ಬೆಂಗಳೂರು: ಇಂದಿನಿಂದ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ

Published : Aug 04, 2023, 01:30 AM IST
ಬೆಂಗಳೂರು: ಇಂದಿನಿಂದ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ

ಸಾರಾಂಶ

ಫಲಪುಷ್ಪ ಪ್ರದರ್ಶನದ ಅಂಗವಾಗಿ ಗಾಜಿನಮನೆಯ ಪ್ರವೇಶದಲ್ಲಿ ಇಂಡೋ ಅಮೇರಿಕನ್‌ ಹೈಬ್ರಿಡ್‌ ಸೀಡ್ಸ್‌ ಕಂಪನಿಯ ಹೂ ಜೋಡಣೆ ಮತ್ತು ಕೆಂಗಲ್‌ ಹನುಮಂತಯ್ಯ ಅವರ ಪುತ್ಥಳಿ. ಗಾಜಿನಮನೆಯ ಕೇಂದ್ರ ಭಾಗದಲ್ಲಿ 18 ಅಡಿ ಅಗಲ, 36 ಅಡಿ ಉದ್ದ ಮತ್ತು 18 ಅಡಿ ಎತ್ತರದ ವಿಧಾನಸೌಧದ ಪುಷ್ಪ ಮಾದರಿಯನ್ನು 3.60 ಲಕ್ಷ ಹೂವುಗಳಿಂದ ನಿರ್ಮಿಸಲಾಗಿದೆ. ಅದರ ಎದುರಿನಲ್ಲಿ 14 ಅಡಿ ಎತ್ತರದ ಕೆಂಗಲ್‌ ಪ್ರತಿಮೆ ಇರಲಿದೆ. ಅಲ್ಲದೇ ಕಣ್ಮನ ಸೆಳೆಯುವ ಅನೇಕ ಪುಷ್ಪ ಕಲಾಕೃತಿಗಳು ಜನರನ್ನು ಸೆಳೆಯಲಿವೆ.

ಬೆಂಗಳೂರು(ಆ.04):  ನಾಡಿನ ಶಕ್ತಿ ಕೇಂದ್ರ ವಿಧಾನಸೌಧದ ನಿರ್ಮಾತೃ ಕೆಂಗಲ್‌ ಹನುಮಂತಯ್ಯ ಅವರ ಸ್ಮರಣಾರ್ಥ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಲಾಲ್‌ಬಾಗ್‌ನಲ್ಲಿ ಆಗಸ್ಟ್‌ 4ರಿಂದ 15ರವರೆಗೆ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ತೋಟಗಾರಿಕೆ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ, ಶಾಸಕ ಉದಯ್‌ ಬಿ.ಗುರುಡಾಚಾರ್‌, ಸಂಸದ ತೇಜಸ್ವಿ ಸೂರ್ಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ತೋಟಗಾರಿಕೆ ಇಲಾಖೆ ಸರ್ಕಾರದ ಕಾರ್ಯದರ್ಶಿ ಕೆ.ಪಿ.ಮೋಹನ್‌ರಾಜ್‌ ಉಪಸ್ಥಿತರಿದ್ದರು.

Bengaluru: ಆ.4ರಿಂದ ಫಲಪುಷ್ಪ ಪ್ರದರ್ಶನ-2023: ಕೆಂಗಲ್‌ ಹನುಮಂತಯ್ಯ, ವಿಧಾನಸೌಧದ ಪರಿಕಲ್ಪನೆ

ಫಲಪುಷ್ಪ ಪ್ರದರ್ಶನದ ಅಂಗವಾಗಿ ಗಾಜಿನಮನೆಯ ಪ್ರವೇಶದಲ್ಲಿ ಇಂಡೋ ಅಮೇರಿಕನ್‌ ಹೈಬ್ರಿಡ್‌ ಸೀಡ್ಸ್‌ ಕಂಪನಿಯ ಹೂ ಜೋಡಣೆ ಮತ್ತು ಕೆಂಗಲ್‌ ಹನುಮಂತಯ್ಯ ಅವರ ಪುತ್ಥಳಿ. ಗಾಜಿನಮನೆಯ ಕೇಂದ್ರ ಭಾಗದಲ್ಲಿ 18 ಅಡಿ ಅಗಲ, 36 ಅಡಿ ಉದ್ದ ಮತ್ತು 18 ಅಡಿ ಎತ್ತರದ ವಿಧಾನಸೌಧದ ಪುಷ್ಪ ಮಾದರಿಯನ್ನು 3.60 ಲಕ್ಷ ಹೂವುಗಳಿಂದ ನಿರ್ಮಿಸಲಾಗಿದೆ. ಅದರ ಎದುರಿನಲ್ಲಿ 14 ಅಡಿ ಎತ್ತರದ ಕೆಂಗಲ್‌ ಪ್ರತಿಮೆ ಇರಲಿದೆ. ಅಲ್ಲದೇ ಕಣ್ಮನ ಸೆಳೆಯುವ ಅನೇಕ ಪುಷ್ಪ ಕಲಾಕೃತಿಗಳು ಜನರನ್ನು ಸೆಳೆಯಲಿವೆ.

ಆನ್‌ಲೈನ್‌ ಪೇಮೆಂಟ್‌ಗೆ ಅವಕಾಶ:

ಫಲಪುಷ್ಪ ಪ್ರದರ್ಶನಕ್ಕೆ ಬರುವ ಎಲ್ಲಾ ಪ್ರವಾಸಿಗರು ಯಾವುದೇ ಕೈಚೀಲಗಳನ್ನು ಅಥವಾ ತಿನ್ನುವ ಪದಾರ್ಥಗಳನ್ನು ಲಾಲ್‌ಬಾಗ್‌ನ ಒಳಗಡೆ ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಲಾಲ್‌ಬಾಗ್‌ನ ಎಲ್ಲಾ ದ್ವಾರಗಳಲ್ಲಿ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಮೆಷಿನ್‌ಗಳ ಮೂಲಕ ಆನ್‌ಲೈನ್‌ ಪೇಮೆಂಟ್‌, ಆನ್‌ಲೈನ್‌ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಹಾಗೂ ಕಾಶ್‌ಪೇ ಮೂಲಕ ಪ್ರವೇಶ ಟಿಕೆಟ್‌ಗಳನ್ನು ಕೊಳ್ಳಲು ಇದೇ ಪ್ರಥಮ ಬಾರಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರವೇಶ ಟಿಕೆಟ್‌ಗಳನ್ನು ಬೆಳಗ್ಗೆ 7ರಿಂದ ಸಂಜೆ 6.30ರವರೆಗೆ ನೀಡಲಾಗುವುದು. ಗಾಜಿನಮನೆ ಪ್ರವೇಶವು ರಾತ್ರಿ 7 ಗಂಟೆವರೆಗೆ ಮಾತ್ರ ಇರಲಿದೆ.

Bengaluru: ಫಲಪುಷ್ಪ ಪ್ರದರ್ಶನಕ್ಕೆ 3.30 ಲಕ್ಷ ಪ್ರೇಕ್ಷಕರ ಭೇಟಿ ದಾಖಲೆ!

ವಾಹನ ನಿಲುಗಡೆ ವ್ಯವಸ್ಥೆ:

ಟ್ರಾಫಿಕ್‌ ಸಮಸ್ಯೆ ತಪ್ಪಿಸುವ ಸಲುವಾಗಿ ಸರ್ವರೂ ಆದಷ್ಟುಮೆಟ್ರೋ ರೈಲು ಮತ್ತು ಬಿಎಂಟಿಸಿ ಸೇವೆ ಬಳಸಲು ಕೋರಲಾಗಿದೆ. ಫಲಪುಷ್ಪ ಪ್ರದರ್ಶನಕ್ಕೆ ವಾಹನದಲ್ಲಿ ಆಗಮಿಸುವ ವೀಕ್ಷಕರು ಜೋಡಿ ರಸ್ತೆಯ ಶಾಂತಿ ನಿಲ್ದಾಣದ ಬಳಿ ಇರುವ ಬಹುಮಹಡಿ ಪಾರ್ಕಿಂಗ್‌ ಪ್ರದೇಶ, ಹಾಪ್‌ಕಾಮ್ಸ್‌ ಆವರಣ ಹಾಗೂ ಜೆ.ಸಿ.ರಸ್ತೆಯಲ್ಲಿ ಬಿಬಿಎಂಪಿಯ ಬಹುಮಹಡಿ ಪಾರ್ಕಿಂಗ್‌ ಪ್ರದೇಶದಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದು. ದ್ವಿಚಕ್ರ ವಾಹನಗಳನ್ನು ಲಾಲ್‌ಬಾಗ್‌ ಮುಖ್ಯದ್ವಾರದ ಬಳಿ ಇರುವ ಆಲ್‌ಅಮೀನ್‌ ಕಾಲೇಜ್‌ ಆವರಣದ ನಿಲ್ದಾಣ ಉಪಯೋಗಿಸಿಕೊಳ್ಳಬಹುದು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‌ ಅವರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಉಚಿತ ಪ್ರವೇಶ

ವಿದ್ಯಾರ್ಥಿಗಳು ಶಾಲಾ ಸಮವಸ್ತ್ರದಲ್ಲಿ ಆಗಮಿಸಿದರೆ ಅವರಿಗೆ ಉಚಿತವಾಗಿ ಫಲಪುಷ್ಪ ಪ್ರದರ್ಶನಕ್ಕೆ ಪ್ರವೇಶ ದೊರೆಯಲಿದೆ. ರಜಾ ದಿನಗಳನ್ನು ಹೊರತು ಪಡಿಸಿ ಉಳಿದ ದಿನಗಳಲ್ಲಿ ವಯಸ್ಕರಿಗೆ 70 ರು.ಗಳು ಮತ್ತು ಮಕ್ಕಳಿಗೆ 30 ರು.ಗಳು ಟಿಕೆಟ್‌ ಶುಲ್ಕ ಇರಲಿದೆ. ರಜಾ ದಿನಗಳಲ್ಲಿ ವಯಸ್ಕರಿಗೆ ತಲಾ 80 ರು.ಗಳು, ಮಕ್ಕಳಿಗೆ 30 ರು. ಟಿಕೆಟ್‌ ಶುಲ್ಕ ನಿಗದಿ ಮಾಡಲಾಗಿದೆ.

PREV
Read more Articles on
click me!

Recommended Stories

ಬಸವತತ್ವ ಪ್ರಚಾರಕ, ವಚನ ಶಿಲಾ ಮಂಟಪದ ರೂವಾರಿ ಚನ್ನಬಸವ ಶ್ರೀಗಳು ಲಿಂಗೈಕ್ಯ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!