚ್.ಓ.ಡಿ. ಪ್ರಸನ್ನಕುಮಾರಿ, ಅರಹಳ್ಳಿ ಗ್ರಾಪಂ ಅಧ್ಯಕ್ಷೆ ಉಷಾ, ಮುಖಂಡರಾದ ಆಶ್ವಥಪ್ಪ, ಅಪ್ಪಿನಾರಾಯಣಸ್ವಾಮಿ, ಇದ್ದರು.