ಕುವೆಂಪು ಮಾರ್ಗದರ್ಶನ ಸಾರ್ವಕಾಲಿಕ

By Kannadaprabha News  |  First Published Dec 30, 2022, 5:52 AM IST

ಕುವೆಂಪು ಅವರು ಮಾನವ ಕುಲಕ್ಕೆ ನೀಡಿದ ಮಾರ್ಗದರ್ಶನ ಆದರ್ಶಗಳು ಸಾರ್ವಕಾಲಿಕ. ಕನ್ನಡಕ್ಕೆ ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆಗಳನ್ನು ನೀಡಿ ಹೊಸಗನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಧೀಮಂತ ಸಾಹಿತಿ ಎಂದು ತಹಸೀಲ್ದಾರ್‌ ಸಿ.ಜಿ. ಗೀತಾ ತಿಳಿಸಿದರು.


 ಟಿ. ನರಸೀಪುರ (ಡಿ, 30):  ಕುವೆಂಪು ಅವರು ಮಾನವ ಕುಲಕ್ಕೆ ನೀಡಿದ ಮಾರ್ಗದರ್ಶನ ಆದರ್ಶಗಳು ಸಾರ್ವಕಾಲಿಕ. ಕನ್ನಡಕ್ಕೆ ಹೊಸ ನುಡಿಗಟ್ಟು ಹಾಗೂ ಹೊಸ ಕಲ್ಪನೆಗಳನ್ನು ನೀಡಿ ಹೊಸಗನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಧೀಮಂತ ಸಾಹಿತಿ ಎಂದು ತಹಸೀಲ್ದಾರ್‌ ಸಿ.ಜಿ. ಗೀತಾ ತಿಳಿಸಿದರು.

ಪಟ್ಟಣದ ಆಡಳಿತ ಸೌಧದ ನ್ಯಾಯಾಲಯ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಮಾನವ (Kuvempu)  ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುವೆಂಪು ಅವರ ಜಾತ್ಯತೀತ ಮನೋಭಾವದಿಂದ ಮೂಡಿಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ಬುದ್ಧ, ಬಸವಣ್ಣರ ಹಾಗೆ ಸಮಾಜದಲ್ಲಿ ವೈಜ್ಞಾನಿಕ ದೃಷ್ಟಿಕೋವನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಮಗು (Baby)  ಹುಟ್ಟುವಾಗ ವಿಶ್ವಮಾನವ, ಬೆಳೆಯುತ್ತಾ ಬುದ್ದನಾಗಿ ಬೆಳಯಬೇಕು ಎಂಬುದು ಕುವೆಂಪು ಅವರ ಆಶಯವಾಗಿತ್ತು ಎಂದರು.

Latest Videos

undefined

ವಿಶ್ವ ಮಾನವ ಸಂದೇಶ ಸರಳವಾಗಿದ್ದು ಮನುಜ ಕುಲ, ವಿಶ್ವ ಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಇವುಗಳ ಮೇಲೆ ನಿಂತಿದೆ. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯವಾಗಬಾರದು, ನೈತಿಕ ವ್ಯಕ್ತಿತ್ವದಿಂದ ಮುಖ್ಯವಾಗಬೇಕು ಎಂಬ ಪರಿಕಲ್ಪನೆ ಕುವೆಂಪು ಅವರದಾಗಿತ್ತು. ಹಾಗಾಗಿ ಕುವೆಂಪು ಅವರ ಜಾತ್ಯಾತೀತ ಮನೋಭಾವದಿಂದ ಮೂಡಿಬಂದ ಆಶಯವೇ ವಿಶ್ವಮಾನವ ಸಂದೇಶವಾಗಿದೆ. ನಾವೆಲ್ಲಲೂ ಅವರ ಆಶಯದಂತೆ ಬದುಕಬೇಕು ಎಂದು ಅವರು ಹೇಳಿದರು.

ಎಸ್‌ಐ ತಿರುಮಲ್ಲೇಶ್‌, ಶಿರಸ್ತೆದಾರ್‌ ಮಹದೇವನಾಯಕ, ಸಮಾಜ ಕಲ್ಯಾಣ ಅಧಿಕಾರಿ ರಾಮೇಗೌಡ, ಆಹಾರ ಇಲಾಖೆ ಶಿರಸ್ತೇದಾರ್‌ ಮಂಜುನಾಥ್‌, ಕಾರ್ಮಿಕ ಇಲಾಖೆ ನಿರೀಕ್ಷಕ ಗಂಗಾಧರ್‌, ನರೇಗಾ ಸಹಾಯಕ ನಿರ್ದೇಶಕ ಶಶಿಕುಮಾರ್‌, ಹಿಂದುಳಿದ ವರ್ಗ ಕಲ್ಯಾಣಾಧಿಕಾರಿ ವಿಶ್ವನಾಥ್‌, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್‌, ಪ್ರಭಾರ ಸಿಡಿಪಿಒ ಭವ್ಯಶ್ರೀ ಮೊದಲಾದವರು ಇದ್ದರು.

ಕವಿಶೈಲಕ್ಕೆ ಒಂದು ಕೋಟಿ ಬಿಡುಗಡೆ

  ರಾಷ್ಟ್ರಕವಿ ಕುವೆಂಪು ಹುಟ್ಟುಹಬ್ಬಕ್ಕೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಡಿಸೆಂಬರ್ 29ರ ಕುವೆಂಪು ಹುಟ್ಟುಹಬ್ಬದ ಆಚರಣೆ ಹಿನ್ನೆಲೆ ಒಂದು ದಿನ ಮೊದಲೇ ರಾಜ್ಯ ಸರ್ಕಾರ ಉಡುಗೊರೆ ನೀಡಿದೆ. ರಾಷ್ಟ್ರಕವಿ ಕುವೆಂಪು ಹುಟ್ಟಿದ ಕುಪ್ಪಳ್ಳಿ ಮನೆಗೆ ದುರಸ್ಥಿ ಮತ್ತು ಸುಣ್ಣ ಬಣ್ಣಕ್ಕಾಗಿ ಸರ್ಕಾರ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. 

ಕವಿಶೈಲ ಕುಪ್ಪಳ್ಳಿಯ ಆಯೋಗವು ರಾಷ್ಟ್ರಕವಿ ಕುವೆಂಪು ಅವರ ಮನೆಯ ದುರಸ್ಥಿ ಮತ್ತು ಸುಣ್ಣಬಣ್ಣ ಕಾಮಗಾರಿಗಾಗಿ ಹಣ ಕೇಳಿದ್ದು, ಆಯೋಗದ ಮನವಿಯ ಮೇರೆಗೆ ಒಂದು ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಮುಖ್ಯಮಂತ್ರಿಗಳ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಅನುದಾನ ಬಿಡುಗಡೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದ ಶಾಸಕ ಹಾಗೂ ರಾಜ್ಯದ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಮಹತ್ತರ ಪಾತ್ರ ವಹಿಸಿದ್ದಾರೆ. 

ರೋಹಿತ್‌ ಚಕ್ರತೀರ್ಥ ವಿರುದ್ಧ ಗೋ ಬ್ಯಾಕ್‌ ಚಳ​ವ​ಳಿಗೆ ಸಜ್ಜು

ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ನೇತೃತ್ವದಲ್ಲಿ ಪ್ರತಿಷ್ಠಾನದ ಸದಸ್ಯರು ಕಳೆದ ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಸಮ್ಮುಖದಲ್ಲಿ ಭೇಟಿಯಾಗಿ ಅನುದಾನ ಹೆಚ್ಚಿಸುವಂತೆ ಕೋರಿದ್ದರು. ಸಂಘ ಸಂಸ್ಥೆಗೆ ನೀಡುವಂತೆ ಪ್ರತಿ ವರ್ಷ ಸರ್ಕಾರ 5 ರಿಂದ 6 ಲಕ್ಷ ರೂ. ಹಣ ಬಿಡುಗಡೆ ಮಾಡುತ್ತಿತ್ತು. ಆದರೆ ಪ್ರತಿ ವರ್ಷ ಕವಿಶೈಲದ ನಿರ್ವಾಹಣಕ್ಕೆ 25 ರಿಂದ 30 ಲಕ್ಷ ರೂ. ವೆಚ್ಚ ತಗುಲುತ್ತಿತ್ತು. 

13 ಜನ ಕೆಲಸದವರು, ಕಲ್ಲಿನಿಂದ ನಿರ್ಮಿಸಿದ ನಾಡಹಂಚಿನ ಮಾದರಿಯ ಕಟ್ಟಡಗಳು ಇಲ್ಲಿವೆ. ಹೆಚ್ಚಿನ ಹಣ ಬಿಡುಗಡೆಗೆ ಆಗ್ರಹಿಸಿದ್ದರು. ಎರಡು ವರ್ಷಕ್ಕೊಮ್ಮೆ ಸುಣ್ಣಬಣ್ಣ ಹೊಡೆದರೂ ಸರ್ಕಾರದಿಂದ ಬರುವ  5 ರಿಂದ 6 ಲಕ್ಷದ ರೂ. ಸಾಕಾಗುತ್ತಿರಲಿಲ್ಲ. ಹಾಗಾಗಿ ಹೆಚ್ಚಿನ ಹಣ ಬಿಡುಗಡೆ ಮಾಡಲು ಗೃಹ ಮಂತ್ರಿ ಆರಗ ಜ್ಞಾನೇಂದ್ರ ಸಹಕಾರದೊಂದಿಗೆ ಕೋರಲಾಗಿತ್ತು. ಸರ್ಕಾರದಿಂದ ಉತ್ತರ ಬಂದಿದೆ. ಸರ್ಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಿದೆ. ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಕವಿಶೈಲಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. 

ಕೋಡಿಯಲ್ಲಿ ಕಡಲಾಮೆಯ ಮೊಟ್ಟೆಗಳ ರಕ್ಷಣೆಗೆ ವ್ಯಾಪಕ ಪ್ರಶಂಸೆ

ಈ ಬಾರಿ 35 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಕವಿಶೈಲದ ವೀಕ್ಷಣೆ ಮಾಡಿದ್ದಾರೆಂದು ಹೇಳಲಾಗಿದೆ.  ಕೊರೋನಾ ಸೋಂಕು ಬರುವ ಮೊದಲು  17 ರಿಂದ 20 ಸಾವಿರದಷ್ಟು ಪ್ರವಾಸಿಗರು ಪ್ರತಿ ಡಿಸೆಂಬರ್ ಗೆ ಬಂದು ಹೋಗುತ್ತಿದ್ದರು. ಈ ಬಾರಿ ಅದರ ಸಂಖ್ಯೆ 35 ಸಾವಿರಕ್ಕೆರಿದೆ. ಶಾಲಾ ಮಕ್ಕಳು ಅತಿಹೆಚ್ಚು ಬೇಟಿ ನೀಡಿದ್ದರಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂಬುದು ಕುವೆಂಪು ಪ್ರತಿಷ್ಠಾನದ ಮಾಹಿತಿ.

click me!