ಮಂಗಳೂರು ಗೋಲಿಬಾರ್‌: ಸಾಕ್ಷ್ಯ, ಹೇಳಿಕೆ ನೀಡಲು ಅಂತಿಮ ಅವಕಾಶ

By Kannadaprabha NewsFirst Published Aug 8, 2020, 10:15 AM IST
Highlights

ಮಂಗಳೂರಿನಲ್ಲಿ ಕಳೆದ ವರ್ಷ ಡಿ. 19ರಂದು ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ನಡೆದ ಗೋಲಿಬಾರ್‌ನಲ್ಲಿ ಗುಂಡೇಟಿನಿಂದ ನೌಶಿನ್‌ ಹಾಗೂ ಜಲೀಲ್‌ ಕುದ್ರೋಳಿ ಎಂಬವರು ಮೃತಪಟ್ಟಿರುವ ಬಗ್ಗೆ ಮ್ಯಾಜಿಸ್ಟೀರಿಯಲ್‌ ವಿಚಾರಣೆ ನಡೆಯುತ್ತಿದ್ದು, ಈ ಕುರಿತು ಸಾಸ್ಕ್ಯ ಅಥವಾ ಹೇಳಿಕೆ ನೀಡಲು ಆಗಸ್ವ್‌ 11ರಂದು ಅಂತಿಮ ಅವಕಾಶ ನೀಡಲಾಗಿದೆ.

ಮಂಗಳೂರು(ಆ.08): ಮಂಗಳೂರಿನಲ್ಲಿ ಕಳೆದ ವರ್ಷ ಡಿ. 19ರಂದು ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ನಡೆದ ಗೋಲಿಬಾರ್‌ನಲ್ಲಿ ಗುಂಡೇಟಿನಿಂದ ನೌಶಿನ್‌ ಹಾಗೂ ಜಲೀಲ್‌ ಕುದ್ರೋಳಿ ಎಂಬವರು ಮೃತಪಟ್ಟಿರುವ ಬಗ್ಗೆ ಮ್ಯಾಜಿಸ್ಟೀರಿಯಲ್‌ ವಿಚಾರಣೆ ನಡೆಯುತ್ತಿದ್ದು, ಈ ಕುರಿತು ಸಾಸ್ಕ್ಯ ಅಥವಾ ಹೇಳಿಕೆ ನೀಡಲು ಆಗಸ್ವ್‌ 11ರಂದು ಅಂತಿಮ ಅವಕಾಶ ನೀಡಲಾಗಿದೆ.

ಮ್ಯಾಜಿಸ್ಟೀರಿಯಲ್‌ ತನಿಖೆಗೆ ಉಡುಪಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅವರನ್ನು ಸರ್ಕಾರ ನೇಮಕ ಮಾಡಿದ್ದು, ಈಗಾಗಲೆ ಹಲವು ಬಾರಿ ವಿಚಾರಣೆ, ಸಾಕ್ಷ್ಯ ಸಂಗ್ರಹ ಮಾಡಲಾಗಿದೆ. ಕೊರೋನಾ ಲಾಕ್‌ಡೌನ್‌ ಕಾರಣದಿಂದ ವಿಚಾರಣೆಗೆ ತೊಡಕಾಗಿತ್ತು. ಇದೀಗ ಅಂತಿಮ ಅವಕಾಶ ಘೋಷಿಸಲಾಗಿದೆ.

ಕರ್ನಾಟಕದ ಮತ್ತೋರ್ವ ಬಿಜೆಪಿ ಶಾಸಕನಿಗೆ ಕೊರೋನಾ ದೃಢ

ಅಂದಿನ ಈ ಘಟನೆ ಬಗ್ಗೆ ಮಾಹಿತಿಯುಳ್ಳ ಅಥವಾ ಈ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಯಾವುದೇ ವ್ಯಕ್ತಿಗಳು ಆ. 11ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮಂಗಳೂರಿನ ಮಿನಿ ವಿಧಾನ ಸೌಧದಲ್ಲಿರುವ ಸಹಾಯಕ ಆಯುಕ್ತರ ಕೋರ್ಟ್‌ ಹಾಲ್‌ನಲ್ಲಿ ಹಾಜರಾಗಿ ಸಾಕ್ಷ್ಯ ಅಥವಾ ಹೇಳಿಕೆಯನ್ನು ನೀಡಬಹುದು ಎಂದು ಉಡುಪಿ ಜಿಲ್ಲಾ ಡಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜಿ. ಜಗದೀಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!