ವಿವಾಹ ನಿಶ್ಚಯವಾಗಿದ್ದ ಯುವತಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಹರಿಯಬಿಟ್ಟಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನ ನಡೆಸಿದ ಘಟನೆ ತಾಲೂಕಿನ ಕಬ್ಬಾರೆ ಗ್ರಾಮದಲ್ಲಿ ಗುರುವಾರ ಸಂಜೆ ಜರುಗಿದೆ.
ಮಂಡ್ಯ(ಮೇ 16): ವಿವಾಹ ನಿಶ್ಚಯವಾಗಿದ್ದ ಯುವತಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಟೋಗಳನ್ನು ಹರಿಯಬಿಟ್ಟಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಯತ್ನ ನಡೆಸಿದ ಘಟನೆ ತಾಲೂಕಿನ ಕಬ್ಬಾರೆ ಗ್ರಾಮದಲ್ಲಿ ಗುರುವಾರ ಸಂಜೆ ಜರುಗಿದೆ.
ಮದ್ದೂರು ಗ್ರಾಮದ ತಿಮ್ಮಯ್ಯನವವರ ಪುತ್ರಿ ಗೀತಾ (22) ಆತ್ಮಹತ್ಯೆಗೆ ಯತ್ನಿಸಿದಳು. ಪ್ರಕರಣ ಕುರಿತಂತೆ ಪೊಲೀಸರು ಕಬ್ಬಾರೆ ಗ್ರಾಮದ ಕೆ.ಸಿ.ರಾಜು, ಸಚ್ಚಿನ್, ಕೆ.ಪಿ. ಮುತ್ತುರಾಜ ಹಾಗೂ ರಾಮಲಿಂಗಯ್ಯ ವಿರುದ್ಧ ಐಪಿಸಿ 509, 114, 34 ಹಾಗೂ ಕಲಂ 66ರ ಅನ್ವಯ ಪ್ರಕರಣ ದಾಖಲು ಮಾಡಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
undefined
ಹಿಂದು ಎಂದು ಹೇಳಿ ಮುಸ್ಲಿಂ ಯುವಕನಿಂದ ವಂಚನೆ: ಮೋಸದ ಬಲೆಗೆ ಬಿದ್ದ ಯುವತಿ
ಮದ್ದೂರು ತಾಲೂಕು ಡಿ. ಹೊಸೂರು ಗ್ರಾಮದ ಹೀರೇಶ್‌ನೊಂದಿಗೆ ಮೇ 4ರಂದು ಗೀತಾಳ ವಿವಾಹ ನಿಶ್ಚಿತಾರ್ಥವಾಗಿ ಮೇ 18ರಂದು ಮದುವೆ ನಿಗದಿಯಾಗಿತ್ತು. ಆರೋಪಿಗಳಾದ ಕೆ.ಸಿ. ರಾಜು, ಸಚ್ಚಿನ್ ಗೀತಾ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಕೆ.ಸಿ. ರಾಜು ಮತ್ತು ಗೀತಾ ಇದ್ದ ಪೋಟೋಗಳನ್ನು ಹರಿಯಬಿಟ್ಟರು. ಇದು ವಿವಾಹ ನಿಶ್ಚಯವಾಗಿದ್ದ ಹೀರೇಶ್ ಕುಟುಂಬದವರ ಗಮನಕ್ಕೆ ಬಂದಿದೆ.
ನಂತರ ಕುಟುಂಬದವರು ಗೀತಾ ಮನೆಗೆ ಆಗಮಿಸಿ ನಿಮ್ಮ ಹುಡುಗಿಗೆ ಬೇರೊಂದು ಯುವಕನೊಂದಿಗೆ ಪ್ರೇಮ ಸಂಬಂಧವಿದೆ. ಗೀತಾಳೊಂದಿಗೆ ವಿವಾಹ ಸಾಧ್ಯವಿಲ್ಲ ಎಂದು ತಿಳಿಸಿ, ನಿಶ್ಚಿತಾರ್ಥ ವೇಳೆ ಬಟ್ಟೆಖರೀದಿಗೆ ನೀಡಿದ್ದ . 10,000 ವಾಪಸ್ ನೀಡಿ ತೆರಳಿದ್ದಾರೆ. ಘಟನೆಯಿಂದಾಗಿ ಮನನೊಂದ ಗೀತಾ ತನ್ನ ಮನೆಯ ಕೊಠಡಿಯೊಂದರಲ್ಲಿ ಗುರುವಾರ ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಲಾಕ್‌ಡೌನ್: 'ಅನಾವಶ್ಯಕವಾಗಿ ಮನೆ ಬಿಟ್ಟು ಹೊರ ಬಂದರೆ ಕಠಿಣ ಕ್ರಮ'
ಇದನ್ನು ಕಂಡ ಆಕೆಯ ಸಹೋದರ ಗಿರೀಶ್ ರಕ್ಷಣೆ ಮಾಡಿ ಮದ್ದೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ನಂತರ ವೈದ್ಯರ ಸಲಹೆ ಮೇರೆಗೆ ಬೆಂಗಳೂರಿಗೆ ರವಾನಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.