ಶೋಕಿಗಾಗಿ ನಾಯಿ ಸಾಕಿ ಹಿಂಸೆ ಕೊಟ್ಟ ಬೆಂಗ್ಳೂರು ಮಾಲೀಕನ ಮೇಲೆ ಕೇಸ್

By Web DeskFirst Published Aug 28, 2019, 4:35 PM IST
Highlights

ಶೋಕಿಗಾಗಿ ನಾಯಿ ಸಾಕಿ ಹಿಂಸೆ ಕೊಟ್ರೆ ಬೀಳುತ್ತೆ ಕೇಸ್/ ನಿಮ್ಮ ಸುತ್ತಲೇ ಪ್ರಾಣಿ ಸಂರಕ್ಷಕರು ಇದ್ದಾರೆ ಎಚ್ಚರ/  ನಾಯಿ ಸಾಕಿ ಹಿಂಸೆ ಕೊಟ್ಟ ಬೆಂಗಳೂರು ಮಾಲೀಕನ ಮೇಲೆ ಪ್ರಕರಣ ದಾಖಲು

ಬೆಂಗಳೂರು[ಆ. 28]  ಮನೆಯಲ್ಲಿ ನಾಯಿ ಸಾಕುವವರೇ ಎಚ್ಚರ ಎಂದು ಹೇಳಲೇಬೇಕಾಗಿದೆ.  ಶೋಕಿಗಾಗಿ ಮನೆಯಲ್ಲಿ ಸಾಕಿದ ನಾಯಿಗೆ ಹಿಂಸೆ ಕೊಟ್ಟರೆ ಪ್ರಕರಣ ಎದುರಿಸಬೇಕಾಗುತ್ತದೆ. ನಿಮ್ಮ ಮನೆಯ ಸುತ್ತಮುತ್ತಲೇ ಇರುವ ಕಾರ್ಯಕರ್ತರು ಎಲ್ಲವನ್ನು ಗಮನಿಸುತ್ತ ಇರುತ್ತಾರೆ. 

ಕೋರಮಂಗಲದ ನಿವಾಸಿ ಲ್ಯಾಬ್ರಡಾರ್ ಬ್ರೀಡ್ ನಾಯಿಯನ್ನು ಶೋಕಿಗೆ ಸಾಕಿದ್ದ. ಆ ನಾಯಿಗೆ ಸರಿಯಾಗಿ ಊಟ ಹಾಕದೆ, ಅದರ ಮಲಮೂತ್ರವನ್ನು ಶುಚಿಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದ ಎನ್ನಲಾಗಿದೆ. ಮಳೆಯಲ್ಲಿ ನೆನೆಯುವಂತೆ ಮಾಡಿ, ನಾಯಿ ಅನಾರೋಗ್ಯಕ್ಕೆ ತುತ್ತಾಗಲು ಮಾಲೀಕ ಕಾರಣವಾಗಿದ್ದ ಎಂಬ ಆರೋಪವೂ ಬಂದಿದೆ.

ನೀವು ಸಾಕೋ ನಾಯಿ ಬಗ್ಗೆ ನಿಮಗೆಷ್ಟು ಗೊತ್ತು...

ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಸಾಕು ನಾಯಿ ಮಾಲೀಕ ವಿರುದ್ಧ ದೂರು ದಾಖಲಾಗಿದೆ. ವನ್ಯಜೀವಿ ಸಂರಕ್ಷಕ ಕಿರಣ್ ದೂರು ನೀಡಿದ್ದಾರೆ. ಮಾಲೀಕನ ವಿರುದ್ಧ ಅನಿಮಲ್ ಕ್ರ್ಯೂಯಾಲಿಟಿ ಆಕ್ಟ್ ಅಡಿಯಲ್ಲಿ ದೂರು ದಾಖಲಿಸಲಾಗಿದೆ.

ಮಾಲೀಕನ‌ ಮನೆಯ ಗೇಟ್ ಬಳಿಯ ಮಳೆಯಲ್ಲಿ ನೆನೆಯುತ್ತಿದ್ದ ನಾಯಿ ವಿಡಿಯೋ ಚಿತ್ರೀಕರಣ ‌ಮಾಡಿದ್ದ ಸ್ಥಳೀಯರು ಅದನ್ನು ವನ್ಯಜೀವಿ ಸಂರಕ್ಷಕರ ಗಮನಕ್ಕೆ ತಂದಿದ್ದದ್ದರು. ನಾಯಿಯನ್ನು ಮಾಲೀಕನಿಂದ ಸಂರಕ್ಷಸಿ ಆಶ್ರಯ ನೀಡಲಾಗಿದೆ.

click me!