ಅತ್ತ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ; ಇತ್ತ ಸಪ್ತಭಜನೆ ಸುರಿವುದೇ ಮಳೆ?

By Kannadaprabha News  |  First Published Jul 2, 2023, 11:52 AM IST

ಜಿಲ್ಲಾ ಹಜರತ್‌ ಟಿಪ್ಪು ಸುಲ್ತಾನ್‌ ಅಭಿಮಾನಿಗಳ ಮಹಾವೇದಿಕೆಯಿಂದ ನಗರದ ಬಡಮಕಾನ್‌ ಮಸೀದಿಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.


ಚಿಕ್ಕಮಗಳೂರು (ಜು.2): ಜಿಲ್ಲಾ ಹಜರತ್‌ ಟಿಪ್ಪು ಸುಲ್ತಾನ್‌ ಅಭಿಮಾನಿಗಳ ಮಹಾವೇದಿಕೆಯಿಂದ ನಗರದ ಬಡಮಕಾನ್‌ ಮಸೀದಿಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಜಂಶೀದ್‌ಖಾನ್‌ ಮಾತನಾಡಿ, ಜನ, ಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ರೈತರು ಭೂಮಿಯನ್ನು ಬಿತ್ತಿ ಬೆಳೆ ಬೆಳೆಯಲು ಅನುಕೂಲ ವಾಗುವಂತೆ ಕಾಲ ಕಾಲಕ್ಕೆ ಮಳೆ ಸುರಿಸುವಂತೆ ಪ್ರಾರ್ಥನೆ ಸಲ್ಲಿಸಿದರು. ಮಾನವನಿಗೆ ದೇವರ ನಡುವೆ ಸಂಬಂಧಗಳು ಇದ್ದರೂ ಅದಕ್ಕೆ ಪ್ರತಿಯಾಗಿ ಜೀವಿಗಳಿಗೆ ಅದ್ಬುತ ಕಾರ್ಯಗಳನ್ನು ದೇವನು ಕರುಣಿಸುವನು. ಎಲ್ಲರೊಂದಿಗೂ ಒಳ್ಳೆತನ ಪ್ರದರ್ಶಿಸಿದರೆ ಮಾತ್ರ ಜೀವ ಜಂತುಗಳು ಹಾಗೂ ಹಸಿರಿನ ಪ್ರಕೃತಿ ಸಂಪತ್ತು ಉಳಿಸಬಹುದು ಎಂದರು.

Tap to resize

Latest Videos

undefined

ಕಾವೇರಿ ಒಡಲು ಭರ್ತಿಗೆ ದೇವರ ಮೊರೆ ಹೋದ ನಿಗಮ: ಮಳೆಗಾಗಿ ಕೆಆರ್‌ಎಸ್‌ನಲ್ಲಿ ವಿಶೇಷ ಪೂಜೆ

ಈ ಸಂದರ್ಭದಲ್ಲಿ ವೇದಿಕೆ ಮುಖಂಡರಾದ ತನ್ವೀರ್‌ಪಾಷ, ಜುನೇದ್‌ ಆಫೀಸ್‌, ಜಾವೀದ್‌, ರಾಘವೇಂದ್ರ, ಪ್ರಸಾದ್‌ ಹಾಜರಿದ್ದರು.

ಮಳೆಗಾಗಿ ಪ್ರಾರ್ಥಿಸಿ ಸಪ್ತ ಭಜನೆ ಆರಂಭ

ಕನಕಗಿರಿ ಮಳೆಗಾಗಿ ಪ್ರಾರ್ಥಿಸಿ ಪಟ್ಟಣದ ತೊಂಡಿತೇವರಪ್ಪ ದೇವಸ್ಥಾನದಲ್ಲಿ ರೈತರು ಸಪ್ತ ಭಜನೆ ಹಮ್ಮಿಕೊಂಡಿದ್ದಾರೆ.

ಮಳೆಯಾಗದೇ ಇರುವ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರು ದೇವರ ಮೊರೆ ಹೋಗುವುದು, ಸಪ್ತ ಭಜನೆ ಹಮ್ಮಿಕೊಳ್ಳುವುದು ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮ ನಡೆಸುವುದು ಮೊದಲಿನಿಂದಲೂ ರೂಢಿಯಲ್ಲಿದೆ. ಅದರಂತೆ ಪಟ್ಟಣದ ರೈತರು ಮಳೆ ಬರಲೆಂದು ಬೇಡಿಕೊಂಡು ಏಳು ದಿನ ಹಗಲು-ರಾತ್ರಿ ನಿರಂತರ ಶಿವನಾಮ ಸ್ಮರಣೆ ಮಾಡಲಾರಂಭಿಸಿದ್ದಾರೆ.

ಈ ಹಿಂದೆ ಐದಾರು ವರ್ಷಗಳ ಹಿಂದೆ ಮಳೆಯಾಗದಿದ್ದಾಗ ಇದೇ ಸ್ಥಳದಲ್ಲಿ ಸಪ್ತ ಭಜನೆ ಹಮ್ಮಿಕೊಳ್ಳಲಾಗಿತ್ತು.ಮುಕ್ತಾಯದ ದಿನ ನಿರಂತರ ಎರಡು ತಾಸಿಗೂ ಹೆಚ್ಚು ಸಂಪೂರ್ಣ ಮಳೆಯಾಗಿ ರೈತನ ಮೊಗದಲ್ಲಿ ಮಂದಹಾಸ ಮೂಡಿಸಿತ್ತು.ಅದರಂತೆ ಈ ವರ್ಷವೂ ಸಹ ಮಳೆ ಕೈ ಕೊಟ್ಟಪರಿಣಾಮ ಮನುಷ್ಯನಿಗೆ ಕುಡಿಯಲು ನೀರಿನ ಅಭಾವವಾಗಿದ್ದು,ಜಾನುವಾರುಗಳಿಗೆ ಮೇವಿನ ಕೊರತೆಯಾಗಿದೆ. ಬೇಸಿಗೆಗೂ ಮೀರಿಸಿದ ಬರಗಾಲ ಮಳೆಗಾಲದಲ್ಲಿ ಉಂಟಾಗಿದ್ದು, ರೈತರನ್ನು ಕಂಗಾಲಾಗಿಸಿದೆ.

ಕಳೆದ ವರ್ಷ ಅತಿವೃಷ್ಟಿಯಿಂದ ಮಳೆಯಾಶ್ರಿತ ಪ್ರದೇಶದ ರೈತರು ಲಕ್ಷಾಂತರ ನಷ್ಟಅನುಭವಿಸಿದ್ದಾರೆ. ಈ ಬಾರಿ ಮಳೆಯಾಗದೆ ಜನ-ಜಾನುವಾರುಗಳಿಗೆ ನೀರು, ಮೇವಿಗೆ ಪರಿತಪ್ಪಿಸುವಂತಾಗಿದೆ. ನಾವು ಎಲ್ಲದಕ್ಕೂ ಸರ್ಕಾರ ಕಾರಣ ಎನ್ನುವುದು ತಪ್ಪು. ಸರ್ಕಾರ ಮಳೆ ತರಿಸಲು ಸಾಧ್ಯವೇ? ಹಾಗಂತ ನಾವು ಸರ್ಕಾರಕ್ಕೆ ಕೇಳಲು ಹೋದರೆ ಸಮಜಾಯಿಸಿ ನೀಡುತ್ತಾರಷ್ಟೆ. ಅದಕ್ಕಾಗಿ ನಾವು ಶಿವನ ಮೇಲಿನ ನಂಬಿಕೆ ಇಟ್ಟಿದ್ದು,ಏಳು ದಿನಗಳ ಕಾಲ ಆತನನ್ನು ಸ್ಮರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇವೆ.ರೈತರು, ಕಾರ್ಮಿಕರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ರೈತ ಸುರೇಶರೆಡ್ಡಿ ಮಹಲಿನಮನಿ ತಿಳಿಸಿದರು.

Lack of rain: ಮಳೆಗಾಗಿ ಕತ್ತೆಗಳಿಗೆ ಮದುವೆ ಮಾಡಿಸಿದ ಹರಪನಹಳ್ಳಿ ಗ್ರಾಮಸ್ಥರು!

ಈ ಸಂದರ್ಭದಲ್ಲಿ ಕಂಠೆಪ್ಪ ಪೂಜಾರ, ರಾಮಣ್ಣ ಅರ್ಚಕ್‌, ಗುಂಡಪ್ಪ ಚಿತ್ರಗಾರ, ಗೋಪಾಲರೆಡ್ಡಿ ಮಹಲಿನಮನಿ,ಬಸವರಾಜ ದೇಸಾಯಿ, ಶ್ರೀನಿವಾಸರೆಡ್ಡಿ ಓಣಿಮನಿ,ಕೃಷ್ಣಾಚಾರ್‌, ಚನ್ನಬಸವ ಮೇಸ್ತ್ರಿ, ಪರಸಪ್ಪ ಪಾಲಿ ಸೇರಿದಂತೆ ಇತರರು ಇದ್ದರು.

click me!