ಬಳ್ಳಾರಿ ಜೈಲಲ್ಲೂ ದರ್ಶನ್ ಗೆ ನಾರಿ ಕಂಟಕ: ಕಿಲ್ಲಿಂಗ್‌ ಸ್ಟಾರ್‌ ಮೇಲೆ ಹದ್ದಿನ ಕಣ್ಣಿಟ್ಟ ಲೇಡಿ ಅಧಿಕಾರಿಗಳು..!

By Girish Goudar  |  First Published Sep 3, 2024, 7:07 PM IST

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಕೇಂದ್ರ ಕಾರಾಗೃಹದ ಅಧೀಕ್ಷಕಿ ಲತಾ. ಪರೀಕ್ಷಾರ್ತಿ ಸಹಾಯಕಿ ಅಧೀಕ್ಷಕಿ ಉಮ್ಮಿ ತಸ್ಮೀಯಾ ದರ್ಶನ್ ಭದ್ರತೆ ಜವಾಬ್ದಾರಿಯನ್ನ ಹೊತ್ತಿದ್ದಾರೆ.


ಬಳ್ಳಾರಿ(ಸೆ.03): ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಎಡವಟ್ಟು ಮಾಡಿಕೊಂಡ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಪರಿಸ್ಥಿತಿ ಬಳ್ಳಾರಿ ಜೈಲಿನಲ್ಲಿ ಭಾರೀ ಇಕ್ಕಟ್ಟಾಗಿದೆ. ಹೌದು, ಈ ಬಾರಿ ದರ್ಶನ್ ಮೇಲೆ ನಿಗಾ ಇಟ್ಟಿರೋದು ಇಬ್ಬರು ಕಟ್ಟು ನಿಟ್ಟಿನ ಮಹಿಳಾ ಅಧಿಕಾರಿ ಅನ್ನೋದು ವಿಶೇಷ. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಕೇಂದ್ರ ಕಾರಾಗೃಹದ ಅಧೀಕ್ಷಕಿ ಲತಾ. ಪರೀಕ್ಷಾರ್ತಿ ಸಹಾಯಕಿ ಅಧೀಕ್ಷಕಿ ಉಮ್ಮಿ ತಸ್ಮೀಯಾ ದರ್ಶನ್ ಭದ್ರತೆ ಜವಾಬ್ದಾರಿಯನ್ನ ಹೊತ್ತಿದ್ದಾರೆ. ಬಳ್ಳಾರಿ ಜೈಲಿಗೆ ನಟ ದರ್ಶನ್‌ ಸ್ಥಳಾಂತರವಾಗುತ್ತಿದ್ದಂತೆ ಜೈಲಿನ ಸಂಪೂರ್ಣ ಭದ್ರತೆ, ನಿಗಾ, ನಿರ್ವಹಣೆ ಜವಾಬ್ದಾರಿ ಹೊತ್ತಿರೋದು ಮಹಿಳಾ ಅಧಿಕಾರಿಗಳೇ. ಮಹಿಳಾ ಅಧಿಕಾರಿಗಳೇ ಅಚ್ಚು ಕಟ್ಟಾಗಿ ಕ್ರಮ ಕೈಗೊಳ್ಳುವ ಮೂಲಕ ಸರ್ಕಾರದ ಮತ್ತು ಮೇಲಧಿಕಾರಿಗಳ ಗಮನ ಸೆಳೆದಿದ್ದಾರೆ. ಮತ್ತೊಂದು ವಿಶೇಷವೆಂದರೆ ಕಾರಾಗೃಹ ಇಲಾಖೆ ಡಿಜಿಪಿ ಮಾಲಿನಿ ಕೃಷ್ಣ ಮೂರ್ತಿ ಕೂಡ ಮಹಿಳಾ ಅಧಿಕಾರಿಯಾಗಿದ್ದಾರೆ.

Tap to resize

Latest Videos

ಕಮೋಡ್ ಕೊಳ್ಳಲೂ ದರ್ಶನ್ ಟ್ರೆಂಡ್ ಸೆಟ್, ಸೋಷಿಯಲ್ ಮೀಡಿಯಾದಲ್ಲಿ ಇದರದ್ದೇ ಹವಾ!

ರಾಜ್ಯ ಮಟ್ಟದಿಂದ ಜಿಲ್ಲಾಮಟ್ಟದವರೆಗೆ ಕಾರಾಗೃಹಕ್ಕೆ ಸಂಬಂಧಿಸಿದಂತೆ ಪ್ರಮುಖ ಹುದ್ದೆಗಳಲ್ಲಿರುವ ಸ್ತ್ರೀ ಶಕ್ತಿ ತನ್ನ ಪವರ್ ತೋರಿಸಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದ ಕಾರಾಗೃಹದ ಕಹಿನೆನಪು ಮಾಸುವಂತೆ ಇಲ್ಲಿನ ಮಹಿಳಾ ಅಧಿಕಾರಿಗಳು ಮೈಯೆಲ್ಲ ಕಣ್ಣಾಗಿ ಕರ್ತವ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲಾ ಅಂಶಗಳಿಂದಾಗಿ ರಾಜ್ಯ ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ನಿಟ್ಟುಸಿರು ಬಿಡುವಂತಾಗಿದೆ. 

click me!