ನಗರದ ಇಂದಿರಾನಗರ ಹಾಗೂ ಮಾರನಗೆರೆ ಬಡಾವಣೆ ಮಧ್ಯೆ ನಗರದ ರೈಲ್ವೆ ನಿಲ್ದಾಣದ ಎದುರೇ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಸ್ವತ್ತಾದ ಹದ್ದು ಹಿಡಿದ ಹಳ್ಳವನ್ನು ಒತ್ತುವರಿದಾರರಿಂದ ತುರ್ತಾಗಿ ತೆರವುಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಬಳಸಿಕೊಳ್ಳಲು ಮೀಸಲಿರಿಸಬೇಕೆಂದು ಒತ್ತಾಯಿಸಲಾಗಿದೆ
ತಿಪಟೂರು : ನಗರದ ಇಂದಿರಾನಗರ ಹಾಗೂ ಮಾರನಗೆರೆ ಬಡಾವಣೆ ಮಧ್ಯೆ ನಗರದ ರೈಲ್ವೆ ನಿಲ್ದಾಣದ ಎದುರೇ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಸ್ವತ್ತಾದ ಹದ್ದು ಹಿಡಿದ ಹಳ್ಳವನ್ನು ಒತ್ತುವರಿದಾರರಿಂದ ತುರ್ತಾಗಿ ತೆರವುಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಬಳಸಿಕೊಳ್ಳಲು ಮೀಸಲಿರಿಸಬೇಕೆಂದು ಮಾರನಗೆರೆ, ಇಂದಿರಾನಗರ ಬಡಾವಣೆಗಳ ನಿವಾಸಿಗಳ ಪರವಾಗಿ ನಗರಸಭಾ ಸದಸ್ಯರಾದ ಮಹೇಶ್‌ರವರು ನಗರಸಭೆ ಸೇರಿದಂತೆ ತಹಸೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳವರಿಗೆ ಖುದ್ದು ಮನವಿ ಪತ್ರ ನೀಡಿ ಒತ್ತಾಯಿಸಿದ್ದಾರೆ.
ಇಲ್ಲಿನ ಟೌನ್ ಸರ್ವೆ ನಂ. 355/1ಎ ಹಾಗೂ ಹಾಗೂ ಇಂದಿರಾನಗರ ಬಡಾವಣೆ(ವಾರ್ಡ್‌ನಂ.18)ಗೆ ಸೇರಿರುವ ಮಾರನಗೆರೆ ಸರ್ವೆ ನಂ. 11/2ರ ನಡುವೆ ಇರುವ ಅಂದಾಜು 2 ಎಕರೆ ಸರ್ಕಾರಿ ಜಾಗ ಹದ್ದು ಹಿಡಿದ ಹಳ್ಳವನ್ನು ಕೆಲ ಖಾಸಗಿಯವರು ಹಲವಾರು ವರ್ಷಗಳಿಂದ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಜಾಗ ನಗರದ ರೈಲ್ವೆ ನಿಲ್ದಾಣದ ಎದುರೇ ಇದ್ದು ಕೋಟ್ಯಂತರ ರುಪಾಯಿ ಬೆಲೆ ಬಾಳುತ್ತದೆ. ಈ ಒತ್ತುವರಿ ಬಗ್ಗೆ ಹಲವಾರು ವರ್ಷಗಳಿಂದ ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಹಾಗೂ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸುತ್ತಿದ್ದರೂ ಯಾರು ಸ್ಪಂದಿಸುತ್ತಿಲ್ಲ. ರಾಜಕಾಲುವೆ ಮತ್ತು ಸರ್ಕಾರಿ ಹಳ್ಳಗಳನ್ನು ಒತ್ತುವರಿದಾರರಿಂದ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಹೈಕೋರ್ಚ್ ಆದೇಶಗಳಿದ್ದರೂ ತಾಲೂಕು ಆಡಳಿತ ಮಾತ್ರ ನಿರ್ಲಕ್ಷ್ಯದಿಂದಿರುವುದು ನೋಡಿದರೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ಈ ಒತ್ತುವರಿ ಜಾಗವನ್ನು ಕೂಡಲೇ ಸರ್ಕಾರಿ ವಶಕ್ಕೆ ಪಡೆಯದಿದ್ದರೆ ಮಾರನಗೆರೆ, ಇಂದಿರಾ ನಗರ ನಿವಾಸಿಗಳು ಇತರೆ ಸಂಘ ಸಂಸ್ಥೆಗಳ ಜೊತೆ ಉಪವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಾಲೂಕು ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರಸಭೆ ಸದಸ್ಯರಾದ ಮಹೇಶ್‌ರವರು ಈಗಾಗಲೇ ನಮಗೆ ಈ ಒತ್ತುವರಿ ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ನೀಡಿರುವ ದೂರಿನ ಮೇರೆಗೆ ಫೆ.9ರ ಗುರುವಾರ ತಾಲೂಕು ಆಡಳಿತದ ವತಿಯಿಂದ ಸರ್ವೆ ನಡೆಸಿ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
- ಪವನ್ ಕುಮಾರ್ ತಹಸೀಲ್ದಾರ್, ತಿಪಟೂರು.
ರೈತರ ಭೂ ಒತ್ತುವರಿ - ಕೇಸ್ ಹಾಕಲ್ಲ
ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಭೂ ಒತ್ತುವರಿ ಕಾಯ್ದೆ, ಭೂ ಪರಿವರ್ತನಾ ಕಾಯ್ದೆಯ ನಿಯಮಗಳನ್ನು ಸಡಿಲಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನ ಭೀಮನಕೊಲ್ಲಿ ಮಹದೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಶನಿವಾರ ಆಯೋಜಿಸಿದ್ದ ‘ಹಳ್ಳಿ ಕಡೆ, ಜಿಲ್ಲಾಧಿಕಾರಿ ನಡೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೆಲವು ಕಡೆ ಒತ್ತುವರಿ ಆಗಿರುತ್ತದೆ. ಹೀಗಾಗಿ, ನಗರ ಪ್ರದೇಶ ಹೊರತುಪಡಿಸಿ ಉಳಿದ ಕಡೆ, ಅಂದರೆ ಪ್ರಮುಖವಾಗಿ ರೈತರ ಮೇಲೆ ಯಾವುದೇ ಭೂ ಒತ್ತುವರಿ ಪ್ರಕರಣ ದಾಖಲಿಸದಂತೆ ಸೂಚಿಸಲಾಗಿದೆ. ಇಲ್ಲವಾದರೆ ರೈತರು ಪೊಲೀಸ್ ಠಾಣೆ ಮತ್ತು ನ್ಯಾಯಾಲಯಕ್ಕೆ ಅಲೆಯಬೇಕಿತ್ತು. ಕೋಳಿ ಫಾರಂ ನಡೆಸಲು ಈ ಹಿಂದೆ ಭೂ ಪರಿವರ್ತನೆ ಮಾಡಿಸಿಕೊಳ್ಳಬೇಕಿತ್ತು. ಆದರೆ, ಈಗ ಭೂ ಪರಿವರ್ತನೆ ಬೇಡ. ಕೋಳಿ ಸಾಕಾಣಿಕೆಯನ್ನೂ ಈಗ ಕೃಷಿ ಎಂದೇ ಪರಿಗಣಿಸಲಾಗಿದೆ. ಜಮೀನಿನ ಖಾತೆ ಮಾಡಿಸಿಕೊಳ್ಳಲು ನೋಂದಣಿಯಾದ 7 ದಿನದೊಳಗೆ ಖಾತೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಆದೇಶಿಸಲಾಗಿದೆ. ಈ ಹಿಂದೆ ಇದಕ್ಕಾಗಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ಕಾಯಬೇಕಿತ್ತು ಎಂದು ಅವರು ಹೇಳಿದರು.
Mysuru : 22 ರಿಂದ ಸಿಎಂ ಮನೆ ಮುಂದೆ ನಿರಂತರ ಧರಣಿ
ಪ.ಜಾತಿ ಮತ್ತು ಪ.ಪಂಗಡದವರು ಮನೆ ಕಟ್ಟಲು ಮತ್ತು ಸರ್ಕಾರದಿಂದ ನೀಡಿದ ಜಮೀನು ಮಾರಲು ಸರ್ಕಾರದ ಅನುಮತಿ ಪಡೆಯಬೇಕಿತ್ತು. ಈಗ ಆ ನಿಯಮ ತೆಗೆದು ಹಾಕಲಾಗಿದೆ. ಮಾರಾಟ ಮಾಡಲು ಅವಕಾಶ ನೀಡದೆ, ಜಮೀನು ಭೂ ಪರಿವರ್ತನೆ ಮಾಡುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗೆ ನೀಡಲಾಗಿದೆ. ಇದರಿಂದ ಜಮೀನನ್ನು ಭೂ ಪರಿವರ್ತಿಸಿಕೊಂಡು ಮನೆ ನಿರ್ಮಿಸಿಕೊಳ್ಳಬಹುದು ಎಂದರು.
7 ದಿನದಲ್ಲಿಯೇ ಮಾಸಾಶನ:
ಸಾರ್ವಜನಿಕರಿಗೆ ಯಾವುದಾದರೂ ಮಾಸಾಶನ ಬೇಕಿದ್ದರೆ 7 ದಿನದಲ್ಲಿಯೇ ಸಿಗುತ್ತದೆ. ಅದಕ್ಕಾಗಿ ಅಲೆಯಬೇಕಾದ ಪರಿಸ್ಥಿತಿ ಇಲ್ಲ. ‘ಹಲೋ ಕಂದಾಯ ಸಚಿವರೆ’ ಎಂಬ ವಿನೂತನ ಯೋಜನೆ ಜಾರಿಗೊಂಡಿದೆ. ನೀವು ಕರೆ ಮಾಡಿದ 72 ಗಂಟೆಯಲ್ಲಿ ಹಿರಿಯ ನಾಗರಿಕರ ಮಾಸಾಶನ ಲಭಿಸುತ್ತದೆ ಎಂದರು.