ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಾಳಸಂಗಿ ಗ್ರಾಮದ ಬಳಿ ನಡೆದ ದುರ್ಘಟನೆ| ಇಂಡಿ ತಾಲೂಕಿನ ಖೇಡಗಿ ಗ್ರಾಮದಲ್ಲಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಕರ್ತವ್ಯ ರ್ನಿಹಿಸುತ್ತಿದ್ದ ಮೃತರು| ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು|
ಇಂಡಿ(ಮಾ.21): ಬಸ್ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೆವಿಜಿ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಕ್ಯಾಶಿಯರ್ ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಾಳಸಂಗಿ ಗ್ರಾಮದ ಲಾಳಸಂಗಿ-ಖೇಡಗಿ ಕ್ರಾಸ್ ಬಳಿ ಶನಿವಾರ ನಡೆದಿದೆ.
ಬಸವನಬಾಗೇವಾಡಿ ತಾಲೂಕಿನ ಎಂಬತ್ನಾಳ ಗ್ರಾಮದ ಡಿ.ಎಸ್. ಬಿರಾದಾರ (59), ಆಂಧ್ರ ಮೂಲದ ಚೈತನ್ಯಕುಮಾರ (32) ಮೃತಪಟ್ಟ ದುರ್ದೈವಿಗಳು. ಇವರಿಬ್ಬರೂ ಇಂಡಿ ತಾಲೂಕಿನ ಖೇಡಗಿ ಗ್ರಾಮದಲ್ಲಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಕರ್ತವ್ಯ ರ್ನಿಹಿಸುತ್ತಿದ್ದರು. ಡಿ.ಎಸ್.ಬಿರಾದಾರ ವ್ಯವಸ್ಥಾಪಕರಾಗಿ, ಚೈತನ್ಯಕುಮಾರ ಕ್ಯಾಶಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ವಿಜಯಪುರ: ಲಾರಿ- ಟವೇರಾ ವಾಹನ ಮಧ್ಯೆ ಅಪಘಾತ, ಇಬ್ಬರು ಕ್ರೀಡಾಪಟುಗಳ ದುರ್ಮರಣ
ಹೀಗಾಗಿ ಇಂಡಿ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ನಿತ್ಯ ಇಂಡಿಯಿಂದ ಖೇಡಗಿ ಬ್ಯಾಂಕಿಗೆ ಬೈಕ್ ಮೇಲೆ ಹೋಗುತ್ತಿದ್ದರು. ಶನಿವಾರ ಇಂಡಿಯಿಂದ ಖೇಡಗಿಗೆ ಬೈಕ್ ಮೇಲೆ ಹೋಗುತ್ತಿದ್ದಾಗ ಲಾಳಸಂಗಿ-ಖೇಡಗಿ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.